janadhvani

Kannada Online News Paper

ಉಲಮಾ ನೇತಾರರನ್ನು ಸದಾ ಸ್ಮರಿಸಬೇಕು: ಬೇಕಲ್ ಉಸ್ತಾದ್ ಅನುಸ್ಮರಣೆಯಲ್ಲಿ ಪೇರೋಡ್ ಉಸ್ತಾದ್

ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧೀನದಲ್ಲಿ ಸೆಪ್ಟೆಂಬರ್ 09ರಂದು ರಾತ್ರಿ ಸೌದಿ ಸಮಯ 07:30ಕ್ಕೆ ಸರಿಯಾಗಿ  ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ಅನುಸ್ಮರಣೆ ಆನ್ಲೈನ್ ಕಾರ್ಯಕ್ರಮ ನಡೆಯಿತು.

ಸಯ್ಯಿದ್ ಅಬ್ದುರ್ರಹ್ಮಾನ್ ಅಲ್-ಬುಖಾರಿ ಉಚ್ಚಿಲ ತಂಙಳ್ ರವರ ದುಆದೊಂದಿಗೆ ಆರಂಭಿಸಿದ ಸಭೆಯ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿ ಪಿ ಯೂಸುಫ್ ಸಖಾಫಿ ಬೈತಾರ್ ಉಸ್ತಾದರು ವಹಿಸಿದರು.

ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆಯವರು ಸ್ವಾಗತ ಹೇಳಿದ ಕಾರ್ಯಕ್ರಮವನ್ನು ಬೇಕಲ್ ಉಸ್ತಾದರ ಪುತ್ರರಾದ ಜನಾಬ್ ಜಲೀಲ್ ಮೋಂಟುಗೋಳಿಯವರು ಉದ್ಘಾಟಿಸಿದರು.

ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರು ಕರ್ಮಶಾಸ್ತ್ರದಲ್ಲಿ ಬಹಳ ನಿಪುಣರಾಗಿದ್ದರು. ಎಲ್ಲಾ ಮಝ್’ಹಬ್ ಗಳ ವಿಷಯದ ಬಗ್ಗೆ ತಿಳುವಳಿಕೆಯನ್ನು ಹೊಂದಿದ್ದರು. ಇಂತಹ ಉಲಮಾ ಪಂಡಿತರ ಅನುಸ್ಮರಣೆ ಪ್ರತಿದಿನ ನಡೆಯುತ್ತಿರಬೇಕು ಎಂದು ಅನುಸ್ಮರಣೆ ಪ್ರಭಾಷಣಕ್ಕಾಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಉಸ್ತಾದರು ಹೇಳಿದರು. ಕೆಸಿಎಫ್ ಸಂಘಟನೆ ನಡೆಸುತ್ತಿರುವ ಕಾರ್ಯಾಚರಣೆಯ ಬಗ್ಗೆಯೂ ಪೇರೋಡ್ ಉಸ್ತಾದರು ಶ್ಲಾಘನೀಯ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ, ಇಹ್ಸಾನ್ ಸಮಿತಿ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ರೈಸ್ಕೊ, ಪ್ರಕಾಶನ ಇಲಾಖೆಯ ಅಧ್ಯಕ್ಷರಾದ ನಝೀರ್ ಹಾಜಿ ಕಾಶಿಪಟ್ನ, ಕರ್ನಾಟಕ ಮುಸ್ಲಿಮ್ ಜಮಾಅತ್ ಕಾರ್ಯದರ್ಶಿ ಕೆ ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ವಿವಿಧ ರಾಷ್ಟ್ರದ ಕೆಸಿಎಫ್ ನಾಯಕರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.

ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿಯಾದ ಮುಹಮ್ಮದ್ ಕಲ್ಲರ್ಬೆಯವರು ನಿರೂಪಣೆ ಮಾಡಿದ ಕಾರ್ಯಕ್ರಮಕ್ಕೆ ಅಬ್ದುಲ್ ಸಲಾಂ ಎಣ್ಮೂರು ರವರು ಧನ್ಯವಾದ ಹೇಳಿದರು.

error: Content is protected !! Not allowed copy content from janadhvani.com