janadhvani

Kannada Online News Paper

ತ್ವಾಯಿಫ್ ಫೈಟರ್ಸ್ ಹೆಲ್ಫ್ ಲೈನ್ ಸಮಿತಿಗೆ ನೂತನ ಸಾರಥ್ಯ

ಸಹಕಾರವೇ ನಮ್ಮ ಧ್ಯೇಯ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಾಚರಿಸುವ ತ್ವಾಯಿಫ್ ಫೈಟರ್ಸ್ ಹೆಲ್ಪ್ ಲೈನ್ ಸಮಿತಿಯು ಹಲವಾರು ಸಾಂತ್ವನ ಕಾರ್ಯಗಳೊಂದಿಗೆ ಕಳೆದ ಐದು ವರ್ಷಗಳಿಂದ ಕಾರ್ಯಾಚರಿಸುತ್ತಾ ಬಂದಿದೆ. ನಾನಾ ಸಮಸ್ಯೆಗಳಲ್ಲಿ ಸಿಲುಕಿಕೊಂಡಿರುವ ಅನಿವಾಸಿಗರಿಗೆ ಬೇಕಾದ ಸಾಂತ್ವನ ಕಾರ್ಯವೇ ಈ ಸಮಿತಿಯ ಮುಖ್ಯ ಧ್ಯೇಯಗಳಲ್ಲಿ ಒಂದು.

ಸಮಿತಿಯ 5ನೇ ವರ್ಷದ ಮಹಾಸಭೆ ಮಾರ್ಚ್ 17 ರಂದು ತಾಯಿಫ್’ನ ಅಝೀಝಿಯಾ ಎಂಬಲ್ಲಿರುವ ಫವಾಝ್ ಬಾಯಾರ್ ರವರ ನಿವಾಸದಲ್ಲಿ ಜರುಗಿತು.

ಪ್ರಧಾನ ಕಾರ್ಯದರ್ಶಿ ಅಝ್ವೀರ್ ಬಡಕಬೈಲ್ ನೆರೆದ ಸಭಿಕರನ್ನು ಆತ್ಮೀಯವಾಗಿ ಸ್ವಾಗತಿಸಿ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.

ಅಧ್ಯಕ್ಷರಾದ ಅಬ್ದುರ್ರಝಾಕ್ ಕೊಡಂಗಾಯಿಯವರ ಉದ್ಘಾಟನೆಯೊಂದಿಗೆ ತನ್ನ ಅಧ್ಯಕ್ಷ ಭಾಷಣ ಮಾಡಿ ಸಹಕಾರ ನೀಡುತ್ತಾ ಬಂದವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂಘಟನೆಯ ಸದಸ್ಯರು ರಾಜ್ಯ, ಭಾಷೆ, ವೈಯಕ್ತಿಕ ಸಂಘಟನಾ ನಿಷ್ಠೆಗಳನ್ನೆಲ್ಲ ಮರೆತು ಏಕೋದರ ಸಹೋದರರಂತೆ ಆತ್ಮಾರ್ಥವಾಗಿ ಸಹಕಾರ ನೀಡುತ್ತಾ ಬಂದಿರುವುದರಿಂದ ಹಲವಾರು ಯಶಸ್ವೀ ಸಾಧನೆಗಳನ್ನು ಮಾಡಲು ಸಾಧ್ಯವಾಯಿತೆಂಬುದನ್ನು ಸ್ಮರಿಸಿದರು.

ನಂತರ 2022/23ರ ನೂತನ ಸಾರಥಿಗಳನ್ನು ಆರಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ನೂತನ ಮೀಡಿಯಾ ಕನ್ವೀನರ್ ಅಶ್ರಫ್ ಕರ್ವೇಲ್ ರವರು ಸೇರಿದ ಸಬೀಕರಿಗೆ ಧನ್ಯವಾದ ಹೇಳಿದರು.

error: Content is protected !! Not allowed copy content from janadhvani.com