janadhvani

Kannada Online News Paper

ಅಲ್ ಕಸೀಮ್ ವಾಹನ ಅಪಘಾತದಲ್ಲಿ ಮರಣ ಹೊಂದಿದ ಮಗುವಿನ ಅಂತ್ಯಕ್ರಿಯೆಗೆ ಸಹಕರಿಸಿದ KCF

ಬುರೈದ : ದಿನಾಂಕ 11-06-2022 ರಂದು ಉಯುನ್ ಅಲ್ ಜವ ದಲ್ಲಿ ದೇರಳಕಟ್ಟೆ ನಿವಾಸಿ ಇಲ್ಯಾಸ್ ಮತ್ತು ಕುಟುಂಬ ಸಂಚರಿಸುತ್ತಿದ್ದ ವಾಹನ ಪಲ್ಟಿಯಾಗಿ ಅವರ 2 ವರ್ಷ ಪ್ರಾಯದ ಮಗು ಮುಹಮ್ಮದ್ ಸಾದಿನ್ ಸ್ಥಳದಲ್ಲೇ ಮೃತಪಟ್ಟಿತು. ಒಟ್ಟು 6 ಜನರಲ್ಲಿ ಪತ್ನಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿಸ್ಥೆ ಪಡೆಯುತ್ತಿದ್ದಾರೆ.

ಉಳಿದವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅಪಘಾತ ಸುದ್ದಿ ತಿಳಿದು ಬುರೈದ ಕರ್ನಾಟಕ ಕಲ್ಚರಲ್ ಫೌಂಡೇಶನ್
(KCF )ನಾಯಕರು ಆಸ್ಪತ್ರೆಗೆ ಧಾವಿಸಿ ಅಗತ್ಯ ನೆರವು ನೀಡಿದರು.

ಮೃತ ಮಗುವಿನ ಅಂತ್ಯಕ್ರಿಯೆಗೆ ಬೇಕಾದ ದಾಖಲೆಗಳನ್ನು Riyad indian emabassy ಸರಿಪಡಿಸಿ ದಿನಾಂಕ 14-06-2022 ರಂದು ಕಿಂಗ್ ಫಹದ್ ಜುಮಾ ಮಸ್ಜಿದ್ ಯಲ್ಲಿ ಮಯ್ಯತ್ ನಮಾಜ್ ನಿರ್ವಹಿಸಿ ಸ್ಥಳೀಯ ಖಬರ್ ಸ್ಥಾನದಲ್ಲಿ ಮಗುವಿನ ಅಂತ್ಯಕ್ರಿಯೆಯನ್ನು ನಡೆಸಲಾಯಿತು. ಇದರಲ್ಲಿ KCF ಬುರೈದ ಸೆಕ್ಟರ್ ಕಾರ್ಯಕರ್ತರು , ಇಲ್ಯಾಸ್ ಕುಟುಂಬಸ್ಥರು , ಸ್ನೇಹಿತರು , ಬಂದು ಮಿತ್ರರು ಸ್ಥಳೀಯರು ಪಾಲ್ಗೊಂಡರು.

ವರದಿ : ಸಾಂತ್ವನ ಇಲಾಖೆ
KCF ಬುರೈದ ಸೆಕ್ಟರ್

error: Content is protected !! Not allowed copy content from janadhvani.com