ಕೋಝಿಕ್ಕೋಡ್ | ರಕ್ತದೊತ್ತಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ(Indian Grand Mufthi) ಕಾಂತಪುರಂ ಎ.ಪಿ.ಉಸ್ತಾದರ ಆರೋಗ್ಯ ಸ್ಥಿತಿ ತೃಪ್ತಿಕರವಾಗಿ ಸುಧಾರಿಸುತ್ತಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಸಂಬಂಧಿಕರೊಂದಿಗೆ ಮಾತನಾಡಿದ್ದಾರೆ. ಅವರು ಈಗ ಚಿಕಿತ್ಸೆಗಾಗಿ ರಚಿಸಲಾದ ವಿಶೇಷ ವೈದ್ಯಕೀಯ ಮಂಡಳಿಯ ನಿಗಾದಲ್ಲಿದ್ದಾರೆ.ಸಂದರ್ಶಕರನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಸಂಪೂರ್ಣ ಗುಣಮುಖರಾಗಲು ಪ್ರಾರ್ಥನೆ ಮುಂದುವರಿಯಬೇಕು ಎಂದು ಮರ್ಕಝ್ ಅಧಿಕೃತರು ವಿನಂತಿಸಿದ್ದಾರೆ.