janadhvani

Kannada Online News Paper

ಸೌದಿ: ಇಖಾಮಾ ವೃತ್ತಿ ಬದಲಾವಣೆ- ಎಂಟು ವಿಭಾಗಕ್ಕೆ ಮೊದಲ ಬಾರಿಗೆ ಉಚಿತ

ವೃತ್ತಿಯನ್ನು ಬದಲಾಯಿಸಲು ಕೆಲಸಗಾರನ ಒಪ್ಪಿಗೆ ಪಡೆಯುವ ಪದ್ಧತಿಯನ್ನೂ ಈ ವೃತ್ತಿಗಳಲ್ಲಿ ರದ್ದುಗೊಳಿಸಲಾಗಿದೆ

ರಿಯಾದ್: ವಿದೇಶಿ ಉದ್ಯೋಗಿಗಳಿಗೆ ಇಖಾಮಾ ವೃತ್ತಿಯನ್ನು ಬದಲಾಯಿಸಲು ವಿಧಿಸಲಾದ 2,000 ರಿಯಾಲ್ ಶುಲ್ಕವು ಮೊದಲ ಬಾರಿಗೆ ಉಚಿತವಾಗಿದೆ. ಆದೇಶವು ಎಂಟು ವೃತ್ತಿಗಳಿಗೆ ಅನ್ವಯಿಸುತ್ತದೆ.

ವೃತ್ತಿಯನ್ನು ಬದಲಾಯಿಸಲು ಕೆಲಸಗಾರನ ಒಪ್ಪಿಗೆ ಪಡೆಯುವ ಪದ್ಧತಿಯನ್ನೂ ಈ ವೃತ್ತಿಗಳಲ್ಲಿ ರದ್ದುಗೊಳಿಸಲಾಗಿದೆ. ಖಿವಾ ಪ್ಲಾಟ್‌ಫಾರ್ಮ್ ಮೂಲಕ ನಡೆಸುವ ವಹಿವಾಟುಗಳಲ್ಲಾಗಿದೆ ಈ ಬದಲಾವಣೆಗಳು.

ಪ್ರಸ್ತುತ ಪದ್ಧತಿಯ ಪ್ರಕಾರ, ವೃತ್ತಿಯನ್ನು ಬದಲಾಯಿಸಲು ಕಾರ್ಮಿಕರ ಒಪ್ಪಿಗೆಯನ್ನು ಪಡೆಯಲು ಸಂದೇಶವನ್ನು ಕಳುಹಿಸಬೇಕು. ಇದನ್ನು ಕಾರ್ಮಿಕ ಅನುಮೋದಿಸಿದ ನಂತರವಷ್ಟೇ, ಕೆಲಸ ಬದಲಾಗಬಹುದು.ಆದರೆ, ಎಂಟು ವೃತ್ತಿಗಳಲ್ಲಿ ಈ ವಿಧಾನವು ಇನ್ನು ಮುಂದೆ ಅಗತ್ಯವಿಲ್ಲ.

ವೈದ್ಯ, ಸ್ಪೆಷಲಿಸ್ಟ್, ಇಂಜಿನಿಯರ್, ವಿಶೇಷ ತಜ್ಞ, ವೀಕ್ಷಣಾ ತಂತ್ರಜ್ಞ, ಕೆಲಸಗಾರ ಅಥವಾ ಆಮಿಲ್ ಮತ್ತು ಸಾಮಾನ್ಯ ಕೆಲಸಗಾರ ಅಥವಾ ಆಮಿಲ್ ಆದಿ ಮುಂತಾದ ವೃತ್ತಿಗಳಲ್ಲಿ ಹೊಸ ವಿನಾಯಿತಿ ಲಭ್ಯ. ಖಿವಾ ಪ್ಲಾಟ್‌ಫಾರ್ಮ್ ಮೂಲಕ ಮಾತ್ರವೇ ವೃತ್ತಿ ಬದಲಾವಣೆಗೆ ಅವಕಾಶ.

ನೇಮಕಗೊಳ್ಳುವ ವೃತ್ತಿಗಳ ನಿಖರವಾದ ವಿವರಣೆಯ ಅಗತ್ಯವಿದೆ. ಉದಾ: (ವೈದ್ಯರಾಗಿದ್ದರೆ,ಯಾವ ವಿಭಾಗ ಎಂಬುದನ್ನು ಮತ್ತು ಕೆಲಸಗಾರರಾಗಿದ್ದರೆ, ನೀವು ಯಾವ ವಲಯದ ಆಮಿಲ್ ಎಂಬುದನ್ನು ತೋರಿಸಬೇಕು) ಈ ವೃತ್ತಿಯಲ್ಲಿರುವವರು ಮೊದಲ ಬಾರಿಗೆ ವೃತ್ತಿಯನ್ನು ಬದಲಾಯಿಸಲು ಎರಡು ಸಾವಿರ ರಿಯಾಲ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಎರಡನೇ ಬಾರಿ ಬದಲಾವಣೆಗೆ ಶುಲ್ಕವಿರುತ್ತದೆ.

ಇತರ ವೃತ್ತಿಗಳಲ್ಲಿರುವವರಿಗೆ 2,000 ರಿಯಾಲ್ ಶುಲ್ಕವನ್ನು ವಿಧಿಸಲಾಗುತ್ತದೆ ಮತ್ತು ಕೆಲಸಗಾರನ ಒಪ್ಪಿಗೆಯೊಂದಿಗೆ ಮೊದಲ ಬಾರಿಗೆ ಬದಲಾವಣೆಯನ್ನು ಅನುಮತಿಸಲಾಗುವುದು.

error: Content is protected !! Not allowed copy content from janadhvani.com