ಈಶ್ವರಮಂಗಳದ ಹೃದಯ ಭಾಗದಲ್ಲಿ ತಲೆ ಎತ್ತಿ ನಿಂತಿರುವ ತ್ವೈಬಾ ಎಜ್ಯುಕೇಶನ್ ಸೆಂಟರ್ ಇದರ ಅಬುಧಾಬಿ ಘಟಕದ ವಾರ್ಷಿಕ ಮಹಾ ಸಭೆಯು ದಿನಾಂಕ 24-04-2022 ಆದಿತ್ಯವಾರ ತರಾವೀಹ್ ನಮಾಝಿ ನ ಬಳಿಕ ಬಹು ಅಬ್ದುಲ್ ಹಮೀದ್ ಹಮೀದ್ ಸಅದಿ ಉಸ್ತಾದರವರ ನಿವಾಸದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತ್ವೈಬಾ ಅಬುಧಾಬಿಯ ಅಧ್ಯಕ್ಷರಾದ ಬಹು ಎಂ.ಎ. ಮುಹಮ್ಮದ್ ಕುಂಞಿ, ತ್ವೈಬಾ ಸೆಂಟರ್ ಈವರೆಗೆ ನಡೆದು ಬಂದ ಹಾದಿಯನ್ನು ವಿವರವಾಗಿ ವಿವರಿಸಿದರು.
ಬಹು ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಊರಿನಿಂದ ತ್ವೈಬಾ ಪ್ರಚರಣಾರ್ತ ಯು.ಎ.ಇ. ಪ್ರವಾಸದಲ್ಲಿರುವ ತ್ವೈಬಾ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಬಹು ಬಹು ಅಬ್ದುಲ್ ಅಝೀಜ್ ಮಿಸ್ಬಾಹಿ, ತ್ವೈಬಾ ಸೆಂಟರ್ ನ ಈಗಿನ ಸ್ಥಿತಿಗತಿಗಳ ಕುರಿತು ವಿವರವಾಗಿ ತ್ವೈಬಾ ಕಾರ್ಯಕರ್ತರಿಗೆ ಭೋದಿಸಿದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಎಂ.ಎ.ಮುಹಮ್ಮದ್ ಕುಂಞಿ ಈಶ್ವರಮಂಗಳ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದಿಕ್ ಕನ್ನಡ್ಕ, ಕೋಶಾಧಿಕಾರಿಯಾಗಿ ಅನ್ವರ್ ಮೀನಾವು, ಸಂಘಟನಾ ಕಾರ್ಯದರ್ಶಿಗಳಾಗಿ ಶರೀಫ್.ಜಿ.ಕೆ. ಯವರನ್ನು ಆರಿಸಲಾಯಿತು.
ಸಲಹೆಗಾರರಾಗಿ ಬಹು ಹಮೀದ್ ಸಅದಿ ಈಶ್ವರಮಂಗಲ, ಪಿ.ಎಮ್. ಅಬ್ದುಲ್ ಹಮೀದ್, ಮುಹಮ್ಮದ್ ಕುಂಞಿ ಸಖಾಫಿ, ಉಪಾಧ್ಯಕ್ಷರುಗಳಾಗಿ ಲತೀಫ್ ಕನ್ನಡ್ಕ, ಶರಫುದ್ದೀನ್ ಅಡೂರ್, ಜೊತೆ ಕಾರ್ಯದರ್ಶಿಯಾಗಿ ಉಮ್ಮರ್ ಎಂ.ಇ. ಹಾಗೂ 11 ಮಂದಿ ಕಾರ್ಯಕಾರೀ ಸಮಿತಿಯನ್ನು ಆರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದ ಸಲ್ಲಿಸಿದರು.
















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ