janadhvani

Kannada Online News Paper

ಸೌದಿ ಅರೇಬಿಯಾ : ಕೈದಿಗಳಿಗೆ ವಾರ್ಷಿಕ ಕ್ಷಮಾದಾನ ಪ್ರಕ್ರಿಯೆ ಆರಂಭ

ಸೌದಿ ಅರೇಬಿಯಾದ ರಾಜ ಸಲ್ಮಾನ್ ಅವರ ವಾರ್ಷಿಕ ಕ್ಷಮಾದಾನದ ಈ ವರ್ಷದ ಕ್ಷಮಾದಾನ ಪ್ರಕ್ರಿಯೆ ಆರಂಭಗೊಂಡಿದೆ.

ರಿಯಾದ್: ಸೌದಿ ಅರೇಬಿಯಾದಲ್ಲಿ ಕೈದಿಗಳಿಗೆ ಕ್ಷಮಾದಾನ ನೀಡುವ ಪ್ರಕ್ರಿಯೆ ಆರಂಭವಾಗಿದೆ.ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದವರಿಗೆ ಇದರ ಅನುಕೂಲತೆ ಲಭಿಸಲಿದೆ. ಸೌದಿ ಅರೇಬಿಯಾದ ರಾಜ ಸಲ್ಮಾನ್ ಅವರ ವಾರ್ಷಿಕ ಕ್ಷಮಾದಾನದ ಈ ವರ್ಷದ ಕ್ಷಮಾದಾನ ಪ್ರಕ್ರಿಯೆ ಆರಂಭಗೊಂಡಿದೆ. ಗೃಹ ಸಚಿವಾಲಯವು ಇದಕ್ಕೆ ಅಗತ್ಯವಾದ ಷರತ್ತುಗಳು ಮತ್ತು ಮಾನದಂಡಗಳನ್ನು ಪ್ರಕಟಿಸಿದೆ.

36 ರೀತಿಯ ಅಪರಾಧಗಳಲ್ಲಿ ಭಾಗಿಯಾಗದ ಕೈದಿಗಳು ಕ್ಷಮಾದಾನಕ್ಕೆ ಅರ್ಹರು. ಕೊಲೆ, ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಧರ್ಮನಿಂದನೆ, ಪ್ರವಾದಿ ನಿಂದನೆ, ಕುರಾನ್‌ಗೆ ಅವಮಾನ, ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುವ ಅಪರಾಧಗಳು, ಭಯೋತ್ಪಾದನೆ, ದೇಶದ್ರೋಹ, ಗಂಭೀರ ಮಿಲಿಟರಿ ಅಪರಾಧಗಳು, ಮಕ್ಕಳು ಮತ್ತು ವಿಕಲಾಂಗ ಮಕ್ಕಳ ಚಿತ್ರಹಿಂಸೆ ಮತ್ತು ಮಾದಕವಸ್ತು ಕಳ್ಳಸಾಗಣೆ ಮುಂತಾದ ಅಪರಾಧಿಗಳಿಗೆ ಕ್ಷಮಾದಾನ ನೀಡಲಾಗುವುದಿಲ್ಲ.

ಸೌದಿ ಜೈಲುಗಳಲ್ಲಿರುವ ಖೈದಿಗಳಿಗೆ ವಾರ್ಷಿಕ ಕ್ಷಮಾದಾನ ನೀಡುವ ನಿಯಮಗಳು ಮತ್ತು ಷರತ್ತುಗಳನ್ನು ಸರ್ಕಾರ ಘೋಷಿಸಿದೆ. ಎರಡು ವರ್ಷ ಮತ್ತು ಅದಕ್ಕಿಂತ ಕಡಿಮೆ ಅವಧಿಗೆ ಶಿಕ್ಷೆಗೊಳಗಾದವರು ಮತ್ತು ಎರಡು ವರ್ಷಕ್ಕಿಂತ ಹೆಚ್ಚು ಕಾಲ ಶಿಕ್ಷೆ ವಿಧಿಸಲ್ಪಟ್ಟು ಶಿಕ್ಷೆಯ ಕಾಲು ಭಾಗವನ್ನು ಪೂರ್ಣಗೊಳಿಸಿದವರು ಪ್ರಯೋಜನಕ್ಕೆ ಅರ್ಹರು.

error: Content is protected !! Not allowed copy content from janadhvani.com