janadhvani

Kannada Online News Paper

SჄS ಕಿನ್ಯ ಸೆಂಟರ್: ಜ್ಞಾನ ದಾಹಿಗಳ ಸಂಗಮದಲ್ಲಿ “ತಾಜುಲ್ ಫುಖಹಾಅ್ ದರ್ಸ್” ಗೆ ವಿಧ್ಯುಕ್ತ ಚಾಲನೆ

ಉಳ್ಳಾಲ: SჄS ಕಿನ್ಯ ಸೆಂಟರ್ ಸಮಿತಿ ಆಯೋಜಿಸಿದ್ದ ತಾಜುಲ್ ಫುಖಹಾಅ್ ದರ್ಸ್ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಸೆಂಟರ್ ಕಚೇರಿಯಲ್ಲಿ ನಡೆಯಿತು.

ಧಾರ್ಮಿಕ ಅರಿವಿನ ಅನಿವಾರ್ಯತೆ ಮತ್ತು ಶೈಖುನಾ ಮರ್ಹೂಂ ಬೇಕಲ್ ಉಸ್ತಾದ್ ರವರ ಜ್ಞಾನದ ಆಳವನ್ನು ಸಭಿಕರಿಗೆ ಮನಮುಟ್ಟುವಂತೆ ಮಾತನಾಡಿ SჄS ದ.ಕ ವೆಸ್ಟ್ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ಉಸ್ತಾದ್ ರವರು ಪವಿತ್ರ ಖುರ್’ಆನಿನ ‘ಅಲ್ ಫಾತಿಹಾಃ’ ಅಧ್ಯಾಯವನ್ನು ಓದಿ ಕೊಡುವ ಮೂಲಕ ವಿಧ್ಯುಕ್ತವಾಗಿ ಉದ್ಘಾಟಿಸಿದರು.

ಸೆಂಟರ್ ಸಮಿತಿ ಅಧ್ಯಕ್ಷರಾದ ಹಾಜಿ ಬಿ. ಎಂ ಇಸ್ಮಾಈಲ್ ಪರಮಾಂಡ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಉಪಾಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ಅಲ್ ಬುಖಾರಿ ತಂಙಳ್ ಕಿನ್ಯ ದುಆ ನಡೆಸಿದರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಈಲ್ ಸಾಗ್ ಸಮಾವೇಶದಲ್ಲಿ ಆಗಮಿಸಿದ ಗಣ್ಯರು ಹಾಗೂ ಸಭಿಕರಿಗೆ ಸ್ವಾಗತ ಕೋರಿದರು. ಮುನ್ನುಡಿ ಭಾಷಣ ಮಾಡಿದ ದಅ್’ವಾ ಕಾರ್ಯದರ್ಶಿ ಹನೀಫ್ ಸಖಾಫಿ ಖುತುಬಿನಗರ ಧಾರ್ಮಿಕ ತರಗತಿಗಳನ್ನು ಅತ್ಯಂತ ಯಶಸ್ವಿ ಯಾಗಿ ಮುನ್ನಡೆಸುವಂತೆ ಕರೆ ನೀಡಿದರು.

ಉಡುಪಿ ಜಿಲ್ಲಾ ಉಲಮಾ ಒಕ್ಕೂಟದ ಅಧ್ಯಕ್ಷ ಅಶ್ರಫ್ ಸಖಾಫಿ ಸಂದೇಶ ಭಾಷಣ ಮಾಡಿ ಜ್ಞಾನ ಸಂಪಾದನೆಯು ಇತರ ಸರ್ವ ಸತ್ಕರ್ಮಕ್ಕಿಂತಲೂ ಮಿಗಿಲು,ಆದ್ದರಿಂದ ಎಲ್ಲರೂ ಅರಿವು ಸಂಪಾದನೆಯಲ್ಲಿ ಸಕ್ರಿಯರಾಗಲು ತಿಳಿಸಿದರು.

ಸುನ್ನೀ ಸಂಘ-ಸಂಸ್ಥೆಗಳ ಮುಂಚೂಣಿ ನಾಯಕ ಕೆ.ಎಂ ಇಬ್ರಾಹೀಂ ಹಾಜಿ ಖುತುಬಿನಗರ,SჄS ರಾಜ್ಯ ಸಮಿತಿ ನಾಯಕ ಕೆ.ಎಚ್ ಇಸ್ಮಾಈಲ್ ಸಅದಿ ಕಿನ್ಯ,ಕೆಸಿಎಫ್ ನಾಯಕ ಇಬ್ರಾಹೀಂ ಕುರಿಯ,ಸೆಂಟರ್ ಸೋಶಿಯಲ್ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಸಾಮಣಿಗೆ,ಖುತುಬಿನಗರ ಬ್ರಾಂಚ್ ಅಧ್ಯಕ್ಷ ಅಬೂಸ್ವಾಲಿಅ್,ರಹಮತ್ ನಗರ ಅಧ್ಯಕ್ಷ ಅಬ್ದುಲ್ ಅಝೀಝ್ ಕಜೆ,ಕುರಿಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಷೀರ್ ಲತೀಫಿ,ಬೆಳರಿಂಗೆ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಕೆ.ಐ ಮುಹಮ್ಮದ್ ಹನೀಫ್ ಸ್ಟೋರ್,ಬದ್ರಿಯ್ಯಾನಗರ ಸಮಿತಿ ಅಧ್ಯಕ್ಷ ಕೆ.ಎಚ್ ಮೂಸಕುಂಞಿ,ಮೀಂಪ್ರಿ ಬ್ರಾಂಚ್ ಅಧ್ಯಕ್ಷ ಆಲಿಕುಂಞಿ,ಉಕ್ಕುಡ ಸಮಿತಿ ಅಧ್ಯಕ್ಷ ಮುಹಮ್ಮದ್ ಹಸನ್ ಮುಂತಾದವರು ಉಪಸ್ಥಿತರಿದ್ದರು,ಸೆಂಟರ್ ಸಮಿತಿ ಕೋಶಾಧಿಕಾರಿ ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ ಕೊನೆಯಲ್ಲಿ ವಂದಿಸಿದರು.

error: Content is protected !! Not allowed copy content from janadhvani.com