ಮುಹಿಯುದ್ದೀನ್ ಜುಮಾ ಮಸ್ಜಿದ್ ಕಣಿಯೂರು ಅಧೀನದಲ್ಲಿ ಬೃಹತ್ ಹುಬ್ಬುರ್ರಸೂಲ್ ಮಿಲಾದ್ ಕಾನ್ಫರೆನ್ಸ್ ಕಾರ್ಯಕ್ರಮವು ಅಕ್ಟೋಬರ್ 8ರಂದು ನಡೆಯಿತು.
ಸ್ಥಳೀಯ ಖತೀಬರಾದ ಮುಹಮ್ಮದ್ ಬಷೀರ್ ಲತೀಫಿಯವರು ದುಆ ನಿರ್ವಹಿಸಿದರು.ಜಮಾಅತ್ ಅಧ್ಯಕ್ಷರಾದ ಜಾಕಿರ್ ಹುಸೈನ್ ರವರು ಸ್ವಾಗತ ಕೋರಿದರು. ಸ್ಥಳೀಯ ಮುಹಝಿನ್ ಉಸ್ತಾದರಾದ ಲತೀಫ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮದರಸ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ (ಗಾಯನಸ್ಪರ್ಧೆ, ಪ್ರಸಂಗ, ಬುರ್ದಾ) ಕಾರ್ಯಕ್ರಮ ಜರುಗಿದವು.
ವೇದಿಕೆಯಲ್ಲಿ ಮಾಜಿ ಅಧ್ಯಕ್ಷರು ಅಬೂಬಕ್ಕರ್ ಟಿಂಬರ್, ಉಪಾಧ್ಯಕ್ಷರು ಅಬ್ದುಲ್ ರಝಾಕ್, ಕೋಶಾಧಿಕಾರಿ ಕಾಸಿಂ ಅಂಗಡಿ, ಕಾರ್ಯದರ್ಶಿ ಇಸ್ಮಾಯಿಲ್, ಯಂಗ್ ಮೆನ್ಸ್ ಅಧ್ಯಕ್ಷರು ಅಶ್ಫಾನ್, SSF ಅಧ್ಯಕ್ಷರು ಸುಹೈಲ್ ಕಣಿಯೂರು, ಮೀಲಾದ್ ಸಮಿತಿ ಸದಸ್ಯರಾದ ಹಾರಿಸ್, ಅಶ್ರಫ್, ಉಸ್ಮಾನ್, ಅಶ್ಫಕ್ ಕಣಿಯೂರ್,ಮುಸ್ತಾಫಾ ಬೆಂಗಳೂರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಷೀರ್ ಕೆ ಧನ್ಯವಾದ ಸಲ್ಲಿಸಿದರು. ಮಂಶೀರ್ ಕೆ.ಬಿ ಕಾರ್ಯಕ್ರಮವನ್ನು ನಿರೂಪಿಸಿದರು.






