janadhvani

Kannada Online News Paper

ಯುಎಇ: 73 ದೇಶಗಳ ನಾಗರಿಕರಿಗೆ ಆನ್ ಅರೈವಲ್ ವೀಸಾ ಸೌಲಭ್ಯ

ಭಾರತೀಯ ಪ್ರಜೆಗಳು ಕೆಲವು ಸಂದರ್ಭಗಳಲ್ಲಿ ಯುಎಇಯಲ್ಲಿ 14 ದಿನಗಳವರೆಗೆ ಮಾನ್ಯವಾದ ಆನ್ ಅರೈವಲ್ ವೀಸಾವನ್ನು ಪಡೆಯಬಹುದು.

ದುಬೈ: ಯುಎಇಗೆ ಭೇಟಿ ನೀಡಲು 73 ದೇಶಗಳ ನಾಗರಿಕರಿಗೆ ವೀಸಾ ಆನ್ ಅರೈವಲ್ ಸೌಲಭ್ಯ ಈಗ ಲಭ್ಯವಿದೆ. ದುಬೈನಲ್ಲಿರುವ ರೆಸಿಡೆನ್ಸಿ ಇಲಾಖೆ (General Directorate of Residency and Foreigners Affairs – GDRFA) ಮತ್ತು ಯುಎಇ ಮೂಲದ ವಿವಿಧ ವಿಮಾನಯಾನ ಸಂಸ್ಥೆಗಳು ಒದಗಿಸಿದ ಮಾಹಿತಿಯ ಪ್ರಕಾರ, ವಿವಿಧ ದೇಶಗಳ ನಾಗರಿಕರು 14 ದಿನಗಳಿಂದ 180 ದಿನಗಳ ಅವಧಿಯ ಆನ್-ಅರೈವಲ್ ವೀಸಾವನ್ನು ಪಡೆಯಬಹುದು.

30 ದಿನಗಳ ಆನ್ ಅರೈವಲ್ ವೀಸಾ
ಯುಎಇ ಪ್ರಸ್ತುತ 20 ದೇಶಗಳ ನಾಗರಿಕರಿಗೆ 30 ದಿನಗಳ ವೀಸಾಗಳನ್ನು ನೀಡುತ್ತದೆ. ಯುಎಇಗೆ ಬಂದಿಳಿದ ನಂತರ, ಅವರು ವಿಮಾನ ನಿಲ್ದಾಣದಲ್ಲಿ immigration ವಿಭಾಗವನ್ನು ಸಂಪರ್ಕಿಸಿ, ಪಾಸ್‌ಪೋರ್ಟ್‌ನಲ್ಲಿ ಉಚಿತವಾಗಿ ವೀಸಾ ಸ್ಟಾಂಪಿಂಗ್ ಮಾಡಿಸಬಹುದು.

30 ದಿನಗಳ ವೀಸಾ ಲಭ್ಯವಿರುವ ದೇಶಗಳೆಂದರೆ, ಅಂಡೋರಾ, ಆಸ್ಟ್ರೇಲಿಯಾ, ಬ್ರೂನಿ, ಕೆನಡಾ, ಚೀನಾ, ಹಾಂಗ್ ಕಾಂಗ್, ಜಪಾನ್, ಕಝಾಕಿಸ್ತಾನ್, ಮಕಾವು, ಮಲೇಷ್ಯಾ, ಮಾರಿಷಸ್, ಮೊನಾಕೊ, ನ್ಯೂಜಿಲೆಂಡ್, ಐರ್ಲೆಂಡ್, ಸ್ಯಾನ್ ಮರಿನೋ, ಸಿಂಗಾಪುರ್, ಉಕ್ರೇನ್, ಯುಕೆ – ಉತ್ತರ ಐರ್ಲೆಂಡ್, ಅಮೇರಿಕಾ, ವ್ಯಾಟಿಕನ್ ಸಿಟಿ.

90 ದಿನಗಳ ಆನ್ ಅರೈವಲ್ ವೀಸಾ
ಯುಎಇಯಲ್ಲಿ 90 ದಿನಗಳವರೆಗೆ ಮಾನ್ಯವಾಗಿರುವ ಆನ್ ಅರೈವಲ್ ಮಲ್ಟಿ ಎಂಟ್ರಿ ವೀಸಾವನ್ನು 53 ದೇಶಗಳ ನಾಗರಿಕರಿಗೆ ನೀಡಲಾಗುತ್ತದೆ.ಇದು ವೀಸಾ ನೀಡಿದ ದಿನಾಂಕದಿಂದ ಆರು ತಿಂಗಳವರೆಗೆ ಮಾನ್ಯವಾಗಿರುತ್ತದೆ. ಒಟ್ಟು 90 ದಿನಗಳ ಕಾಲ ದೇಶದಲ್ಲಿ ಉಳಿಯಬಹುದು.

90 ದಿನಗಳ ವೀಸಾ ಲಭ್ಯವಿರುವ ದೇಶಗಳು, ಅರ್ಜೆಂಟೀನಾ, ಆಸ್ಟ್ರಿಯಾ, ಬಹಾಮಾಸ್, ಬಾರ್ಬಡೋಸ್, ಬೆಲ್ಜಿಯಂ, ಬ್ರೆಜಿಲ್, ಬಲ್ಗೇರಿಯಾ, ಚಿಲಿ, ಕೊಲಂಬಿಯಾ, ಕೋಸ್ಟರಿಕಾ, ಕ್ರೊಯೇಷಿಯಾ, ಸೈಪ್ರಸ್, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಎಲ್ ಸಾಲ್ವಡಾರ್, ಎಸ್ಟೋನಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಹೊಂಡುರಾಸ್, ಹಂಗೇರಿ, ಐಸ್ಲ್ಯಾಂಡ್ , ಕಿರಿಬಾಟಿ, ಲಾಟ್ವಿಯಾ, ಲಿಚ್ಟೆನ್‌ಸ್ಟೈನ್, ಲಿಥುವೇನಿಯಾ, ಲಕ್ಸೆಂಬರ್ಗ್, ಮಾಲ್ಡೀವ್ಸ್, ಮಾಲ್ಟಾ, ಮಾಂಟೆನೆಗ್ರೊ, ನೌರು, ನೆದರ್‌ಲ್ಯಾಂಡ್ಸ್, ನಾರ್ವೆ, ಪರಾಗ್ವೆ, ಪೆರು, ಪೋಲೆಂಡ್, ಪೋರ್ಚುಗಲ್, ರೊಮೇನಿಯಾ, ರಷ್ಯಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್, ಸ್ಯಾನ್ ಮರಿನೋ, ಸರ್ಬಿಯಾ, ಸ್ಲೋವಿಯಾ ಸ್ಲೊವೇನಿಯಾ, ಸೊಲೊಮನ್ ದ್ವೀಪಗಳು, ದಕ್ಷಿಣ ಕೊರಿಯಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್ ಮತ್ತು ಉರುಗ್ವೆ.
ಈ ವೀಸಾ ಕೂಡ ಉಚಿತವಾಗಿದೆ.

180 ದಿನಗಳ ವೀಸಾ
ಮೆಕ್ಸಿಕನ್ ಪಾಸ್‌ಪೋರ್ಟ್ ಹೊಂದಿರುವವರು 180 ದಿನಗಳವರೆಗೆ ಯುಎಇಗೆ ಆಗಮಿಸಿದಾಗ ಬಹು ಪ್ರವೇಶ ವೀಸಾವನ್ನು ಪಡೆಯಬಹುದು. ವೀಸಾ ನೀಡಿದ ದಿನಾಂಕದಿಂದ ಆರು ತಿಂಗಳವರೆಗೆ ಮಾನ್ಯವಾಗಿರುತ್ತದೆ. ಒಟ್ಟು 180 ದಿನಗಳವರೆಗೆ ದೇಶದಲ್ಲಿ ಉಳಿಯಬಹುದು.

ಭಾರತೀಯರಿಗೆ 14 ದಿನಗಳ ವೀಸಾ
ಭಾರತೀಯ ಪ್ರಜೆಗಳು ಕೆಲವು ಸಂದರ್ಭಗಳಲ್ಲಿ ಯುಎಇಯಲ್ಲಿ 14 ದಿನಗಳವರೆಗೆ ಮಾನ್ಯವಾದ ಆನ್ ಅರೈವಲ್ ವೀಸಾವನ್ನು ಪಡೆಯಬಹುದು. ಭಾರತೀಯ ಪಾಸ್‌ಪೋರ್ಟ್ ಮತ್ತು ಯುಎಸ್‌ಎ ಅಥವಾ ಯುಕೆ ಯ ಗ್ರೀನ್ ಕಾರ್ಡ್ ಇಲ್ಲವೇ ಅಲ್ಲಿನ ವಿಸಿಟ್ ವೀಸಾ ಹೊಂದಿದ್ದರೆ ಯುಎಇಯಲ್ಲಿ 14 ದಿನಗಳವರೆಗೆ ಆಗಮನದ ವೀಸಾವನ್ನು ನೀಡಲಾಗುತ್ತದೆ. ಅವರ ಗ್ರೀನ್ ಕಾರ್ಡ್ ಮತ್ತು ವೀಸಾ ಯುಎಇಗೆ ಪ್ರವೇಶಿಸಿದ ದಿನಾಂಕದಿಂದ ಆರು ತಿಂಗಳವರೆಗೆ ಮಾನ್ಯವಾಗಿರಬೇಕು.

error: Content is protected !! Not allowed copy content from janadhvani.com