janadhvani

Kannada Online News Paper

ಕೆಸಿಎಫ್ ನೆರವು, ಬಿಹಾರ ಮೂಲದ ವ್ಯಕ್ತಿಗೆ ತವರೂರು ಕಾಣುವ ಭಾಗ್ಯ

ದಮ್ಮಾಮ್: ಸೆ.23. ಸೌದಿ ಅರೇಬಿಯಾದ ದಮ್ಮಾಮ್ ನಲ್ಲಿ ವೃತ್ತಿಯಲ್ಲಿದ್ದ ಮೂಲತಃ ಬಿಹಾರದ ನಿವಾಸಿ ಲಾಲ್ ಮೋಹನ್ ಶಾ ಎಂಬವರು ಕಳೆದ ಏಳು ವರ್ಷಗಳಿಂದ ಸರಿಯಾಗಿ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದರು.


ಈ ಬಗ್ಗೆ ಮಾಹಿತಿ ಪಡೆದ ಕೆಸಿಎಫ್ ದಮ್ಮಾಮ್ ಝೋನ್ ಸಾಂತ್ವಾನ ಇಲಾಖೆಯ ಅಧ್ಯಕ್ಷ ಬಾಷ ಗಂಗಾವಳಿ ಹಾಗೂ ಕನ್ವಿನರ್ ಇಸ್ಹಾಕ್ ಸಿ.ಐ.ಫಜೀರ್ ಸಂಕಷ್ಟದಲ್ಲಿದ್ದ ಲಾಲ್ ಮೋಹನ್ ಶಾ ಅವರನ್ನು ಸಂಪರ್ಕಿಸಿ ಸಂಘಟನೆಯಿಂದಾಗುವ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡುವುದಾಗಿ ಭರವಸೆ ಕೊಟ್ಟು ಧೈರ್ಯ ತುಂಬಿದ್ದರು.

ಅದರಂತೆ, ಊರಿಗೆ ತೆರಳಲು ಬೇಕಾದ ಎಲ್ಲಾ ಕಾನೂನು ಪತ್ರಗಳನ್ನು ಸರಿಪಡಿಸಿ
ಸಂಘಟನೆಯಿಂದ ಆರ್ಥಿಕ ನೆರವು ನೀಡಿ, ಇಂದು ದಮ್ಮಾಮ್ ವಿಮಾನ ನಿಲ್ದಾಣ ಮೂಲಕ ತವರಿಗೆ ಕಳುಹಿಸಿಕೊಡಲಾಯಿತು.

ಕೆಸಿಎಫ್ ನ ಸಮಾಜಮುಖಿ ಸೇವೆಗೆ ಶುಭ ಹಾರೈಸಿದ ಲಾಲ್ ಮೋಹನ್ ಶಾ ದಮ್ಮಮ್ ವಿಮಾನ ನಿಲ್ದಾಣದಲ್ಲಿ ಬಾಷ ಗಂಗಾವಳಿಯನ್ನು ಆಲಿಂಗಿಸಿ ತನ್ನ ಪಯಣವನ್ನು ಆರಂಬಿಸಿದರು.error: Content is protected !! Not allowed copy content from janadhvani.com