janadhvani

Kannada Online News Paper

ಮಂಗಳೂರು: ಕಾಣೆಯಾಗಿದ್ದ 11 ವರ್ಷ ಪ್ರಾಯದ ಬಾಲಕಿಯ ಮೃತದೇಹ ಪತ್ತೆ

ಕುದ್ರೋಳಿಯ ಹೈದರಲಿ ರಸ್ತೆಯ ನಿವಾಸಿ ಸಲಾಂ ಎಂಬವರ ಮಗಳು ಮುಫೀದಾ (11) ಮೃತಪಟ್ಟ ಬಾಲಕಿ

ಮಂಗಳೂರು: ಮನೆಯಿಂದ ನಾಪತ್ತೆಯಾಗಿದ್ದ 11 ವರ್ಷ ಪ್ರಾಯದ ಬಾಲಕಿಯ ಮೃತದೇಹವು ಮನೆ ಸಮೀಪದ ನದಿಯಲ್ಲಿ ಪತ್ತೆಯಾಗಿದೆ.

ಕುದ್ರೋಳಿಯ ಹೈದರಲಿ ರಸ್ತೆಯ ನಿವಾಸಿ ಸಲಾಂ ಎಂಬವರ ಮಗಳು ಮುಫೀದಾ (11) ಮೃತಪಟ್ಟ ಬಾಲಕಿ. ರವಿವಾರ ಬೆಳಗ್ಗೆ ಮನೆಯಿಂದ ದಿಢೀರ್ ಕಾಣೆಯಾಗಿದ್ದಳು. ಎಲ್ಲಾ ಕಡೆ ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ.

ಮನೆ ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಮನೆಯಿಂದ ಸುಮಾರು 200 ಮೀ. ದೂರದಲ್ಲಿರುವ ನದಿ ಕಡೆಗೆ ಬಾಲಕಿ ಮುಫೀದಾ ತೆರಳುತ್ತಿರುವುದು ಕಂಡುಬಂದಿದೆ. ಅದರಂತೆ ಸ್ಥಳೀಯರು ಕುದ್ರೋಳಿಯ ಕಾರ್ಖಾನೆ ಬಳಿಯ ನದಿಯಲ್ಲಿ ಶೋಧ ನಡೆಸಿದಾಗ ಮುಫೀದಾಳ ಮೃತದೇಹ ಪತ್ತೆಯಾಗಿದೆ.ಈ ಬಗ್ಗೆ ಬಂದರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !! Not allowed copy content from janadhvani.com