ಸೌದಿ ಅರೇಬಿಯಾ: ದಮ್ಮಾಮ್ ನಲ್ಲಿ ಕಳೆದ ಏಳು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಮುಂಡಗೋಡ ನಿವಾಸಿ ನೂರ ಬಾಷಾ ಎಂಬುವವರು ತಾ: ಮಾರ್ಚ್ 9 ರಂದು ಹ್ರದಯಾಘಾತದಿಂದ ನಿಧನರಾಗಿದ್ದರು.
ಮರಣೋತ್ತರ ಕ್ರೀಯೆಗೆ ಬೇಕದ ವ್ಯವಸ್ಥೆ ಕಲ್ಪಿಸಲು ಕೆ.ಸಿ.ಎಫ್ ಬಳಿ ಸಂಭಂಧಿಕರು ಕೇಳಿಕೊಂಡಾಗ ಕೂಡಲೆ ಸ್ಪಂದಿಸಿ ಬೇಕಾದ ದಾಖಲೆ ಪತ್ರ ಹಾಗು ಭಾರತೀಯ ರಾಯಬಾರಿ ಕಛೇರಿ ಹಾಗು ಇನ್ನಿತರ ವ್ಯವಸ್ಥೆಗಳನ್ನು ಸರಿಪಡಿಸಿ ಅಂದರೆ ತಾ: ಮಾರ್ಚ್ 13 ರಂದು ದಮ್ಮಾಮ್ ನಲ್ಲಿ ದಫನ ಕಾರ್ಯ ನಿರ್ವಹಿಸಲಾಯಿತು.

ಮ್ರತರು ತಂದೆ, ತಾಯಿ ಹೆಂಡತಿ ಹಾಗು ಇಬ್ಬರು ಗಂಡು ಹಾಗು ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಈ ಒಂದು ಕಾರ್ಯದಲ್ಲಿ ಸಹಕರಿಸಿದ ಕೆ.ಸಿ.ಎಫ್ ಸಾಂತ್ವನ ತಂಡದ ನಾಯಕರಾದ ಬಾಷಾ ಗಂಗಾವಲಿ, ನಾರ್ತ್ ಮತ್ತು ಸೌತ್ ಸೆಕ್ಟರ್ ಇದರ ಸಾಂತ್ವನ ತಂಡಕ್ಕೆ ಹಾಗು ನಾಯಕರುಗಳಿಗೆ ಅದೇ ರೀತಿ ಕೆ.ಸಿ.ಎಫ್ ಹಿತೈಷಿ ಫರ್ಝಾನ್ ಇವರುಗಳಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ದಮ್ಮಾಮ್ 91 ರಲ್ಲಿ ಅಂತ್ಯಕ್ರೀಯೆ ನೆರವೇರಿಸಿ ಮ್ರತರಿಗಾಗಿ ದುಆ ಮಾಡಲಾಯಿತು.
ಮುಂಡಗೋಡ ವಕೀಲರಿಂದ ಕೆ.ಸಿ.ಎಫ್ ಗೆ ಧನ್ಯವಾದ ಪತ್ರ
ಜಾತಿ ಧರ್ಮ ಮತ ಭೇಧವಿಲ್ಲದೆ ಪ್ರವಾಸಿಗರ ಕಷ್ಟ ಕರ್ಪಣ್ಯಗಳಿಗೆ ಸದಾ ಸಾಂತ್ವನದ ಚಿಲುಮೆಯನ್ನು ಬೀರುತ್ತಿರುವ ಕನ್ನಡಿಗರ ಏಕೈಕ ಸಂಘಟನೆಯಾಗಿರುವ ಕೆ.ಸಿ.ಎಫ್ ನ ಚುರುಕು ಕಾರ್ಯಚರಣೆ ಕಂಡು ಹುಬ್ಬಳ್ಳಿ ಮಂಡಗೋಡ ವಕೀಲರಾದ ಎಮ್ ಎ ನಂದಿಕಟ್ಟಿ ಇವರು ಧನ್ಯವಾದ ಪತ್ರವನ್ನು ಕಲುಹಿಸಿ ಕೊಟ್ಟಿದ್ದಾರೆ. ಹಾಗು ಕೆ.ಸಿ.ಎಫ್ ನ ಸಹಕಾರಿಯಾಗಿ ಸದಾ ಕೈಜೋಡಿಸುವ ಬರವಸೆಯನ್ನು ನೀಡಿದ್ದಾರೆಂದು ಕೆ.ಸಿ.ಎಫ್ ನಾಯಕರು ತಿಳಿಸಿದ್ದಾರೆ.
ಸಾಂತ್ವನ ವಿಭಾಗ
KCF ದಮ್ಮಾಮ್ ಝೋನ್
















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ