janadhvani

Kannada Online News Paper

ಕೊಡಗು ಸುನ್ನಿ ವೆಲ್ಫೇರ್ ದಮ್ಮಾಮ್ ಝೋನಲ್: ನೂತನ ಸಾರಥಿಗಳು

ದಮ್ಮಾಮ್: ಕೊಡಗು ಸುನ್ನಿ ಅನಿವಾಸಿಗಳ ಆಶಾ ಕೇಂದ್ರ, ಕೊಡಗಿನ ಅನಿವಾಸಿಗಳ ಹೆಮ್ಮೆಯ ಸಂಘಟನೆ ಕೊಡಗು ಸುನ್ನಿ ವೆಲ್ಫೇರ್ ದಮ್ಮಾಮ್ ಝೋನಲಿನ ವಾರ್ಷಿಕ ಸಭೆಯು ನಿಝಾಂ ಅಂಬಟ್ಟಿ’ರವರ ನಿವಾಸದಲ್ಲಿ ಝೋನ್ ಅಧ್ಯಕ್ಷರಾದ ಆಬಿದ್ ಝುಹ್ರಿ ಚೇರಂಬಾಣೆ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಹಮ್ಮದ್ ಸಖಾಫಿ ಕೊಟ್ಟಮುಡಿ’ರವರು ಉದ್ಘಾಟಿಸಿ, KSWA ಸೌದಿ ಅರೇಬಿಯ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹಂಸ ಉಸ್ತಾದ್ ಚೋಕಂಡಳ್ಳಿ ವಿಷಯ ಮಂಡಿಸಿದರು.

ಅಧ್ಯಕ್ಷರ ಭಾಷಣದ ನಂತರ ಹೊಸ ಸಮಿತಿಯನ್ನು ರಚಿಸಲಾಯಿತು.

ಸಲಹಾ ಸಮಿತಿ ಚೆಯರ್ಮೇನ್
ಆಬಿದ್ ಝುಹ್ರಿ ಚೇರಂಬಾಣೆ
ಸಲಹಾ ಸಮಿತಿ ಸದಸ್ಯರು
ಇಸ್ಹಾಕ್ ಮಿಸ್ಬಾಹಿ ಕೊಟ್ಟಮುಡಿ
ಆಬಿದ್ ಕಂಡಕ್ಕರೆ
ಶಾಫಿ ಝೈನಿ ಸೋಮವಾರಪೇಟೆ

ಅಧ್ಯಕ್ಷರು: ನಿಝಾಂ ಅಂಬಟ್ಟಿ

ಪ್ರ.ಕಾರ್ಯದರ್ಶಿ: ಮಿನ್ಹಾಝ್ ನೆಲ್ಲಿಹುದಿಕೇರಿ

ಖಜಾಂಚಿ: ಆದಂ ಕಂಡಕ್ಕರೆ

ವರ್ಕಿಂಗ್ ಸೆಕ್ರಟರಿ: ಅಬೂಬಕರ್ ಎಮ್ಮೆಮಾಡು

ರಿಲೀಫ್ ಬೋರ್ಡ್ ಚೆಯರ್ಮ್ಯಾನ್:
ಅಹ್ಮದ್ ಹಾಕತೂರು
ಕಾರ್ಯದರ್ಶಿ: ಸಮದ್ ಕೊಟ್ಟಮುಡಿ

ಸಂಘಟನಾಧ್ಯಕ್ಷರು: ತನ್ವೀರ್ ಕುಶಾಲನಗರ
ಕಾರ್ಯದರ್ಶಿ: ಹನೀಫ ಶನಿವಾರಸಂತೆ
ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು.

ರಾಷ್ಟ್ರೀಯ ಸಮಿತಿ ವರ್ಕಿಂಗ್ ಸೆಕ್ರಟರಿ ಷಂಸು ತಕ್ಕಪ್ಪಳ್ಳಿ ನೂತನ ಸಮಿತಿ ಆಯ್ಕೆ ಪ್ರಕ್ರಿಯೆಗೆ ನೇತ್ರತ್ವ ವಹಿಸಿದರು.
ನಂತರ ರಾಷ್ಟ್ರೀಯ ಸಮಿತಿ ನೇತಾರರಿಂದ ಹೆಲ್ತ್ ಕಾರ್ಡ್ ವಿತರಣೆ ಮತ್ತು 2022/24ರ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕ್ಕರೆ ಸ್ವಾಗತಿಸಿಸುತಾ ಸಂಘಟನೆಯ ಮೂರು ವರ್ಷಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಸವಿಸ್ತರವಾಗಿ ವಿವರಿಸಿದರು.
ರಾಷ್ಟ್ರೀಯ ಸಮಿತಿ ಸಲಹ ಸಮಿತಿ ಸದಸ್ಯರಾದ ರಫೀಕ್ ತಙಳ್ ಮಾಲ್ದಾರೆ ಮತ್ತು ಜಾಬಿರ್ ಮಾಸ್ಟರ್ ರಿಯಾದ್ ಶುಭ ಹಾರೈಸಿದರು.

ಕೊನೆಯಲ್ಲಿ ಮಿನ್ಹಾಝ್ ನೆಲ್ಲಿಹುದಿಕೇರಿ ವಂದಿಸಿದರು.

error: Content is protected !! Not allowed copy content from janadhvani.com