ಕಿನ್ಯಾ :SჄS ರಾಜ್ಯ ಸಮಿತಿ ತೀರ್ಮಾನದಂತೆ ರಾಜ್ಯಾದ್ಯಂತ ಎಲ್ಲಾ ಸೆಂಟರ್ ಗಳಲ್ಲಿ ಪವಿತ್ರ ಬಕ್ರೀದ್ ಹಬ್ಬದ ಪ್ರಯುಕ್ತ ನಡೆಯುವ ಈದ್ ಸ್ನೇಹ ಕೂಟವು ಕಿನ್ಯ ಸೆಂಟರ್ ನಲ್ಲಿ ಬಹಳ ಯಶಸ್ವಿಯಾಗಿ ವಿವಿಧ ಧರ್ಮದ ನಾಯಕರ ಸಂಗಮದಲ್ಲಿ ಸಯ್ಯಿದ್ ಇಬ್ರಾಹೀಂ ಬಾತಿಷಾ ತಂಙಳ್ ಅಲ್ ಬುಖಾರಿ ಆನೆಕಲ್ಲು ರವರ ಪ್ರಾರ್ಥನೆ ಯೊಂದಿಗೆ ಸೆಂಟರ್ ಸಮಿತಿ ಅಧ್ಯಕ್ಷ ಹಾಜಿ ಬಿ.ಎಂ ಇಸ್ಮಾಈಲ್ ಪರಮಾಂಡ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಆಹ್ವಾನಿಸಲ್ಪಟ್ಟ ವಿವಿಧ ಧರ್ಮದ ನಾಯಕರು ಭಾಗವಹಿಸಿ ನಮ್ಮ ನಾಡಿನ ಸೌಹಾರ್ದತೆ, ಪ್ರೀತಿ, ಸ್ನೇಹ ಎಂದಿಗೂ ಕೆಡದಂತೆ ನೋಡಿಕೊಂಡು ಬಹಳ ಅನ್ಯೋನ್ಯತೆಯಿಂದ ಬದುಕನ್ನು ಮುನ್ನಡೆಸುವ ಬಗ್ಗೆ ಮಾತುಗಳನ್ನಾಡಿದರು.



ಸೆಂಟರ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಈಲ್ ಸಾಗ್ ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸ್ವಾಗತಿಸಿ ಸಮಿತಿ ಕೈಗೊಂಡ ಧಾರ್ಮಿಕ,ಸಾಮಾಜಿಕ ಸೇವೆಗಳನ್ನು ಹೃಸ್ವವಾಗಿ ವಿವರಿಸಿದರು, ಕಿನ್ಯ ಕೇಂದ್ರ ಜುಮುಅ ಮಸ್ಜಿದ್ ಅಧ್ಯಕ್ಷ ಹಾಜಿ ಕೆ.ಸಿ ಇಸ್ಮಾಈಲ್ ಚಾಯರವಲಚ್ಚಿಲ್ ಸಭೆಯನ್ನು ಉದ್ಘಾಟಿಸಿದರು.
SჄS ದ.ಕ ವೆಸ್ಟ್ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ, ದ.ಕ ಜಿಲ್ಲೆ ಆಯುಷ್ ಇಲಾಖೆಯ ಅಧಿಕಾರಿ ಡಾ! ಮುಹಮ್ಮದ್ ಇಕ್ಬಾಲ್ ಕಿನ್ಯ,ಸಾಮಾಜಿಕ ಕಾರ್ಯಕರ್ತ ಶ್ರೀ ನಾರಾಯಣ ಪೂಜಾರಿ,ರೊನಾಲ್ಡ್ ಡಿಸೋಜ ಸಂಕೇಶ,ಕಿನ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಫೈಝಿ ಪಡ್ಪು,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್ ಪಾಲಡಿ,ಮಾಜಿ ಉಪಾಧ್ಯಕ್ಷ ಸಿರಾಜ್ ಕಿನ್ಯ,ಬೆಳರಿಂಗೆ ಮಹಮ್ಮಾಯಿ ಮಿತ್ರ ಮಂಡಲದ ಸಂಚಾಲಕ ಶ್ರೀ ರವಿ ಪೂಜಾರಿ,ಕಿನ್ಯ ಗ್ರಾಮ ಪಂಚಾಯತ್ ಸದಸ್ಯರಾದ ಫಾರೂಖ್ ಕಿನ್ಯ,ಇಸ್ಮಾಈಲ್ ಫಯಾಝ್ ಕಿನ್ಯ,ದುಬೈ ಸುನ್ನೀ ಸಂಘಟನೆಗಳ ನಾಯಕ ಇ.ಕೆ ಇಬ್ರಾಹೀಂ ಕುಂಞಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಕಿನ್ಯ ಕೇಂದ್ರ ಜುಮುಅ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ (ಕಾಯಿಂಞಿ) ಹಾಜಿ,ಕೋಶಾಧಿಕಾರಿ ಸಾದುಕುಂಞಿ (ಬಾವು) ಹಾಜಿ ಸಾಗ್,ಬೆಳರಿಂಗೆ ಖಿಳ್ರಿಯ್ಯಾ ಮಸ್ಜಿದ್ ಅಧ್ಯಕ್ಷ ಬಿ.ಎಂ ಇಬ್ರಾಹೀಂ ಕಿನ್ಯ,ಸೆಂಟರ್ ಸಮಿತಿ ಸಾಂತ್ವನ ಕಾರ್ಯದರ್ಶಿ ಎಂ.ಕೆ.ಎಂ ಇಸ್ಮಾಈಲ್ ಮೀಂಪ್ರಿ,ಸಾಮಾಜಿಕ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಸಾಮಣಿಗೆ,ಟೀಂ ಇಸಾಬ ಅಮೀರ್ ಅಬೂಬಕರ್ ಖುತುಬಿನಗರ,ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶ್ರೀ ಸೇಖರ ಮಾರ್ಲ,ಕಿನ್ಯ ಬೆಳರಿಂಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿದ್ದೀಖ್ ಕಲ್ಲಾಂಡ,ಕೇಂದ್ರ ಜುಮುಅ ಮಸ್ಜಿದ್ ಮುಅಝ್ಝಿನ್ ಇಕ್ಬಾಲ್ ಮುಸ್ಲಿಯಾರ್ ಮುಂತಾದವರು ಉಪಸ್ಥಿತರಿದ್ದರು.
ಸೆಂಟರ್ ಸಮಿತಿ ಉಪಾಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ಅಲ್ ಬುಖಾರಿ ತಂಙಳ್ ಕಿನ್ಯ ಶುಭ ಹಾರೈಸಿ ಮಾತಾಡಿ ಸಮಾರೋಪ ದುಆಗೆ ನೇತೃತ್ವ ವಹಿಸಿದರು,ಕಿನ್ಯ ಸೆಂಟರ್ ಸಮಿತಿ ಉಸ್ತುವಾರಿ ಫಾರೂಖ್ ತಲಪಾಡಿಯನ್ನು ಶಾಲು ಹೊದಿಸಿ ಸ್ವೀಕರಿಸಲಾಯಿತು,ಪ್ರತಿ ಬ್ರಾಂಚ್ ಸಮಿತಿ ನಾಯಕರು ಆಗಮಿಸಿದ ಗಣ್ಯ ಅತಿಥಿಗಳಿಗೆ ಹೂಗುಚ್ಛ ನೀಡಿ ಗೌರವಿಸಿದರು,ಸೆಂಟರ್ ಸಮಿತಿ ಕೋಶಾಧಿಕಾರಿ ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ ಕೊನೆಯಲ್ಲಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ