ಇತ್ತೀಚೆಗೆ ಜಿಲ್ಲೆಯ ನಿರ್ಧಿಷ್ಟ ಪ್ರದೇಶದಲ್ಲಿ ಮತ್ತು ಕೊಡಗಿನಲ್ಲಿ ಸಂಘಟನೆಯ ಕಾರ್ಯಕರ್ತರಿಗೆ ಅಕ್ರಮವಾಗಿ ಶಸ್ತ್ರಾಸ್ತ್ರ ತರಬೇತಿ ನೀಡಿದ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದೆ ಮತ್ತು ಹಲವೆಡೆ ಸಾರ್ವಜನಿಕ ಸಭೆಗಳಲ್ಲಿ ತ್ರಿಶೂಲ ವಿತರಣೆ ಮಾಡಲಾಗಿದೆ.
ಕಾನೂನಾತ್ಮಕವಾಗಿ ಇದು ಭಾರತದ ಆಯುಧ ಕಾಯ್ದೆಯ ಅಡಿಯಲ್ಲಿ ಗಂಭೀರ ಅಪರಾಧ ಕೃತ್ಯ. ಆದರೆ ಇದು ಸರಕಾರಿ ಪ್ರಾಯೋಜಿತ ಕೃತ್ಯದಂತೆ ಕಾಣುತ್ತದೆ. ಸಂಘಟನೆಗಳ ಕಾರ್ಯಕರ್ತರನ್ನು ಅನ್ಯ ಮತೀಯರ ವಿರುದ್ಧ ಛೂ ಬಿಟ್ಟು ಕೋಮು ಗಲಭೆ ಸೃಷ್ಟಿಸುವುದು ಸಂಘೀ ನಿಕೇತನಿಗಳ ವ್ಯವಸ್ಥಿತ ಷಡ್ಯಂತ್ರ ಇದಾಗಿದೆ.
ಸಿ. ಟಿ.ರವಿ ಇಂತಹ ತರಬೇತಿ ಗಳಲ್ಲಿ ತಪ್ಪೇನಿದೆ ಎಂದು ಕೃಪಾ ಲಿಖಿತ ಹೇಳಿಕೆಯಂತೆಯೆ ಪ್ರಶ್ನಿಸಿದ್ದಾರೆ. ಹಿಂದುಳಿದ ವರ್ಗಗಳ, ದಲಿತರ, ಪರಿಶಿಷ್ಟರ ಯುವಕರನ್ನು ವಿದ್ವಂಸಕ ಕೃತ್ಯಗಳಿಗೆ ಇಳಿಸಿ ತಾನು ಮತ್ತು ವೈದಿಕ ಮೇಲ್ವರ್ಗ ಅಧಿಕಾರ ಪಡೆಯಲಿದೆ.
ಸಿ.ಟಿ.ರವಿಗೆ ತಾಕತ್ತು ಇದ್ದರೆ, ಹಿಂದುಳಿದ ವರ್ಗಗಳ, ದಲಿತರ, ಪರಿಶಿಷ್ಟರ ಮತ್ತು ಬುಡಕಟ್ಟು ಜನಾಂಗದವರನ್ನು ಹಿಂದೂಗಳು ಎಂದು ಪರಿಗಣಿಸಿ, ಅವರಿಗೆ ಶಸ್ತ್ರಾಸ್ತ್ರ ತರಭೇತಿ ಬದಲು ಗುರುಕುಲ ವ್ಯವಸ್ಥೆಯಲ್ಲಿ ವೇದ, ಉಪನಿಷತ್, ಪುರಾಣಗಳ ಭೋಧನೆ ನೀಡಿ ಪಂಡಿತ ಪ್ರಾವೀಣ್ಯತೆ ನೀಡುವ ವ್ಯವಸ್ಥೆ ಮಾಡಲಿ. ಆಗ ತಾನು ಪ್ರತಿಪಾದಿಸುವ ಹಿಂದುತ್ವಕ್ಕೆ ಸ್ವಲ್ಪವಾದರೂ ನ್ಯಾಯ ಲಭಿಸಬಹುದು.
ಕೆ.ಅಶ್ರಫ್
ಅಧ್ಯಕ್ಷರು.ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ