janadhvani

Kannada Online News Paper

ಮಾಣಿ ಸೆಂಟರ್ ಎಸ್‌ವೈ‌ಎಸ್ ನಿಂದ “ಫ್ಯಾಮಿಲಿ ಮೀಟ್’ ಕಾರ್ಯಕ್ರಮ

ಈ ವರದಿಯ ಧ್ವನಿಯನ್ನು ಆಲಿಸಿ

ಮಾಣಿ : ಎಸ್‌ವೈ‌ಎಸ್ ಮಾಣಿ ಸೆಂಟರ್ ಅಧೀನದಲ್ಲಿ ದಾರುಲ್ ಇರ್ಶಾದ್‌ನ ಮದ್ರಸ ಹಾಲ್ ನಲ್ಲಿ ಜೂನ್ 19 ಭಾನುವಾರದಂದು ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯರ ಫ್ಯಾಮಿಲಿ ಮೀಟ್ ಕಾರ್ಯಕ್ರಮವು ಸೆಂಟರ್ ಅಧ್ಯಕ್ಷರಾದ ಸುಲೈಮಾನ್ ಸಅದಿ ಪಾಟ್ರಕೋಡಿರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಹೈದರ್ ಸಖಾಫಿ ಶೇರಾ ದುಆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,ಮಾಣಿ ಸೆಂಟರ್ ಉಸ್ತುವಾರಿ ದ.ಕ. ಈಸ್ಟ್ ಜಿಲ್ಲಾ ಸದಸ್ಯರಾದ ಉಸ್ಮಾನ್ ಜೌಹರಿ ನೆಲ್ಯಾಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು,ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯರಾದ ಹಂಝ ಮದನಿ ಮಿತ್ತೂರು ಪ್ರಾಸ್ತಾವಿಕ ಮಾತನ್ನಾಡಿದರು,ಸೆಂಟರ್ ದಅವಾ ಕಾರ್ಯದರ್ಶಿ ಅಬ್ದುಲ್ ರಶೀದ್ ಸಖಾಫಿ ಶುಭ ಹಾರೈಸಿದರು,ಸೆಂಟರ್ ಅಧ್ಯಕ್ಷರಾದ ಸುಲೈಮಾನ್ ಸಅದಿ SჄS ನ ಗುರಿ ಹಾಗೂ ಮಹತ್ವ ಮತ್ತು ನಮಗಿರುವ ಬಾಧ್ಯತೆಗಳ ಕುರಿತು ಸಮಗ್ರವಾಗಿ ವಿವರಿಸುತ್ತಾ ಮುಖ್ಯ ಪ್ರಭಾಷಣ ಮಾಡಿದರು,

ವೇದಿಕೆಯಲ್ಲಿ ಎಸ್ ವೈಎಸ್ ಜಿಲ್ಲಾ ದ.ಕ. ಈಸ್ಟ್ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಯೂಸುಫ್ ಸಯೀದ್ ನೇರಳಕಟ್ಟೆ, ಸೆಂಟರ್ ಸಾಮಾಜಿಕ ಕಾರ್ಯದರ್ಶಿ ಅಬ್ಬಾಸ್ ಗಡಿಯಾರ, ಉಪಾಧ್ಯಕ್ಷರಾದ ಯೂಸುಫ್ ಹಾಜಿ ಸೂರಿಕುಮೇರು, ಸಂಘಟನಾ ಕಾರ್ಯದರ್ಶಿ ಹಬೀಬ್ ಶೇರಾ, ಇಸಾಬಾ ಅಮೀರ್ ಯಅಕೂಬ್ ನಚ್ಚಬೆಟ್ಟು, ಕೋಶಾಧಿಕಾರಿ ದಾವೂದ್ ಕಲ್ಲಡ್ಕ ಉಪಸ್ಥಿತರಿದ್ದರು.

ವಿಶೇಷವಾಗಿ ಕಾರ್ಯಕ್ರಮವು ಫ್ಯಾಮಿಲಿ ಮೀಟ್ ಆಗಿದ್ದರಿಂದ ಸೆಂಟರ್ ಕಾರ್ಯಕಾರಿ ಸಮಿತಿಯ ಸದಸ್ಯರ ಪತ್ನಿಯರು ಆಗಮಿಸಿದ್ದರು ಮತ್ತು ಅವರಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆಯನ್ನು ಮಾಡಲಾಗಿತ್ತ,ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಸಖಾಫಿ ಸೂರ್ಯ, ಹನೀಫ್ ಸಖಾಫಿ ಪೇರಮೊಗರು, ಖಾಸಿಂ ಮುಸ್ಲಿಯಾರ್ ಸೂರ್ಯ, ಇಬ್ರಾಹಿಂ ಬಂಗಾರಬೆಟ್ಟು ಅಬ್ದುಲ್ ಲತೀಫ್ ಸಅದಿ ಶೇರಾ ಅಬ್ದುಲ್ ಕರೀಂ ನೆಲ್ಲಿ ಸೋರಿಕುಮೇರು ಭಾಗವಹಿಸಿದ್ದರು.ಸೆಂಟರ್ ಪ್ರಧಾನ ಕಾರ್ಯದರ್ಶಿ ಸಾದಿಕ್ ಪೇರಮೊಗರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು,ಸಾಂತ್ವನ ಕಾರ್ಯದರ್ಶಿ ಸುಲೈಮಾನ್ ಸೂರಿಕುಮೇರು ವಂದಿಸಿದರು.

error: Content is protected !! Not allowed copy content from janadhvani.com