janadhvani

Kannada Online News Paper

ಲಜ್ಜೆಯಿದ್ದರೆ ಹರೀಶ್ ಪೂಂಜಾ, ನಾರಾಯಣ ಗುರುಗಳ ಮೌಲ್ಯಾಧಾರಿತ ರಾಜಕೀಯ ಹೇಳಿಕೆ ನೀಡಲಿ

ಪೂಂಜಾ ಪ್ರಥಮವಾಗಿ ತನ್ನೆಲ್ಲಾ ಗುತ್ತಿಗೆ ವ್ಯವಹಾರವನ್ನು ' ಯಾರಿಗೆ ' ವಹಿಸಿ ಕೊಟ್ಟು 40 ಶೇಕಡಾ ಕಿಕ್ ಬ್ಯಾಕ್ ಕಮಿಷನ್ ಪಡಕೊಳ್ಳುತ್ತಿದ್ದಾರೆ ಎಂದು ಖಾತ್ರಿ ಪಡಿಸಿಕೊಳ್ಳಬೇಕು.

ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ತನ್ನ ಕ್ಷೇತ್ರದಲ್ಲಿ ತನ್ನ ಕಾಲಾವಧಿಯಲ್ಲಿ ಅಭಿವೃದ್ಧಿ ಸಾದಿಸದಿದ್ದರೂ,ಜಿಲ್ಲೆಯಲ್ಲಿ ಹಿಂದುತ್ವದ ಕಾವನ್ನು ಹದವಾಗಿ ಪಾಲಿಸಲು ಯಾವುದೇ ಮಟ್ಟಕ್ಕೂ ತಲುಪಲು ತಯಾರಿದ್ದಾರೆ ಎಂದು ಅವರ ಇತ್ತೀಚಿನ ಹೇಳಿಕೆಯಲ್ಲಿ ಸಾಬೀತುಗೊಳ್ಳುತ್ತದೆ.

ಹಾಗೆಯೇ, ಒಂದು ನಿರ್ದಿಷ್ಟ ಸಭೆಯಲ್ಲಿ, ಪೂಂಜಾ ಅವರು, ಮುಂದಿನ ಚುನಾವಣೆಯಲ್ಲಿ ವಿಜಯಿಯಾಗಲು, ಸಂಘೀ ಕೃಪಾ ಲಿಖಿತ ಹೇಳಿಕೆ ಯೊಂದನ್ನು ಉಚ್ಚರಿಸಿದ್ದಾರೆ. ಈವರೆಗೆ ಪೂಂಜಾ ಮತ್ತು ಅವರ ಪರಿವಾರ, ಅರೇಬಿಕ್ ಮತ್ತು ಉರ್ದು .ಭಾಷೆಗಳಿಂದ ಎರವಲು ಪಡೆದ ಪದಗಳಾದ ‘ ತಬ್ಲಿಗ್ ವೈರಸ್ ‘ ನಿಂದ ಹಿಡಿದು ‘ ಆಝಾನ್ ‘ ವರೆಗಿನ ಆದಷ್ಟೂ ಪದಗಳನ್ನು ಜೀ ಹುಜೂರ್ ಗುಲಾಮರಾದ ಮಾಧ್ಯಮದವರನ್ನು ಬಳಸಿ ರಾತ್ರಿ ಹಗಲು ಹರಟಿದರೂ, ಕರ್ನಾಟಕದಲ್ಲಿ ಕೋಮು ಗಲಭೆ ನಡೆಸಲು ಶತಾಯ ಗತಾಯ ಪ್ರಯತ್ನಿಸಿದರೂ, ಸಾಧ್ಯವಾಗಿಲ್ಲ.

ಪ್ರಸ್ತುತ ಈ ಅರೇಬಿಕ್ ಮತ್ತು ಉರ್ದು ಪದಗಳು ಸಂಘೀ ನಿಕೇತನಿಗಳ ದಾಸ್ತಾನಿನಲ್ಲಿ ಖಾಲಿ ಗೊಂಡಿದೆ.ಇಲ್ಲಿನ ಹಿಂದುಳಿದ ವರ್ಗ, ದಲಿತರು, ಪರಿಶಿಷ್ಟರು ಮತ್ತು ಬುಡಕಟ್ಟು ಜನರನ್ನು ಮತ್ತಷ್ಟೂ ವಂಚಿಸಲು ಈಗ ಅರೇಬಿಕ್ ಮತ್ತು ಉರ್ದು ಪದಗಳು ಲಭ್ಯವಿಲ್ಲ. ಆಝಾನ್ ಪದದಿಂದ ರಾಜ್ಯದಲ್ಲಿ ನಿರೀಕ್ಷಿಸಿದ ಪಲಿತಾಂಶ ಪಡೆಯಲಾಗಿಲ್ಲ. ಆಝಾನ್ ಪದದಿಂದ ಜಿಲ್ಲೆಯಲ್ಲಿ ಸ್ವಯಂ ಜಾತಿದಾರರಿಗೆ ಆದ ನಷ್ಟವನ್ನು ಪೂಂಜಾರಿಗೆ ಅರಗಿಸಿ ಕೊಳ್ಳಲು ಇನ್ನೂ ಅವಧಿ ಬೇಕಾಗಿದೆ.

ಜಿಲ್ಲೆಯ ಕಲಾವಿದರು ಸಂಘೀ ಮುತಾಲಿಕನಿಗೆ ಮತ್ತು ಕೇಶವ ಕೃಪಾಗೆ ಛೀ ಮಾರಿ ಹಾಕುತ್ತಿದ್ದಾರೆ. ಆದರೆ ಹೇಳಿಕೊಳ್ಳುವಂತಿಲ್ಲ. ಈಗ ಹರೀಶ್ ಪೂಂಜಾ ಮುಂದಿನ ಚುನಾವಣೆಯಲ್ಲಿ ಮುಸ್ಲಿಮರ ಮತ ಬೇಡ ಎಂಬ ಅಸಾಂವಿಧಾನಿಕ ಪದ ಬಳಕೆ ಮಾಡಿದ್ದಾರೆ. ಇದು ಈ ಜಿಲ್ಲೆಯ ಬಿಲ್ಲವ, ಒಕ್ಕಲಿಗ, ಭಂಟ, ಪರಿಶಿಷ್ಟರ ಮತದ ಖಾತರಿಯಿಂದ ನೀಡಿದ ಹೇಳಿಕೆ ಇರಬಹುದು.

ಪೂಂಜಾರಿಗೆ ಲಜ್ಜೆ ಎಂಬುದು ಇದ್ದರೆ ಜಿಲ್ಲೆಯ ಜನರು ಗೌರವಿಸುವ ಮಾನವೀಯತೆ ತತ್ವದ ಪ್ರತಿಪಾದಕ ನಾರಾಯಣ ಗುರುಗಳ ಮೌಲ್ಯ ಮತ್ತು ಆದರ್ಶದ ಆಧಾರದಲ್ಲಿ ಹೇಳಿಕೆ ನೀಡಿ ಚುನಾವಣೆಗೆ ಸಿದ್ದರಾಗಲಿ ಎಲ್ಲಾ ವರ್ಗದ ಜನರ ಮತ ಪಡೆಯಲಿ. ಆದರೆ ನಾರಾಯಣ ಗುರುಗಳ ಮೌಲ್ಯಗಳನ್ನು ಪ್ರತಿಪಾದಿಸಲು ಪೂಂಜಾರಿಗೇ ಅವರ ಪಕ್ಷದಲ್ಲಿ ಅಷ್ಟೇ ಗಟ್ಟಿತನ ಬೇಕು. ನಾರಾಯಣ ಗುರುಗಳ ಪ್ರತಿಪಾದನೆ ಅಷ್ಟೆ ಸುದೃಢ ವಾದುದು. ಅವರ ಪಕ್ಷಕ್ಕೆ ಅದನ್ನು ಅರಗಿಸಿ ಕೊಳ್ಳಲು ಅಷ್ಟು ಸುಲಭವಿಲ್ಲ.

ಆದುದರಿಂದಲೇ ದೆಹಲಿಯ ಗಣರಾಜ್ಯೋತ್ಸವ ದಿನದಂದು ಕೇರಳದ ಪಿನರಾಯಿ ವಿಜಯನ್ ನೇತೃತ್ವದ ಸರಕಾರ ದೆಹಲಿಗೆ ಪ್ರದರ್ಶನಕ್ಕೆ ಕಳುಹಿಸಿದ ನಾಡಿನ ಹೆಮ್ಮೆಯ ವಿಮೋಚಕ ಗುರುಗಳಾದ ನಾರಾಯಣ ಗುರುಗಳ ಸ್ತಬ್ಧ ಚಿತ್ರ ವಾಹನವನ್ನು ದೆಹಲಿಯ ಆರ್ಯ ಪ್ರಭಾವಿತ ಮೋದಿ ಸರಕಾರ ತಿರಸ್ಕರಿಸಿ ಅದರ ಸ್ಥಾನದಲ್ಲಿ, ಈ ನಾಡಿನ ಪುರಾತನ ಭವ್ಯ ಪರಂಪರೆಯನ್ನು ನಿರ್ನಾಮ ಗೊಳಿಸುವ ಸಂಸ್ಕೃತಿ ಸ್ಥಾಪಿಸಲು ನಾಂದಿ ಹಾಡಿದ ವೈದಿಕ ಆಚಾರ್ಯರ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಿ,ದಕ್ಷಿಣ ಭಾರತದ ಹಿಂದುಳಿದ ವರ್ಗದ ಕೆಂಗಣ್ಣಿಗೆ ಗುರಿಯಾದ ಸಂದರ್ಭವನ್ನು ಹರೀಶ್ ಪೂಂಜಾ ಇನ್ನೂ ಮರೆತಿರಲಿಕ್ಕಿಲ್ಲ ತಾನೇ?

ಪೂಂಜಾರಿಗೆ ಮುಸ್ಲಿಮರ ಮತದ ಪ್ರಸ್ತಾವನೆ ಏಕೆ?, ಮುಸ್ಲಿಮ್ ಎಂಬ ಪದವನ್ನು ಪೂಂಜಾರವರು ಬಳಸಲಿಕ್ಕೊ ಯೋಗ್ಯರಲ್ಲ. ಪೂಂಜಾ ಪ್ರಥಮವಾಗಿ ತನ್ನೆಲ್ಲಾ ಗುತ್ತಿಗೆ ವ್ಯವಹಾರವನ್ನು ‘ ಯಾರಿಗೆ ‘ ವಹಿಸಿ ಕೊಟ್ಟು 40 ಶೇಕಡಾ ಕಿಕ್ ಬ್ಯಾಕ್ ಕಮಿಷನ್ ಪಡಕೊಳ್ಳುತ್ತಿದ್ದಾರೆ ಎಂದು ಖಾತ್ರಿ ಪಡಿಸಿಕೊಳ್ಳಬೇಕು. ಗುತ್ತಿಗೆ ವ್ಯವಹಾರಕ್ಕೆ ಪೂಂಜಾ ಅವರಿಗೆ ‘ ಯಾರು ?’ ಆಗ ಬಹುದು. ಮತ ಹಾಕಲು ‘ ಅವರು ‘ ಬೇಡ, ಹೇಗಿದೆ ನಿಮ್ಮ ದ್ವಂದ ತತ್ವ, ಇದುವೇ ಹಿಂದುತ್ವ?.

ಕೆ. ಆಶ್ರಫ್
ಅಧ್ಯಕ್ಷರು.ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ

error: Content is protected !! Not allowed copy content from janadhvani.com