janadhvani

Kannada Online News Paper

ಲೌಡ್ ಸ್ಪೀಕರ್: ಮಾರ್ಗಸೂಚಿ ಪ್ರಕಟ- ರಾತ್ರಿ 10 ರಿಂದ ಬೆಳಿಗ್ಗೆ 6ರ ವರೆಗೆ ಧ್ವನಿವರ್ಧಕ ಬಳಸುವಂತಿಲ್ಲ

ಧ್ವನಿವರ್ಧಕ ಬಳಕೆಗೆ ಹಾಗೂ ಡೆಸಿಬಲ್​ ಮಿತಿಯನ್ನು ಸೂಚಿಸಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಬೆಂಗಳೂರು: ಅಝಾನ್ ವಿರುದ್ಧ ಸಮರ ಸಾರಿರುವ ‘ಹಿಂದುತ್ವ’ ಭಯೋತ್ಪಾದಕರಿಂದ ರಾಜ್ಯದಲ್ಲಿ ಅಶಾಂತಿ ಉಂಟಾಗಿದ್ದು, ರಾಜ್ಯ ಸರಕಾರಕ್ಕೆ ತಲೆಬಿಸಿಯಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ದೇಗುಲ ಹಾಗೂ ಮಸೀದಿಗಳಲ್ಲಿ  ಲೌಡ್ ಸ್ಪೀಕರ್ ಅಳವಡಿಕೆಗೆ ಮಾರ್ಗಸೂಚಿ ಪ್ರಕಟವಾಗಿದೆ. ಧ್ವನಿವರ್ಧಕ ಬಳಕೆಗೆ ಹಾಗೂ ಡೆಸಿಬಲ್​ ಮಿತಿಯನ್ನು ಸೂಚಿಸಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೈಗಾರಿಕಾ ಪ್ರದೇಶದಲ್ಲಿ ಬೆಳಗ್ಗೆ 75 ಡೆಸಿಬಲ್​ ರಾತ್ರಿ 70 ಡೆಸಿಬಲ್ ಸದ್ದು ಇರಬೇಕು. ವಾಣಿಜ್ಯ ಪ್ರದೇಶದಲ್ಲಿ ಬೆಳಗ್ಗೆ 65 ಡೆಸಿಬಲ್​ ಹಾಗೂ ರಾತ್ರಿ 55 ಡೆಸಿಬಲ್ ಇರಬೇಕು. ಜನವಸತಿ ಪ್ರದೇಶದಲ್ಲಿ ಬೆಳಗ್ಗೆ 55 ಇದ್ರೆ ರಾತ್ರಿ 45 ಡೆಸಿಬಲ್ ಇರಬೇಕು. ನಿಶ್ಶಬ್ಧ ವಲಯದಲ್ಲಿ ಬೆಳಗ್ಗೆ 50 ಇದ್ರೆ ರಾತ್ರಿ 40 ಡೆಸಿಬಲ್ ಇರಬೇಕು. ಧ್ವನಿವರ್ಧಕ ಬಳಕೆಗೆ 15 ದಿನಗಳಲ್ಲಿ ಅನುಮತಿ ಪಡೆದಿರಬೇಕು. ಇಲ್ಲದಿದ್ರೆ ಸ್ಪೀಕರ್ ತೆಗೆಯುವಂತೆ ಸರ್ಕಾರ ಆದೇಶಿಸಿದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಲಾಗಿದ್ದು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೂ ಧ್ವನಿವರ್ಧಕ ಬಳಸುವಂತಿಲ್ಲ ಅಂತ ಸರ್ಕಾರ ಆದೇಶಿಸಿದೆ.

ಇದಕ್ಕೆ ತಪ್ಪಿದ್ದಲ್ಲಿ, ಸಂಬಂಧ ಪಟ್ಟ ಅಧಿಕಾರಿಗಳು, ದ್ವನಿವರ್ಧಕ ಗಳನ್ನು ತೆಗೆಸಿ ಹಾಕುತ್ತಾರೆ. ಇದರಿಂದ ಯಾರಿಗೂ ವಿನಾಯಿತಿ ಇಲ್ಲ. ಚರ್ಚುಗಳು, ಮಸೀದಿಗಳು ಹಾಗೂ ದೇವಸ್ಥಾನಗಳನ್ನು ಒಳಗೊಂಡಂತೆ ಯಾವುದೇ ತಾರತಮ್ಯ ಇಲ್ಲದಂತೆ ಕಾನೂನನ್ನು ಜಾರಿಗೊಳಿಸಲಾಗುವುದು. ಶಬ್ದ ಮಾಲಿನ್ಯ ಉಂಟುಮಾಡುವ ಹಾಗೂ ಅನುಮತಿ ಇಲ್ಲದ ದ್ವನಿವರ್ಧಕಗಳನ್ನು, ತೆಗೆದು ಹಾಕುವ ಪ್ರಕ್ರಿಯೆ, ಇಡೀ ರಾಜ್ಯದಲ್ಲಿ ನಡೆಯಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

error: Content is protected !! Not allowed copy content from janadhvani.com