ದೇಶದ ಅತಿದೊಡ್ಡ ಬ್ಯಾಂಕ್ ಜಾಲ ಎಸ್ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ತನ್ನ ಗ್ರಾಹಕರಿಗೆ ಸೋಮವಾರ ಬೆಳಿಗ್ಗೆಯೇ ಅತ್ಯಂತ ಜರೂರಾದ ಎಚ್ಚರಿಕೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಆನ್ಲೈನ್ ವಂಚನೆ, ಸೈಬರ್ ಕ್ರೈಂ ನಂತಹ ಘಟನೆಗಳು ಬ್ಯಾಂಕಿಂಗ್ ಕ್ಷೇತ್ರವನ್ನು ಅಲುಗಾಡಿಸಿದ್ದು, ಅಮಾಯಕ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಈ ಗ್ರಾಹಕರ ಬಗ್ಗೆ ತಿಳಿಯಿರಿ (ಕೆವೈಸಿ) ಮೂಲಕ ಅನೇಕ ಜನರನ್ನು ಮೋಸಗೊಳಿಸಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ.
ತನ್ನ ಟ್ವಿಟರ್ ಖಾತೆಯ ಮೂಲಕ ಗ್ರಾಹಕರಿಗೆ ಎಚ್ಚರಿಕೆ ನೀಡಿರುವ ಎಸ್ಬಿಐ. ನಿಮಗೆ ಬರುವ ಕೆವೈಸಿ ಅಪ್ಡೇಟ್ ಲಿಂಕ್ಗಳ ಬಗ್ಗೆ ಎಚ್ಚರದಿಂದ ಇರಿ ಎಂದು ಹೇಳಿದೆ.’’ಮೋಸಗಾರರು ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಸಣ್ಣ ಸಂದೇಶ ಕಳುಹಿಸುತ್ತಾರೆ, ನಾವು ಬ್ಯಾಂಕಿನ ಉದ್ಯೋಗಿಗಳು ಅಥವಾ ಬ್ಯಾಂಕಿಗೆ ಸಂಬಂಧಪಟ್ಟವರು ಎಂದು ಹೇಳಿ ನಿಮ್ಮ ಎಲ್ಲಾ ಮಾಹಿತಿಯನ್ನು ಪಡೆಯುತ್ತಾರೆ. ಈ ರೀತಿ ನಿಮ್ಮನ್ನು ಮೋಸಗೊಳಿಸುತ್ತಾರೆ.
https://twitter.com/TheOfficialSBI/status/1414489922241658883
ಕೆವೈಸಿ ಮೂಲಕ ಮೋಸ ಮಾಡುತ್ತಿರುವುದು ನಿಜವಾದ ಸಂಗತಿಯಾಗಿದೆ. ವಂಚಕರು ನಿಮ್ಮ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ ನಿಮ್ಮ ಮಾಹಿತಿ ತೆಗೆದುಕೊಂಡು, ನಿಮ್ಮ ಹಣ ಲಪಟಾಯಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಟ್ವಿಟರ್ನಲ್ಲಿ ಎಸ್ಬಿಐ ಬರೆದುಕೊಂಡಿದೆ.
ಅಲ್ಲದೇ ಬ್ಯಾಂಕ್ ತನ್ನ ಗ್ರಾಹಕರಲ್ಲಿ ಮನವಿ ಮಾಡಿದ್ದು, ದಯವಿಟ್ಟು ಇಂತಹ ಯಾವುದೇ ಘಟನೆಗಳನ್ನು ನೀವು ಎದುರಿಸಿದ್ದರೇ ಕೂಡಲೇ ಬ್ಯಾಂಕಿನ ಗಮನಕ್ಕೆ ತನ್ನಿ ಮತ್ತು ಸೈಬರ್ ಕ್ರೈಮ್ ವಿಭಾಗಕ್ಕೆ ಕೂಡಲೇ ಮಾಹಿತಿ ನೀಡಿ. https://www.cybercrime.gov.in/ಗೆ ಲಾಗಿನ್ ಆಗಿ ದೂರು ಸಲ್ಲಿಸಿ. ಈ ವಿಭಾಗವು ಗೃಹ ಸಚಿವಾಲಯದ ಅಡಿಯಲ್ಲಿ ಬರುತ್ತದೆ ಎಂದು ಸಹ ಮಾಹಿತಿ ನೀಡಿದೆ.
ಅಲ್ಲದೇ ಬ್ಯಾಂಕ್ ಮೂರು ರೀತಿಯ ಭದ್ರತಾ ಸಂಗತಿಗಳನ್ನು ತನ್ನ ಗ್ರಾಹಕರಿಗೆ ತಿಳಿಸಿದೆ. ಇದು ನಿಮ್ಮ ಖಾತೆಯನ್ನು, ನಿಮ್ಮ ದುಡಿಮೆಯನ್ನು ಭದ್ರವಾಗಿರಿಸುತ್ತದೆ ಎಂದು ಸಹ ಹೇಳಿದೆ.
- ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವ ಮುಂಚೆ ಕೊಂಚ ಯೋಚಿಸಿ
- ಬ್ಯಾಂಕ್ ಎಂದಿಗೂ ಸಹ ತನ್ನ ಗ್ರಾಹಕರನ್ನು ಕೇಳಿಕೊಂಡು ಅವರ ಮಾಹಿತಿ ಕೇಳಿಕೊಂಡು (ಕೆವೈಸಿ) ಕರೆ ಮಾಡುವುದಿಲ್ಲ.
- ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಗೂ ಗೌಪ್ಯವಾದ ಸಂಗತಿಗಳನ್ನು ಯಾರ ಬಳಿಯೂ ಹಂಚಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದೆ.
ವರದಿಗಳ ಪ್ರಕಾರ ಚೀನಾ ದೇಶದ ಹ್ಯಾಕರ್ಗಳು ಎಸ್ಬಿಐ ಗ್ರಾಹಕರನ್ನೇ ಗುರಿಯಾಗಿಸಿಕೊಂಡಿದ್ದು, ನಿಮ್ಮ ಕೆವೈಸಿ ಅಪ್ಡೇಟ್ ಮಾಡಿದರೆ ನಿಮಗೆ 50 ಲಕ್ಷ ಬಹುಮಾನ ಸಿಗುತ್ತದೆ ಎಂದು ಆಮಿಷ ತೋರಿಸಿ ಹಣ ದೋಚಲಾಗುತ್ತಿದೆ. ಇತ್ತೀಚೆಗೆ 67 ವರ್ಷ ವಯಸ್ಸಿನ ವೃದ್ದರೊಬ್ಬರು ಸುಮಾರು 3 ಲಕ್ಷ ಹಣವನ್ನು ಕಳೆದುಕೊಂಡಿದ್ದು ಸುದ್ದಿಯಾಗಿತ್ತು. ಕೆವೈಸಿ ಮಾಹಿತಿ ಪಡೆಯುವುದಾಗಿ ಹೇಳಿ ಅತ್ಯಂತ ಅಗತ್ಯ ಮಾಹಿತಿಗಳನ್ನು ಪಡೆದು ಈ ಕೃತ್ಯ ಎಸಗಿದ್ದರು ಎಂದು ಹೇಳಲಾಗಿದೆ. ಆದ ಕಾರಣ ಈ ಎಚ್ಚರಿಕೆಯನ್ನು ಬ್ಯಾಂಕ್ ನೀಡಿದೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ