janadhvani

Kannada Online News Paper

ದೇವ ಪ್ರಾರ್ಥನಾ ಕರೆ ‘ಅಝಾನ್’ ನ್ನು ಮುತಾಲಿಕರ ಪೂರ್ವಜರಿಗೂ ತಡೆಯಲಾಗಲಿಲ್ಲ- ಕೆ.ಅಶ್ರಫ್,ಮುಸ್ಲಿಮ್ ಒಕ್ಕೂಟ

ಈ ನಿರ್ಧಿಷ್ಟ ಕರೆಯನ್ನು ಈ ಹಿಂದೆ, ತಡೆಯಲು ಅದೆಷ್ಟೋ ಕಿಂಕರರು ಪ್ರಯತ್ನಿಸಿದರೂ ನಿಸರ್ಗ ಮತ್ತು ಈ ಜಗದ ಸುವ್ಯವಸ್ಥೆಯು ಅಂತವರಿಗೆ ತಕ್ಕ ಪ್ರತ್ಯುತ್ತರ ನೀಡಿದೆ

ಮಂಗಳೂರು: ಈ ದೇಶವು ಆದ್ಯಾತ್ಮಿಕ ನೆಲೆಗಟ್ಟು ಮತ್ತು ನಂಬಿಕೆಯಿಂದ ನಿಂತಿದೆ. ಭಾರತದ ಮುಸ್ಲಿಮರು ದೇವಾರಧಕರು ಮತ್ತು ಅಷ್ಟೇ ದೃಢವಾಗಿ ದೇಶ ಪ್ರೇಮಿಗಳು ಕೂಡ.ಮುಸ್ಲಿಮರಿಗೆ ಭಾರತದಲ್ಲಿ ಧರ್ಮವಿಲ್ಲದೆ ದೇಶವಿಲ್ಲ.

ಪ್ರತೀ ಮುಸ್ಲಿಮನ ಆರಾಧನೆಯು ಅಲ್ಲಾಹನಿಗೆ ಅರ್ಪಿತ. ಅಲ್ಲಾಹನ ಪ್ರಾರ್ಥನೆಗೆ ಇರುವ ಕರೆ ಅಝಾನ್ ಎಂಬುದು ನಿಸರ್ಗ ನಿಯಮ, ಈ ಕರೆಯನ್ನು ಹಿಂದೆಂದಿಗಿಂತಲೂ ಸಮರ್ಪಕವಾಗಿ , ಸ್ಪಷ್ಟವಾಗಿ ಮತ್ತು ಸುಂದರವಾಗಿ ಕರೆಯಲಾಗುವುದು. ದೇವ ಪ್ರಣಾಮದ ಕರೆಯನ್ನು ಸೀಮಿತಗೊಳಿಸುವ ಪ್ರಶ್ನೆಯೇ ಉದ್ಭವಿಸುವದಿಲ್ಲ.

ಅಲ್ಲಾಹನಿಗೆ ಪ್ರಾರ್ಥನೆಯ ಆಮಂತ್ರಣ ಕರೆ ಆಝಾನ್ ನ್ನು ಈ ಹಿಂದಿನಂತೆಯೇ ಕರೆಯುತ್ತೇವೆ. ಈ ನಿರ್ಧಿಷ್ಟ ಕರೆಯನ್ನು ಈ ಹಿಂದೆ, ತಡೆಯಲು ಅದೆಷ್ಟೋ ಕಿಂಕರರು ಪ್ರಯತ್ನಿಸಿದರೂ ನಿಸರ್ಗ ಮತ್ತು ಈ ಜಗದ ಸುವ್ಯವಸ್ಥೆಯು ಅಂತವರಿಗೆ ತಕ್ಕ ಪ್ರತ್ಯುತ್ತರ ನೀಡಿದೆ. ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲೂ ಅದೇ ಸಂಭವಿಸುವುದು.

ನಮಾಝ್ ಗಿರುವ ಅಝಾನ್ ಕರೆ ತಡೆಯಲು ಈ ಹಿಂದೆ ಪ್ರಯತ್ನಿಸಿದ ಮುತಾಲಿಕರ ಪೂರ್ವಜರಿಗೆ ಏನು ಶಾಸ್ತಿ ಆಗಿದೆಯೋ ಅದೇ ಮುತಾಲಿಕರ ಪ್ರಯತ್ನದಲ್ಲೂ ಸಂಭವಿಸಲಿದೆ. ದೇವ ಪ್ರಾರ್ಥನೆಯ ಕರೆಯನ್ನು ಪ್ರಶ್ನಿಸುವ ಮುತಾಲಿಕ್ ಸಂತತಿಯವರು ಈ ಬಗ್ಗೆ ನಿಗಾ ಹೊಂದುವುದು ಒಳಿತು. ಶಬ್ದ ಮಾಲಿನ್ಯ ಮತ್ತು ಶ್ರವಣ ಮಾಲಿನ್ಯದ ವ್ಯತ್ಯಾಸವನ್ನು ಅರಿಯುವುದು ಒಳಿತು ಎಂದು ಕೆ.ಅಶ್ರಫ್(ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com