janadhvani

Kannada Online News Paper

ಉಮ್ಮರ್ ಕುಂಞಿ ಸಾಲೆತ್ತೂರ್ ರವರು ಜಿದ್ದಾದಲ್ಲಿ ನಿಧನ, ಅಂತ್ಯಕ್ರಿಯೆಗೆ ನೆರವಾದ ಕೆಸಿಎಫ್

ಈ ವರದಿಯ ಧ್ವನಿಯನ್ನು ಆಲಿಸಿ

ಕೆಸಿಎಫ್ ಜಿದ್ದಾ ಝೋನ್ ಅಧೀನದ ಶರಫಿಯ್ಯಾ ಸೆಕ್ಟರ್ ವ್ಯಾಪ್ತಿಯ ಬನೀಮಾಲಿಕ್ ಯುನಿಟಿನ ಸಕ್ರಿಯ ಕಾರ್ಯಕರ್ತ ಮುಹಮ್ಮದ್ ಉಮ್ಮರ್ ಕುಂಞಿ ಸಾಲೆತ್ತೂರ್ ರವರು ದಿನಾಂಕ 11-07-2022 ರಂದು ಕುಮ್ರಾದ ತನ್ನ ವಾಸಸ್ಥಾನದಲ್ಲಿ ಹ್ರದಯಾಘಾತದಿಂದ ಮರಣಹೊಂದಿದ್ದರು.

ವಿಷಯ ತಿಳಿದ ಕೆಸಿಎಫ್ ಜಿದ್ದಾ ಝೊನಲ್ ಸಾಂತ್ವನ ಇಲಾಖೆಯ ನೇತಾರರಾದ ನಾಸೀರ್ ಹೆಚ್ಕಲ್ ಮದೀನಾ ಝೋನಲ್ ನೇತಾರರಾದ ರಝಾಕ್ ಉಳ್ಳಾಲ ಮತ್ತು ಮ್ರತರ ಸಂಬಂಧಿ ರಫೀಕ್ ಕುಕ್ಕಾಜೆಯವರ ಸಹಕಾರದೊಂದಿಗೆ ಭಾರತೀಯ ರಾಯಭಾರಿ ಮತ್ತು ಆಸ್ಪತ್ರೆಯ ಎಲ್ಲಾ ದಾಖಲೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಯಶಸ್ವಿಯಾಗಿದ್ದಾರೆ.

ಅಲ್ಲಾಹನ ಅಪಾರವಾದ ಅನುಗ್ರಹದಿಂದ 13/07/2022 ರಂದು ಲುಹ್ರ್ ನಮಾಝ್ ಸಮಯಕ್ಕೆ ಜಿದ್ದಾದಲ್ಲಿರುವ ಬಾಬುಮಕ್ಕಾದ ಅಲ್ – ಅಸದ್ ಮಕ್ಬರದಲ್ಲಿ ಎಲ್ಲಾ ವಿಧಿವಿಧಾನಗಳೊಂದಿಗೆ ಸಯ್ಯಿದ್ ಅಬ್ದುರ್ರಹ್ಮಾನ್ ತಂಙಳ್ ಉಚ್ಚಿಲ, ಸಯ್ಯಿದ್ ನಾಫೀ ತಂಙಳ್ ನೂಜಿ, ಫಾರೂಕ್ ಸ಼ಅದಿ ಹೆಚ್ಕಲ್ ರವರ ನೇತೃತ್ವದಲ್ಲಿ ದಫನ ಕ್ರಿಯೆ ನಡೆಸಲಾಯಿತು.

ಕೆಸಿಎಫ್ ರಾಷ್ಟ್ರೀಯ ಸಮಿತಿಯ ನೇತಾರರು, ಜಿದ್ದಾ ಝೋನ್ ಸಮಿತಿಯ ನೇತಾರರು, ಸೆಕ್ಟರ್ ಮತ್ತು ಯುನಿಟ್ ಗಳ ನೇತಾರರು ಸೇರಿದಂತೆ ಹಲವಾರು ಕಾರ್ಯಕರ್ತರು ಧಫನ ಸಮಯದಲ್ಲಿ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com