janadhvani

Kannada Online News Paper

ಸೌದಿ: ಪುತ್ತೂರು ಮುರ ನಿವಾಸಿ ನಿಧನ- ಮರಣೋತ್ತರ ಕಾರ್ಯಗಳಿಗೆ ಕೆಸಿಎಫ್ ನೆರವು

ಸೌದಿ ಅರೇಬಿಯಾ ಹಾಯಿಲ್: ಪುತ್ತೂರಿನ (ಮುರ) ನಿವಾಸಿ ಉಮ್ಮರ್ ಫಾರೂಕ್ ರವರು ಸೌದಿ ಅರೇಬಿಯಾ ಹಾಯಿಲ್ ಎಂಬಲ್ಲಿ ಹೃದಯಾಘಾತದಿಂದ ಜೂ.2 ರಂದು ನಿಧನ ಹೊಂದಿದ್ದರು
ಮರಣದ ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣ ಸ್ಪಂದಿಸಿದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕಾರ್ಯಕರ್ತರು
ಅಂತ್ಯಸಂಸ್ಕಾರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು.

ಮರಣೋತ್ತರ ಪ್ರಕ್ರಿಯೆಗೆ ಅಗತ್ಯವಿರುವ ಭಾರತೀಯ ರಾಯಭಾರ ಕಛೇರಿ, ಸೌದಿ ಪೋಲೀಸ್ ಇಲಾಖೆ, ಸ್ಥಳೀಯ ಆಸ್ಪತ್ರೆ, ಸೌದಿ ಕಾರ್ಮಿಕ ಪ್ರಾಧಿಕಾರ ಇತ್ಯಾದಿಗಳಿಂದ ದೊರೆಯಬೇಕಾದ ದಾಖಲೆಗಳನ್ನು ಸರಿಪಡಿಸಿ
ನಂತರ ಕೆಸಿಎಫ್ ಕಾರ್ಯಕರ್ತರ ನೇತೃತ್ವದಲ್ಲಿ ಜೂನ್ 9ರಂದು ಮಧ್ಯಾಹ್ನದ ಸಮಯಕ್ಕೆ ಹಾಯಿಲ್ ಸದಿಯನ್ ದಫನ ಭೂಮಿಯಲ್ಲಿ ಮಯ್ಯತ್ ದಫನ ಮಾಡಲಾಯಿತು.

ಅಂತ್ಯಸಂಸ್ಕಾರದ ಸಮಯದಲ್ಲಿ
ಅಬ್ದುಲ್ ಜಬ್ಬರ್ ಹರೇಕಳ ,ಮೊಹಮ್ಮದ್ ಇಡ್ಪಡಿ,ಇಲ್ಯಾಸ್ ಲೇತಿಫ್ ,ಸುಲೈಮಾನ್ ಅತ್ರಾಡಿ,ಇಬ್ರಾಹಿಂ ಬಾಲ್ಕುಜೆ,ಸಿದ್ದಿಕ್,ಸಂಶೀರ್ ಸುಳ್ಯ,ಬಷೀರ್ ಸಅದಿ ಹಾಗೂ ಕುಟುಂಬದವರು ಸೇರಿದ್ದರು.

error: Content is protected !! Not allowed copy content from janadhvani.com