janadhvani

Kannada Online News Paper

ಮಾಜಿ ಮೇಯರ್ ಕೆ.ಅಶ್ರಫ್ ಮತ್ತೆ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭ ಯು.ಟಿ.ಖಾದರ್ ವಿರುದ್ದ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು

ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ದ ಹಾಲಿ ಅಧ್ಯಕ್ಷರಾಗಿರುವ ಮಾಜಿ ಮೇಯರ್ ಕೆ.ಅಶ್ರಫ್ ರವರು ತಮ್ಮ ದೀರ್ಘ ರಾಜಕೀಯ ಮಧ್ಯಂತರದ ನಂತರದಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಸಾಧ್ಯತೆ ಕಾಣಿಸಿ ಕೊಳ್ಳುತ್ತಿದೆ. ಇತ್ತೀಚೆಗೆ ಕೆ.ಅಶ್ರಫ್ ರವರು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರೊಂದಿಗಿನ ಅವರ ನಿರಂತರ ಸಂಪರ್ಕ ಅವರ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಸಾಧ್ಯತೆಯನ್ನು ಪುಷ್ಟಿ ಗೊಳಿಸುತ್ತದೆ.

ಕಳೆದ ಐದು ವರ್ಷಗಳ ಹಿಂದೆ ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತ ವಿಭಾಗದ ಉಪಾಧ್ಯಕ್ಷರಾಗಿದ್ದ, ಕೆ.ಅಶ್ರಫ್ ಮಾಜಿ ಮೇಯರ್ ರವರನ್ನು ಅಂದು ಆಡಳಿತದಲ್ಲಿ ಇದ್ದ ಕಾಂಗ್ರೆಸ್ ಪಕ್ಷವು ನಿಖರ ಕಾರಣ ರಹಿತವಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಿರಹಿತಗೊಳಿಸಿತ್ತು.

ಜಿಲ್ಲೆಯಲ್ಲಿ ಒಂದು ನಿರ್ಧಿಷ್ಟ ರಾಜಕೀಯ ಪಕ್ಷದ ಸದಸ್ಯರಾಗಿದ್ದ ಅಹ್ಮದ್ ಖುರೇಶಿ ಎಂಬವರಿಗೆ ಮಂಗಳೂರು ಪೊಲೀಸರು ದೌರ್ಜನ್ಯ ವೆಸಗಿದ ಪ್ರಕರಣದಲ್ಲಿ ಜಿಲ್ಲೆಯಲ್ಲಿ ಪೋಲೀಸ್ ವ್ಯವಸ್ಥೆ ಮತ್ತು ಸರಕಾರದ ವಿರುದ್ಧ ಮಂಗಳೂರು ಚಲೋ ಬೃಹತ್ ರ್ಯಾಲಿ ಆಯೋಜನೆ, ಸುವರ್ಣ ನ್ಯೂಸ್ ಆ್ಯಂಕರ್ ಅಜಿತ್ ಹನುಮಕ್ಕನವರ್ ನ ಪ್ರವಾದಿ ನಿಂದನೆ ಹೇಳಿಕೆ ವಿರುದ್ಧದ ಮಂಗಳೂರಿನ ಬೃಹತ್ ಪ್ರತಿಭಟನೆ ಇತ್ಯಾದಿ ವಿಷಯಗಳಲ್ಲಿ ಕೆ.ಅಶ್ರಫ್ ನೇತೃತ್ವ ಮತ್ತು ಆಡಳಿತಾ ರೂಢ ಕಾಂಗ್ರೆಸ್ ಅನ್ನು ಎದುರು ಹಾಕಿ ಕೊಳ್ಳುವಿಕೆ ಕಾರಣದಿಂದ ಕೆ.ಅಶ್ರಫ್ ಪಕ್ಷದ ಸದಸ್ಯತ್ವದಿಂದ ವಿರಹಿತ ಹೊಂದಲು ಕಾರಣವಾಗಿತ್ತು.

ಮುಂದುವರಿದು,ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭ ಕೆ.ಅಶ್ರಫ್,ಜಿಲ್ಲೆಯ ಪ್ರಮುಖ ವಿಧಾನ ಸಭಾ ಕ್ಷೇತ್ರವಾದ ಮಂಗಳೂರು ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖ ಮುತ್ಸದ್ದಿ ರಾಜಕಾರಣಿ ಎಂದೇ ಕರೆಯಲ್ಪಡುವ, ಮಾಜಿ ಸಚಿವರು ಆದ ಶ್ರೀ ಯು.ಟಿ.ಖಾದರ್ ವಿರುದ್ದ ಚುನಾವಣೆಯಲ್ಲಿ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.ಆನಂತರ ಮಂಗಳೂರು ಮಹಾ ನಗರ ಪಾಲಿಕೆ ಮಂಗಳೂರು ತೋಟ ವಾರ್ಡ್ ನಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಲತೀಫ್ ವಿರುದ್ದ ಕೂಡಾ ಪರಾಜಯ ಹೊಂದಿದ್ದರು.

ಇತ್ತೀಚಿನ ವರ್ಷಗಳಲ್ಲಿ ಕೆ.ಅಶ್ರಫ್ ಹತ್ತು ಹಲವು ಸಾಮುದಾಯಿಕ ವಿಷಯಗಳ ನೇತೃತ್ವ ವಹಿಸಿ ವಿವಿಧ ಕ್ಲಿಷ್ಟಕರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಪ್ರಯತ್ನಿಸಿ ಜನ ಮನ್ನಣೆ ಪಡೆದಿದ್ದರು. ವಿವಿಧ ರಾಜಕೀಯ ಪಕ್ಷದಿಂದ ಕೆ.ಅಶ್ರಫ್ ರವರಿಗೆ ಪ್ರಾತಿನಿಧ್ಯ ಆಹ್ವಾನವಿದ್ದರೂ,ತಮ್ಮ ರಾಜಕೀಯ ಚಟುವಟಿಕೆಗಳ ಮಧ್ಯೆ ಅಂತರ ಕಾಯ್ದುಕೊಂಡಿದ್ದರು. ಪ್ರಸ್ತುತ ಕೆ.ಅಶ್ರಫ್ ಪ್ರಮುಖ ಪ್ರಭಾವಿ ಕಾಂಗ್ರೆಸ್ ನಾಯಕರೊಂದಿಗಿನ ಅವರ ಸಂಪರ್ಕ ಮತ್ತು ಕಾಂಗ್ರೆಸ್ ಚಟುವಟಿಕೆಗಳಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಅವರ ಕಾಂಗ್ರೆಸ್ ಸೇರ್ಪಡೆಯನ್ನು ಖಚಿತ ಪಡಿಸುವಂತಾಗಿದೆ.

error: Content is protected !! Not allowed copy content from janadhvani.com