janadhvani

Kannada Online News Paper

ಸೌದಿ ಕೆ.ಸಿ.ಎಫ್ ನ “ಪ್ರವಾಸಿ ಸೌರಭ” ಪುಸ್ತಕ ಬಿಡುಗಡೆ ಸಮಾರಂಭ

ರಿಯಾದ್: ಕರ್ನಾಟಕ ಕಲ್ಚರಲ್ ಪೌಂಡೇಶನ್ ಸೌದಿ ಅರೆಬಿಯಾ ಹೊರತಂದ ಪ್ರವಾಸಿ ಸೌರಭ ಸ್ಮರಣ ಸಂಚಿಕೆಯನ್ನು ಅಪೋಲೋ ದೊಮೊರೋ ಸಭಾಂಗಣದಲ್ಲಿ ಸೌದಿ ಅರೇಬಿಯಾ ಕೆ,ಸಿ.ಎಫ್ ನ ನಿಕಟ ಪೂರ್ವ ಅಧ್ಯಕ್ಷ
ಹಾಗೂ ಸ್ಮರಣಿಕೆಯ ಮುಖ್ಯ ಸಂಪಾದಕ ಡಿ.ಪಿ ಯೂಸುಫ್ ಸಖಾಫಿ ಬೈತಾರ್ ಬಿಡುಗಡೆ ಗೊಳಿಸಿದರು.

ಉದ್ಯಮಿ ಎನ್ ಎಸ್ ಅಬ್ದುಲ್ಲಾ ಹಾಜಿ ಸ್ಮ್ರರಣಿಕೆ ಸ್ವೀಕರಿಸಿದರು.
ಸಮಾರಂಭದಲ್ಲಿ ಕೆ.ಸಿ.ಎಪ್ ರಾಷ್ಟ್ರೀಯ ನೇತಾರರಾದ ಅಬ್ದುಲ್ ಸಲಾಮ್ ಎನ್ಮೂರು,ಅಶ್ರು ಬಜ್ಪೆ, ಅಬೂಬಕರ್ ಹಾಜಿ ರೈಸ್ಕೋ, ನಝೀರ್ ಹಾಜಿ ಕಾಶಿಪಟ್ನ, ಸಾಲಿ ಬೆಳ್ಳಾರೆ, ಮುಹಮ್ಮದ್ ಕಲ್ಲರ್ಬೆ, ಸಿದ್ದೀಕ್ ಸಖಾಫಿ ಪುರುವಾಯಿ ಕೆ,ಸಿ.ಎಫ್ ಅಂತರಾಷ್ತ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಗೂಡಿನ ಬಳಿ ಭಾಗವಹಿಸಿದ್ದರು.