janadhvani

Kannada Online News Paper

ಹಜ್ ಯಾತ್ರಾರ್ಥಿಗಳಿಗೆ ಸೌದಿ ಆರೋಗ್ಯ ಸಚಿವಾಲಯ ಅನುಮೋದಿಸಿದ ಕೋವಿಡ್ ಲಸಿಕೆ ಕಡ್ಡಾಯ

ಸ್ವಯಂಸೇವಕರಾಗಲು ಬಯಸುವ ಹಜ್ ಯಾತ್ರಿಕರಿಗೆ ಶೀಘ್ರದಲ್ಲೇ ಅರ್ಜಿ ಸಲ್ಲಿಸುವ ವ್ಯವಸ್ಥೆಯು ಜಾರಿಗೆ ಬರಲಿದೆ.

ರಿಯಾದ್: ಸೌದಿ ಆರೋಗ್ಯ ಸಚಿವಾಲಯವು ಅನುಮೋದಿಸಿದ ಲಸಿಕೆಗಳು ಎಲ್ಲಾ ಹಜ್ ಯಾತ್ರಾರ್ಥಿಗಳಿಗೆ ಕಡ್ಡಾಯವಾಗಿದೆ ಎಂದು ಹಜ್ ಸಚಿವಾಲಯ ಹೇಳಿದೆ.
ಯಾತ್ರಾರ್ಥಿಗಳಿಗೆ ಸೇವೆ ಸಲ್ಲಿಸಲು ಆಸಕ್ತಿ ಹೊಂದಿರುವ ಸ್ವಯಂಸೇವಕರಿಗೆ ಶೀಘ್ರದಲ್ಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಯಾತ್ರಾರ್ಥಿಗಳಿಗೆ ಕೋವಿಡ್ ಲಸಿಕೆ ಸಹಿತ ಎಲ್ಲಾ ಲಸಿಕೆಗಳು ಕಡ್ಡಾಯವಾಗಿದೆ. ಈ ಷರತ್ತು ಎಲ್ಲಾ ಹಜ್ ಯಾತ್ರಿಕರು, ಇತರ ಸೇವಾ ಪೂರೈಕೆದಾರರು ಮತ್ತು ಭದ್ರತಾ ಸಿಬ್ಬಂದಿಗೆ ಅನ್ವಯಿಸುತ್ತದೆ.

ಹಜ್ ಯಾತ್ರಿಕರ ಸ್ವಯಂಸೇವಕರಾಗಲು ಬಯಸುವವರಿಗೆ ಶೀಘ್ರದಲ್ಲೇ ಅರ್ಜಿ ಸಲ್ಲಿಸುವ ವ್ಯವಸ್ಥೆಯು ಜಾರಿಗೆ ಬರಲಿದೆ. ಸಚಿವಾಲಯದಿಂದ ಪರವಾನಗಿ ಪಡೆದ ಸಂಸ್ಥೆಗಳ ಸಹಯೋಗದೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಪ್ಲಾಟ್ಫಾರ್ಮ್ ಮೂಲಕ ಸ್ವಯಂಸೇವಕರನ್ನು ಆಯ್ಕೆ ಮಾಡಲಾಗುತ್ತದೆ.

error: Content is protected !! Not allowed copy content from janadhvani.com