ರಾಜ್ಯ ಸರ್ಕಾರದ ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಆದ ಅನ್ಯಾಯದ ವಿರುದ್ಧ ಬೆಂಗಳೂರಿನಲ್ಲಿ ನಡೆಯುವ ಶಾಂತಿಯುತ ಪ್ರತಿಭಟನೆ ಯನ್ನು SSF ರಾಜ್ಯ ಸಮಿತಿ ಸಂಪೂರ್ಣವಾಗಿ ಬೆಂಬಲಿಸಲು SSF ರಾಜ್ಯಾಧ್ಯಕ್ಷರಾದ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ನಾಳೆಯ ನಿರೀಕ್ಷೆಗಳಾದ ವಿದ್ಯಾರ್ಥಿಗಳಿಗೆ ಪಠ್ಯದ ಮೂಲಕ ವಿಷವುಣ್ಣಿಸುವ ಹುನ್ನಾರ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ನಡೆದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ನಡೆಸಿದೆ.ಈ ಅಕ್ಷಮ್ಯ ಅಪರಾಧವನ್ನು ಸರ್ಕಾರ ಹಗುರವಾಗಿ ಕಂಡಿದ್ದು ಆತಂಕಕಾರಿ.ಇದರ ವಿರುದ್ಧ ಧರ್ಮ, ಜಾತಿ,ಪಕ್ಷ ಭೇದ ಮನ್ಯೆ ಸಂವಿಧಾನ ಪ್ರ್ರೇಮಿಗಳು ಜೊತೆಯಾಗಿ ಧ್ವನಿ ಎತ್ತಿರುವುದು ಆಶಾದಾಯಕ ಮತ್ತು ಅಭಿನಂದನಾರ್ಹ ವಾಗಿದೆ.
ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಇದೇ ಬರುವ 18ರಂದು ನಡೆಯುವ ಹೋರಾಟದಲ್ಲಿ SSF ಕ್ಯಾಂಪಸ್ ವಿದ್ಯಾರ್ಥಿಗಳು ಸಹಭಾಗಿಯಾಗಲಿದ್ದಾರೆ ಎಂದು ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಶರಿಫ್ ಹೊಸದೋಟ ಪ್ರಸ್ತಾಪಿಸಿದರು. SSFರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಸ್ವಾಗತಿಸಿ, ವಂದಿಸಿದರು.