janadhvani

Kannada Online News Paper

ದಮ್ಮಾಮ್: ಕೆಸಿಎಫ್ ಅಲ್ ಹಸ್ಸಾ ಸೆಕ್ಟರ್ ವತಿಯಿಂದ ಈದ್ ಮೀಟ್ ಕಾರ್ಯಕ್ರಮ ಹಾಗೂ ಖಬರ್ ಝಿಯಾರತ್ ಯಶಸ್ವಿಯಾಗಿ ನಡೆಸಲಾಯಿತು.

ಈದ್ ಸಂದೇಶವನ್ನು ಶಿಕ್ಷಣ ಇಲಾಖೆಯ ಚೇರ್ಮನ್ ಇಬ್ರಾಹಿಮ್ ಸ‌ಅದಿ ಮಚ್ಚಂಪಾಡಿ ನಡೆಸಿದರು.

“ಆತ್ಮ ಸಂಸ್ಕರಣೆಯಿಂದ ಮಾತ್ರ ಜೀವನ ಪಾವನವಾಗಲು ಸಾಧ್ಯ.
ಅಣುವಿನಷ್ಟು ಆಹಂ ಹೃದಯದಲ್ಲಿರುವವರು ಸ್ವರ್ಗ ಪ್ರವೇಶಿಸಲಾರರು.

ಅಲ್ಲಾಹನ ಭಯದೊಂದಿಗೆ ಬದುಕಿ ಜೀವನ ಪಾವನಗೊಳಿಸೋಣ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಮರಾ ನಾಯಕ ಮೂಸ ಕಡಂಬಾರು, ಸೆಕ್ಟರ್ ಅಧ್ಯಕ್ಷ ಹಮೀದ್ ಕೈರಂಗಳ ಉಪಸ್ಥಿತಿಯಿದ್ದರು.

ಕಾರ್ಯಕ್ರಮವನ್ನು ಇಸ್ಹಾಕ್ ಸಿ.ಐ.ಫಜೀರು ಸ್ವಾಗತಿಸಿ, ಸೆಕ್ಟರ್ ಕಾರ್ಯದರ್ಶಿ ಶಂಸುದ್ದೀನ್ ಕೆಮ್ಮಾರ ,ಧನ್ಯವಾದಗೈದರು.

error: Content is protected !! Not allowed copy content from janadhvani.com