ವಿಟ್ಲ : ಇಲ್ಲಿಗೆ ಸಮೀಪದ ಕೊಡಂಗಾಯಿಯ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸಿ ಮುನ್ನುಗ್ಗುತ್ತಿರುವ ಉತ್ಸಾಹಿ ಯುವಕರ ಸಂಘಟನೆಯಾದ ಕೊಡಂಗಾಯಿ ಚಾಂಪಿಯನ್ ಲೀಗ್ (KCL) ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರವು ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಮರ್ಹೂಂ ಎಂ.ಕೆ ಉಮರ್ ಫಾರೂಕ್ ಕೊಡಂಗಾಯಿ ಮತ್ತು ಮುಹಮ್ಮದ್ ಮೋನು ಬಿಕ್ನಾಜೆಯವರ ಸ್ಮರಣಾರ್ಥವಾಗಿ ಆಯೋಜಿಸಿದ ಪ್ರಸ್ತುತ ಕಾರ್ಯಕ್ರಮವನ್ನು ಸ್ಥಳೀಯ ಖತೀಬ್ ಉಸ್ತಾದ್ ಸಿದ್ಧೀಖ್ ಅರ್ಶದಿ ಯವರ ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು.
ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಂಜೆಎಂ ಕೊಡಂಗಾಯಿ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಕೆ ಮುಹಮ್ಮದ್, ರಹೀಮ್ ತಾಯಿಫ್, ಸಮದ್ ಅಬುಧಾಬಿ, ಹಸೈನಾರ್ ತಾಯಿಫ್, ಉಮ್ಮಿ ಕತರ್ ಅಲ್ಲದೆ ಅನೇಕ ಅತಿಥಿಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ವ್ಯವಸ್ಥಾಪಕರಾದ ಅಝರುದ್ದೀನ್ RCK ಸ್ವಾಗತಿಸಿ ಕೊನೆಯಲ್ಲಿ ರಫೀಕ್ P ಧನ್ಯವಾದ ಸಲ್ಲಿಸಿದರು. ನೂರಾರು ಜನರು ರಕ್ತ ನೀಡಿ ಸಹಕರಿಸಿದರು.
ವರದಿ: ರಮೀಝ್ ಎಂ ಕೆ ಕೊಡಂಗಾಯಿ.
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್