janadhvani

Kannada Online News Paper

ಹಜ್‌ಗೆ ಸಿದ್ಧತೆ: ಹಜ್, ಉಮ್ರಾ ಪರವಾನಿಗೆ ರಹಿತ ಮಕ್ಕಾ ಪ್ರವೇಶಕ್ಕೆ ನಿರ್ಬಂಧ

ಪವಿತ್ರ ಸ್ಥಳಗಳಲ್ಲಿ ಕೆಲಸ ಮಾಡಲು ಪ್ರವೇಶ ಪರವಾನಗಿ, ಮಕ್ಕಾದಿಂದ ನೀಡಲಾದ ರೆಸಿಡೆನ್ಸಿ ಪರ್ಮಿಟ್ (ಇಖಾಮಾ), ಉಮ್ರಾ ಮತ್ತು ಹಜ್ ಪರವಾನಗಿಯನ್ನು ಹೊಂದಿರಬೇಕು

ಮಕ್ಕಾ, ಮೇ.26: ಹಜ್‌ಗೆ ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಪರವಾನಿಗೆ ಇಲ್ಲದ ವಲಸಿಗರಿಗೆ ಮಕ್ಕಾ ಪ್ರವೇಶ ನಿಷೇಧವು ಇಂದಿನಿಂದ ಜಾರಿಗೆ ಬಂದಿದೆ.

ಅಗತ್ಯ ದಾಖಲೆಗಳನ್ನು ಹೊಂದಿರದ ಎಲ್ಲಾ ವಾಹನಗ ಳು ಮತ್ತು ನಿವಾಸಿಗಳನ್ನು ಹಿಂತಿರುಗಿಸಲಾಗುವುದು, ಈ ದಾಖಲೆಗಳೆಂದರೆ, ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಪವಿತ್ರ ಸ್ಥಳಗಳಲ್ಲಿ ಕೆಲಸ ಮಾಡಲು ಪ್ರವೇಶ ಪರವಾನಗಿ, ಮಕ್ಕಾದಿಂದ ನೀಡಲಾದ ರೆಸಿಡೆನ್ಸಿ ಪರ್ಮಿಟ್ (ಇಖಾಮಾ), ಉಮ್ರಾ ಮತ್ತು ಹಜ್ ಪರವಾನಗಿಯನ್ನು ಒಳಗೊಂಡಿವೆ.

ಹಜ್ ಯಾತ್ರೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ನಿಯಮಗಳು ಜಾರಿಗೆ ಬಂದಿದೆ.

ತಪಾಸಣೆಗಾಗಿ ಮಕ್ಕಾ ಗಡಿಯಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನಷ್ಟು ಟ್ರ್ಯಾಕ್‌ಗಳನ್ನು ತೆರೆಯಲಾಗುತ್ತದೆ. ಈ ತಿಂಗಳ 31 ರಿಂದ ಹಜ್ ಯಾತ್ರಿಗಳು ಆಗಮಿಸಲು ಪ್ರಾರಂಭಿಸಲಿದ್ದಾರೆ.

ಕೋವಿಡ್ ಪರಿಸ್ಥಿತಿಯನ್ನು ಕೂಡ ಮನಗಂಡು ನಿಯಂತ್ರಣವನ್ನು ಜಾರಿ ಮಾಡಲಾಗಿದೆ. ಸೌದಿ ಆಂತರಿಕ ಸಚಿವಾಲಯವು ಮಕ್ಕಾದಲ್ಲಿ ಕೆಲಸ ಮತ್ತು ಇತರ ಚಟುವಟಿಕೆಗಳಿಗೆ ಪರವಾನಗಿಗಳನ್ನು ನೀಡಲು ಪ್ರಾರಂಭಿಸಿದೆ.

error: Content is protected !! Not allowed copy content from janadhvani.com