ಮಂಜನಾಡಿ:ಅಲ್-ಮದೀನಾ ದಅ್ ವಾ ಕಾಲೇಜ್ ವಿಧ್ಯಾರ್ಥಿ ಸಂಘಟನೆ ಬಿಶಾರತುಲ್ ಮದೀನಾ ವಿಧ್ಯಾರ್ಥಿ ಒಕ್ಕೂಟ ಹಾಗು ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಅಲ್-ಮದೀನಾ ಕ್ಯಾಂಪಸ್ ವತಿಯಿಂದ ಕಾಶ್ಮೀರದ ಗುಜ್ಜಾರ್ ಸಮುದಾಯದ 8 ವಯಸ್ಸಿನ ಕಂದಮ್ಮ ಆಸಿಫಾ ಬಾನುವಿನ ದಾರುಣ ಕೊಲೆಯ ವಿರುದ್ಧ ಪ್ರತಿಭಟನಾ ಸಭೆ ಏಪ್ರಿಲ್ 18 ರಂದು ಅಲ್-ಮದೀನಾ ಮಂಜನಾಡಿ ಕ್ಯಾಂಪಸ್ ಮುಂಭಾಗದಲ್ಲಿ ನಡೆಯಿತು.
ಆಸಿಫಾ ಬಾನು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ರಾಷ್ಟ್ರದ ಕಾವಲಾಳುಗಳಾದ ಪೊಲೀಸ್ ಅಧಿಕಾರಿಗಳೇ ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾಗುವುದು ಖೇದಕರ, 7 ದಿನಗಳ ಕಾಲ ಗಾಂಜಾ ಮಾದಕಗಳನ್ನು ನೀಡಿ ಅತ್ಯಾಚಾರ ಮಾಡಿ ದಾರುಣವಾಗಿ ನಡೆಸಿದ ಕೊಲೆ ಖಂಡನಾರ್ಹ, ಆಸಿಫಾಳನ್ನು ಕೊಂದ ಕ್ರೂರಿಗಳನ್ನು ಬಂಧಿಸಿ ನಮಗೆ ನ್ಯಾಯ ಕೊಡಿ ಎಂದು ಪ್ರತಿಭಟನಾ ಸಭೆ ಅಭಿಪ್ರಾಯ ವ್ಯಕ್ತಪಡಿಸಿತು.
BMSA ಸದಸ್ಯ ಅಲ್-ಮದೀನಾ ವಿಧ್ಯಾರ್ಥಿ ಸಅದ್ ಮೊಂಟುಗೋಳಿ ದಿಕ್ಸೂಚಿ ಭಾಷಣ ಮಾಡಿದರು.
BMSA ಉಪಾಧ್ಯಕ್ಷ ಸಯ್ಯದ್ ಸಾಹಿಲ್ ಅಲ್-ಹಾದಿ ಬಿಸಿರೋಡ್,ಕೋಶಾಧಿಕಾರಿ ಸಿದ್ದೀಕ್ ಎಮ್ಮೆಮಾಡ್ ಉಪಸ್ಥಿತಿ ಇದ್ದರು.
BMSA ಪ್ರ.ಕಾರ್ಯದರ್ಶಿ ಜುನೈದ್.ಟಿ ಇರಾ ಸ್ವಾಗತಿಸಿ ನೌಫಲ್ ಮಲಾರ್ ವಂಧಿಸಿದರು.