janadhvani

Kannada Online News Paper

ಮನ್ನಾರ್ಕಾಡ್ ಸುನ್ನೀ ಕಾರ್ಯಕರ್ತರ ಹತ್ಯೆ- ಆರೋಪಿಗಳಿಗೆ ಎರಡು ಜೀವಾವಧಿ ಶಿಕ್ಷೆ ಹಾಗೂ ದಂಡ

2013ರ ನವೆಂಬರ್ 20ರಂದು ರಾತ್ರಿ 9 ಗಂಟೆ ಸುಮಾರಿಗೆ ಶಸ್ತ್ರಧಾರಿಗಳ ತಂಡವೊಂದು ದಿವಂಗತ ಮಹಮ್ಮದ್ ಹಾಜಿಯವರ ಮಕ್ಕಳಾದ ಕುಂಞಿ ಹಂಝ ಮತ್ತು ನೂರುದ್ದೀನ್ ಅವರನ್ನು ಕಲ್ಲಂಕುಝಿಯಲ್ಲಿ ಅವರ ಮನೆಯಲ್ಲಿ ಕಡಿದು ಹತ್ಯೆ ಮಾಡಿತ್ತು.

ಪಾಲಕ್ಕಾಡ್,ಮೇ.16| ಕಾಂಞಿರಪ್ಪುಝ ಕಲ್ಲಾಂಕುಝಿಯಲ್ಲಿ ಇಬ್ಬರು ಸುನ್ನಿ ಕಾರ್ಯಕರ್ತರನ್ನು ಹತ್ಯೆ ನಡೆಸಿದ ಎಲ್ಲಾ 25 ಅಪರಾಧಿಗಳಿಗೆ ಎರಡು ಜೀವಾವಧಿ ಶಿಕ್ಷೆ ಮತ್ತು ತಲಾ 50,000 ರೂ ದಂಡ.

ಪಾಲಕ್ಕಾಡ್ ಜಿಲ್ಲಾ ನ್ಯಾಯಾಂಗ ತ್ವರಿತ ನ್ಯಾಯಾಲಯದ ನ್ಯಾಯಾಧೀಶರು ಶಿಕ್ಷೆ ವಿಧಿಸಿದ್ದಾರೆ. ಹತ್ಯೆ ನಡೆದು ಏಳು ವರ್ಷಗಳ ನಂತರ, ಫೆಬ್ರವರಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಪ್ರಾರಂಭಿಸಲಾಗಿತ್ತು

2013ರ ನವೆಂಬರ್ 20ರಂದು ರಾತ್ರಿ 9 ಗಂಟೆ ಸುಮಾರಿಗೆ ಶಸ್ತ್ರಧಾರಿಗಳ ತಂಡವೊಂದು ದಿವಂಗತ ಮಹಮ್ಮದ್ ಹಾಜಿಯವರ ಮಕ್ಕಳಾದ ಕುಂಞಿ ಹಂಝ ಮತ್ತು ನೂರುದ್ದೀನ್ ಅವರನ್ನು ಕಲ್ಲಂಕುಝಿಯಲ್ಲಿ ಅವರ ಮನೆಯಲ್ಲಿ ಕಡಿದು ಹತ್ಯೆ ಮಾಡಿತ್ತು. ಮತ್ತೋರ್ವ ಸಹೋದರ ಕುಂಞಿಮುಹಮ್ಮದ್ ಕೂಡ ದಾಳಿಯಲ್ಲಿ ಗಾಯಗೊಂಡಿದ್ದರು. ಘಟನೆಯಲ್ಲಿ ಪೊಲೀಸರು ಬಂಧಿಸಿದ ಎಲ್ಲ 26 ಮಂದಿಯೂ ಮುಸ್ಲಿಂ ಲೀಗ್ ಕಾರ್ಯಕರ್ತರಾಗಿದ್ದಾರೆ.

ಪ್ರಕರಣದಲ್ಲಿ 27 ಆರೋಪಿಗಳಿದ್ದರು. ಅವರಲ್ಲಿ ಒಬ್ಬರು ತೀರಿ ಹೋದರು. ಮತ್ತೊಬ್ಬ ಆರೋಪಿ ಅಪ್ರಾಪ್ತನಾಗಿದ್ದಾನೆ. ಕಾಂಜಿರಪುಝ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಚೋಳತ್ತಿಲ್ ಸಿದ್ದಿಕ್ ಮೊದಲ ಆರೋಪಿ.

ಬಂಧನದ ಬೆನ್ನಲ್ಲೇ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಆರೋಪಿಗಳು ಮುಸ್ಲಿಂ ಲೀಗ್ ನಾಯಕರ ಜೊತೆಗೆ ತೆಗೆದುಕೊಂಡ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಆರೋಪಿಗಳಿಗೆ ರಾಜಕೀಯ ನೆರವು ಸಿಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಜಾಮೀನಿನ ಮೇಲೆ ಹೊರಬಂದ ಆರೋಪಿಗಳು ಪದೇ ಪದೇ ಸಾಕ್ಷಿಗಳಿಗೆ ಬೆದರಿಕೆ ಹಾಕಿ ಪ್ರಕರಣವನ್ನು ಬುಡಮೇಲು ಗೊಳಿಸಲು ಯತ್ನಿಸುತ್ತಿದ್ದರು. ಇದರ ಬೆನ್ನಲ್ಲೇ ಹೈಕೋರ್ಟ್ ಐವರು ಆರೋಪಿಗಳ ಜಾಮೀನು ರದ್ದುಗೊಳಿಸಿತ್ತು.

ಪ್ರಕರಣದ ವಿಚಾರಣೆಯು ವಿಳಂಬಗೊಳ್ಳುತ್ತಿರುವುದರಿಂದ ಸಂತ್ರಸ್ತರ ಕುಟುಂಬಸ್ಥರು ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿತು. ಪ್ರಕರಣದಲ್ಲಿ ಸುಮಾರು 90 ಸಾಕ್ಷಿಗಳಿದ್ದರು.

ನೂರುದ್ದೀನ್ ಎಸ್ ವೈಎಸ್ ಕಲ್ಲಂಕುಝಿ ಘಟಕದ ಕಾರ್ಯದರ್ಶಿಯಾಗಿದ್ದರು. ಆರೋಪಿಗಳನ್ನು ರಕ್ಷಿಸಲು ಒತ್ತಡ ಹೇರಿದ್ದರೂ ಜನರ ನಡುವೆ ತೀವ್ರ ಪ್ರತಿಭಟನೆಗಳು ನಡೆದಾಗ ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದರು. ಕುಂಞಿ ಹಂಝ ಅವರು ಕಲ್ಲಂಕುಝಿಯ ಸುನ್ನೀ ಜುಮುಆ ಮಸೀದಿಯಲ್ಲಿ ‘ತನಲ್’ ಎಂಬ ಸಂಘಟನೆಯು ಅಕ್ರಮವಾಗಿ ಹಣ ಸಂಗ್ರಹಿಸುವುದರ ವಿರುದ್ಧ ವಕ್ಫ್ ಮಂಡಳಿಯಿಂದ ತೀರ್ಪು ಪಡೆದಿದ್ದರು. ಇದರ ಹಿಂದಿನ ವೈಷಮ್ಯವಾಗಿತ್ತು ಹತ್ಯೆಗೆ ಕಾರಣ.

error: Content is protected !! Not allowed copy content from janadhvani.com