ಪುತ್ತೂರು : ತಮ್ಮ ಧರ್ಮಪತ್ನಿಯೊಂದಿಗೆ ಪ್ರಸಕ್ತ ವರ್ಷ ಪವಿತ್ರ ಹಜ್ಜ್ ಯಾತ್ರೆ ಕೈಗೊಳ್ಳಲಿರುವ ಎಸ್‌ವೈಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿಯ ಸದಸ್ಯರಾದ ಬಿ. ಎಂ. ಅಬೂಬಕ್ಕರ್ ಮುಸ್ಲಿಯಾರ್ ನೀರಕಟ್ಟೆರವರನ್ನು ಎಸ್‌ವೈಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ಇತ್ತೀಚೆಗೆ ಉಪ್ಪಿನಂಗಡಿ ಪರಿಸರದ ಜೋಗಿಬೆಟ್ಟುವಿನಲ್ಲಿ ನಡೆದ ಜಿಲ್ಲಾ ಕಾರ್ಯಕ್ರಮದಲ್ಲಿ ಶಾಲು ಹೊದಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಸಅದಿ ಮಜೂರುರವರು ವಹಿಸಿದರು. ಹಿರಿಯ ಕರ್ನಾಟಕ ಜಂಇಯತುಲ್ ಉಲಮಾ ನಾಯಕರಾದ ಮುಹಮ್ಮದ್ ಸಅದಿ ವಳವೂರು ಉಸ್ತಾದ್ ಹಾಗೂ ಖಾಸಿಂ ಮದನಿ ಕರಾಯ ಉಸ್ತಾದರು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಎಸ್ ಎಂ ಎ ತಂಙಲ್ ಉಜಿರೆ, ಸಲಾಂ ತಂಙಲ್ ಬೆಳ್ತಂಗಡಿ, ಸಾದಾತ್ ತಂಙಲ್ ಕರ್ವೇಲ್, ಎಸ್‌ವೈಎಸ್ ರಾಜ್ಯ ಸಾಮಾಜಿಕ ಕಾರ್ಯದರ್ಶಿ ಕಾಸಿಂ ಪದ್ಮುಂಜ, ರಾಜ್ಯ ಇಸಾಬಾ ಡೈರೆಕ್ಟರ್ ಇಕ್ಬಾಲ್ ಬಪ್ಪಳಿಗೆ, ಜಿಲ್ಲಾ ಕೋಶಾಧಿಕಾರಿ ಜಿ. ಮುಹಮ್ಮದ್ ಕುಂಞಿ, ದಅ್‌ವಾ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ, ಸಂಘಟನಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಿಳಪದವು, ಸಾಮಾಜಿಕ ಕಾರ್ಯದರ್ಶಿ ಅಬ್ಬಾಸ್ ಮದನಿ, ಸಾಂತ್ವನ ಕಾರ್ಯದರ್ಶಿ ಸ್ವಾಲಿಹ್ ಮುರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು ಸ್ವಾಗತಿಸಿದರು. ಮಾಧ್ಯಮ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರು ಧನ್ಯವಾದಗೈದರು.