janadhvani

Kannada Online News Paper

ಇಸ್ಲಾಂ, ಸ್ತ್ರೀ ಮತ್ತು ಧಾರ್ಮಿಕ ಶಿಕ್ಷಣ

ಫಾತಿಮಾ ಸುನೈನಾ
[ವಿದ್ಯಾರ್ಥಿನಿ ತಾಜುಲ್ಉಲಮಾ
ಶರೀಅತ್ ಕಾಲೇಜ್ ಉಕ್ಕುಡ]

 "ನರಕದಿಂದ ರಕ್ಷಿಸಿ" ಇದು ಕುರ್- ಆನ್ ನ ಆಜ್ಞಾಪನೆಯಾಗಿದೆ. ಈ ತಿಳಿಸಿರುವ ಪ್ರಕಾರವೇ ಈಗಿನ ಕಾಲದಲ್ಲಿ ಇಡೀ ಪ್ರಪಂಚದಲ್ಲಿಯೇ ಪ್ರಕೃತಿಸಹಜವಾದ ಅನೇಕ ಒಳ್ಳೆಯ ಕಾರ್ಯಗಳು ನಡೆಯುತ್ತಲೇ ಇದೆ. ಅದರ ಪರಿಧಿಯಲ್ಲಿ ಅತೀ ಗಂಭೀರತೆಯಿಂದ ಒಳಗೊಂಡಿದೆ ಮಹಿಳೆಯರಿಗೆ ಆವಶ್ಯಕವಾದ ಶರೀಅತ್  ಕಾಲೇಜುಗಳು. ಈಗಿನ ಕಾಲದಲ್ಲಿ ಧಾರಾಳವಾಗಿ ಕಂಡುಬರುತ್ತಿದೆ ಇದು ಎಲ್ಲರಿಗೂ ಗೊತ್ತಿರುವ ವಿಷಯವೇ ಹೌದು. ಈಗಿನ ಕಾಲದಲ್ಲಿ ಮಹಿಳೆಯರಿಗೆ ಶರೀ- ಅತಿನ ಅವಶ್ಯಕತೆ ಏನಿದೆ ? ಯಾಕೆ ಶರೀ-ಅತ್ ಬೇಕು ? ಇದರಿಂದ ಏನು ಪ್ರಯೋಜನ? 

ಹೌದು ಮಹಿಳೆಯರಿಗೆ ಶರೀಅತಿನ ಅವಶ್ಯಕತೆ ತುಂಬಾನೆ ಇದೆ !! “ನಬಿ ﷺِ ರು ಹೇಳುತ್ತಾರೆ ; ಏಳು ವಯಸ್ಸಾದ ರೆ ನಮಾಝ್ ಮಾಡುವಂತೆ ಮಕ್ಕಳೊಂದಿಗೆ ನಿರ್ದೇಶಿಸಿ , ಹತ್ತು ವಯಸ್ಸು ಆಗಿಯೂ ನಿರ್ವಹಿಸದಿದ್ದರೆ ಹೊಡೆಯಿರಿ” ಈ ಹದೀಸಿನಲ್ಲಿ ನಮಾಝ್ ಎಂದು ಹೇಳಲಾಗಿದ್ದರೂ ಶರೀಅತಿನ ಎಲ್ಲಾ ನಿಯಮಗಳು ಈ ಹದೀಸಿನಲ್ಲಿ ಒಳಪಡುತ್ತದೆ ಎಂದು ವಿದ್ವಾಂಸರು ಸ್ಪಷ್ಟಪಡಿಸಿದ್ದಾರೆ.ಅಂದರೆ ನಾವು ಧಾರ್ಮಿಕ ವಿದ್ಯೆಯನ್ನು ಕಲಿತು ಸುಸಂಸ್ಕೃತರಾಗುವುದು ನಮ್ಮೆಲ್ಲರ ಕಡ್ಡಾಯ ಬಾಧ್ಯತೆಯಾಗಿದೆ ಎಂದು ಇದರ ಅರ್ಥ.

ಆದರೆ ಎಲ್ಲರಿಗೂ ಇದರ ಬಗ್ಗೆ ಅಗತ್ಯವಾದ ಜ್ಞಾನ ಇಲ್ಲ ಎಂಬುವುದು ಖೇದಕರ. ಇದ್ದರೂ ಇದನ್ನು ಹೇಗೆ ನಿತ್ಯಜೀವನದಲ್ಲಿ ರೂಢಿ ಮಾಡಬೇಕೆಂಬ ಜ್ಞಾನ ಹೊಂದಿರುವುದಿಲ್ಲ. ನಾವು ಚಿಕ್ಕ ವಯಸ್ಸಿನಿಂದಲೇ ಇದರ ಬಗ್ಗೆ ಜ್ಞಾನ ಹೊಂದಿದ್ದರೆ ಮುಂದೆ ಅದನ್ನು ಅರ್ಧದಲ್ಲಿಯೇ ನಿಲ್ಲಿಸಿದ ಕಾರಣ ಅದನ್ನು ಮರೆತು ಬಿಡುತ್ತೇವೆ. ಆ ಮರೆತು ಹೋದವುಗಳನ್ನು ಪುನಃ ಪ್ರವೃತಿಗೊಳಿಸಲು ಶರೀಅತ್ ಬಹಳ ಸಹಕಾರಿಯಾಗಿದೆ.

ಇನ್ನು ಚಿಕ್ಕಂದಿನಲ್ಲಿ ನಮಗೆ ಜ್ಞಾನ ಕಲಿಸುವುದು ಪೋಷಕರ ಹೊಣೆಯಾಗಿರುತ್ತದೆ. ಆದರೆ ಎಲ್ಲಾ ರಕ್ಷಕರಿಗೂ ಮಕ್ಕಳಿಗೆ ಕಲಿಸಲು ಅಗತ್ಯವಾದ ಜ್ಞಾನ ಇರುವುದಿಲ್ಲ ಇದ್ದರೂ ಕಲಿಸುವುದು ಹೇಗೆ ಎಂದು ತಿಳಿದಿರುವುದಿಲ್ಲ. ತಿಳಿದರೂ ಜೀವನಾಧಾರಕ್ಕಾಗಿ ದುಡಿಯಬೇಕಿರುವುದರಿಂದ ಕಲಿಸಲು ಸಮಯಸಿಗದು.ಇಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಕಲಿಸಿ ಅವರನ್ನು ಸಂಸ್ಕಾರವಂತರನ್ನಾಗಿಸಿ ಅಲ್ಲಾಹನ ಆಜ್ಞೆಯನ್ನು ಜಾರಿಗೊಳಿಸಲು ಕಂಡುಕೊಂಡ ವ್ಯವಸ್ಥೆಯಾಗಿದೆ ಮಹಿಳಾಶರೀಅತ್ ಎನ್ನಬಹುದು.

ಶಿಕ್ಷಣ ಮನುಷ್ಯನ ಅತೀ ಮುಖ್ಯ ಸಂಪಾದನೆ. ನಬಿ ﷺِ ರವರಿಗೆ ವಹ್ಯ್ ಪ್ರಾರಂಭವೇ ” ಓದಿರಿ” ಎಂದಾಗಿತ್ತು . ಇವತ್ತಿನಂತೆ ಪ್ರಾರ್ಥಮಿಕ ಸೌಕರ್ಯಗಳೇ ಇಲ್ಲದ ಕಾಲದಲ್ಲೂ ಇಸ್ಲಾಮೀ ಶಿಕ್ಷಣವು ಉಚ್ಚಾಯ ಸ್ಥಿತಿಯಲ್ಲಿತ್ತು. ಶಿಕ್ಷಣದ ಗುರಿಯೂ ಮನುಷ್ಯನನ್ನು ಮೃಗೀಯತೆಯಿಂದ ಮನುಷ್ಯತ್ವಕ್ಕೆ ಕರೆತರುವುದು ಎಂದು ತಿಳಿದವು. ಆದರೆ ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯು ಈ ಗುರಿಯನ್ನು ತಲುಪುವಂತಹ ಶಿಕ್ಷಣವನ್ನು ನೀಡುತ್ತದೆಯೇ ? ಎಂಬ ಪ್ರಶ್ನೆಗೆ ಹೆಚ್ಚು ಚಿಂತಿಸದೆ ಇಲ್ಲವೆಂದು ಉತ್ತರಿಸಬಹುದು.

ಗಲ್ಲಿ ಗಲ್ಲಿಗಳಲ್ಲಿ ನೂರಾರು ಪದವಿ ಕಾಲೇಜುಗಳಿದ್ದರೂ ಮಾನವೀಯತೆಯ ಮೌಲ್ಯಗಳನ್ನು ಸಾರಲು ಅವುಗಳಿಂದ ಸಾಧ್ಯವಿಲ್ಲ. ಬದುಕಿನ ಸಂಪಾದನೆಯ ದಾರಿಯನ್ನು ಕಲಿಸಿ ಕೊಡುತ್ತದೆ ಹೊರತು ಬದುಕಿನ ನಿಜವಾದ ಮೌ ಲ್ಯವನ್ನು ಕಲಿಸಿ ಕೊಡಲು ಅವುಗಳಿಂದ ಸಾಧ್ಯವಾಗುತ್ತಿಲ್ಲ .
ಅತ್ಯಾಚಾರ ಸಲ್ಲದೆಂದು ಹೇಳಿ ಹೆಣ್ಣು ಗಂಡನ್ನು ಮುಕ್ತವಾಗಿ ಬೆರೆಯಲು ಅವಕಾಶ ನೀಡಿ, ಮದ್ಯಪಾನ ಮಾಡಬಾರದೆಂದು ತಿಳಿಸುವ ಅದ್ಯಾಪಕರೆ ತೂರಾಡುತ್ತಾ ಬರುವುದು ಇಂಥಹಾ ಸನ್ನಿವೇಶಗಳಿರುವ ವಿದ್ಯಾಲಯಗಳಿಂದ ಜೀವನದ ಮೌಲ್ಯಗಳನ್ನು ಮಕ್ಕಳು ಕಲಿಯುವುದಾದ್ರು ಹೇಗೆ? ಇಂಥಹಾ ಸಂದರ್ಬದಲ್ಲಾಗಿದೆ ಹೆಣ್ಣು ಮಕ್ಕಳಿಗೆ ಶರೀಅತ್ ಶಿಕ್ಷಣದ ಮೌಲ್ಯವನ್ನು ನಾವು ತಿಳಿಯಬೇಕಾದುದು.

ಜಗತ್ತಿನ ಕಾನೂನು ಗಳಿಗಿಂತ ಮಿಗಿಲಾದ ಜಗನಿಯಂತ್ರಕನ ಕಾನೂನುಗಳನ್ನು ಹೇಳಿ ಕಲಿಸುವ ವಿದ್ಯೆಯು ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. ಶರೀಅತ್ ಶಿಕ್ಷಣದ ಪ್ರಾರಂಭದಲ್ಲೇ ವಿಧ್ಯಾರ್ಥಿಗಳಿಗೆ ಮೌಲ್ಯ ಯುತವಾದ ಸಂಗತಿಗಳನ್ನೇ ಕಲಿಸಲಾಗುತ್ತದೆ. ತಂದೆ ತಾಯಿ ,ಕುಟುಂಬ, ನೆರೆ – ಹೊರೆ , ದಾಂಪತ್ಯ ,ಸಂತಾನ ಪರಿಪಾಲನೆ, ಸಂಪಾದನೆಯ ರೀತಿ ಇತ್ಯಾದಿ ವಿಷಯಗಳನ್ನೊಳಗೊಂಡ ಜೀವನದ ಪ್ರಮುಖ ಹಾಗೂ ಅನಿವಾರ್ಯ ಸ್ತರಗಳ ಮೌಲ್ಯಗಳನ್ನು ಧಾರ್ಮಿಕ ಚೌಕಟ್ಟಿನಲ್ಲಿ ಕಲಿಸಿ ಕೊಡಲಾಗುತ್ತದೆ. ಇಲ್ಲಿಂದ ಶಿಕ್ಷಣ ಪಡೆಯುವವರು ಒಳ್ಳೆಯ ಸ್ತ್ರೀಗಳು ಆಗದೇ ಇರಲು ಸಾಧ್ಯವಿಲ್ಲ. ಆದರೆ ಸಮಾಜ ಅದನ್ನು ಅರ್ಥ ಮಾಡಲು ವಿಫಲವಾಗುತ್ತಿದೆ ಎಂದು ಹೇಳದೆ ಇರಲು ಸಾಧ್ಯವಿಲ್ಲ. ಲೌಕಿಕ ಶಿಕ್ಷಣಕ್ಕಾಗಿ ತಮ್ಮ ಅಪಾರ ಸಮಯ ಸಂಪತ್ತನ್ನು ವ್ಯಯಿಸುವವರು ಅನಿವಾರ್ಯ ಮತ್ತು ಅಗತ್ಯವಾಗಿ ಬೇಕಾದ ಶರೀಅತ್ ಶಿಕ್ಷಣದ ಬಗ್ಗೆ ಅಸಡ್ಡೆತಾಳುತ್ತಿರುವುದು ಬೇಸರದ ಸಂಗತಿ.

ಸುತ್ತಲೂ ಕೆಡುಕುಗಳು ತುಂಬಿದ ಈ ಸಂಕೀರ್ಣವಾದ ಕಾಲದಲ್ಲಿ ಇಸ್ಲಾಮೀ ವಾತಾವರಣವನ್ನು ಸೃಷ್ಟಿಸುವುದು ಅಷ್ಟು ಸುಲಭದ ಮಾತಲ್ಲ . ಮುಸ್ಲಿಂ ಹೆಣ್ಣು ಮಕ್ಕಳ ಪಾರತ್ರಿಕ ಮೋಕ್ಷಕ್ಕಾಗಿ ಧಾರ್ಮಿಕ ವಿಧ್ಯೆ ಕಲಿಯಲು ಮಹಾತ್ಮರಾದ ವಿದ್ವಾಂಸರು ರೂಪಿಸಿದ್ದು ಆಗಿದೆ ಶರೀಅತ್. ಒಳಿತನ್ನಲ್ಲದೆ ಅಲ್ಲಿ ಬೇರೇನನ್ನೂ ಬೋಧಿಸಲಾಗುತ್ತಿಲ್ಲ.
ಯಾವ ಕೆಲಸಕ್ಕೂ ಒಂದು ಗುರಿ ಇರುತ್ತದೆ. ನಮ್ಮ ಚಟುವಟಿಕೆಗಳಿಗೆ ಸ್ಪಷ್ಟವಾದ ಗುರಿ ಇರಬೇಕೆಂಬುದು ಇಸ್ಲಾಂ ನಿರ್ದೇಶಿಸುತ್ತದೆ. ಆದ್ದರಿಂದ ಶರೀಅತ್ ಕಲಿಕೆಗೂ ಒಂದು ಗುರಿ ಇರಲೇಬೇಕು. ” ಸುದೃಢ ವಿಶ್ವಾಸ ಹೊಂದಿದ ಇಸ್ಲಾಮೀ ಶರೀಅತ್ ಪ್ರಕಾರ ಜೀವಿಸುವ ಮಹಿಳೆಯನ್ನು ಬೆಳೆಸುವುದು ಆಗಿದೆ ಇದರ ಗುರಿ” ಈ ಗುರಿ ಸಾದಿಸದಿದ್ದರೇ ಶರೀಅತ್ ಎಂಬುದು ಪ್ರಯೋಜನ ರಹಿತವಾಗುವುದು.

ಧಾರ್ಮಿಕ ಜ್ಞಾನ ಕಲಿಕೆಯಿಂದ ಇಹಲೋಕ ಕ್ಕಿಂತ ಹೆಚ್ಚಾಗಿ ಪರಲೋಕ ವಿಜಯ ವಾಗಿದೆ. ಇಲ್ಲಿ ಇಮಾಮ್ ಗಝಾಲಿ (ರ) ಹೇಳುತ್ತಾರೆ: ವಾಸ್ತವದಲ್ಲಿ ಇಹಲೋಕ ಕ್ಕಿಂತ ಪರಲೋಕ ಮೇಲೆಂದು ತಿಳಿದಿದ್ದರೂ ಜನರು ಆ ಬಗ್ಗೆ ಅಶ್ರದ್ದೆಯನ್ನು ತಾಳುತಿದ್ದಾರೆ . ಇಹಲೋಕದ ಸಂಪಾದನೆಗಾಗಿ ಯಾವ ತ್ಯಾಗಕ್ಕೂ ಸಿದ್ದನಿರುವವನು ಪರಲೋಕಕ್ಕೆ ಕಷ್ಟಪಡಲು ತಯಾರಿರುವುದಿಲ್ಲ.
ಈ ಮಾತು ಅದೆಷ್ಟು ಸತ್ಯ ನಾವು ಲೌಕಿಕ ಶಿಕ್ಷಣಕ್ಕಾಗಿ ರಾತ್ರಿ ಹಗಲು ಕಷ್ಟಪಡುವರು ಧಾರ್ಮಿಕ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ ತಾಳುತಿದ್ದಾರೆ . ಶರಿಅತಿನ ಬಗ್ಗೆ ಈ ರೀತಿ ನಿರ್ಲಕ್ಷ್ಯ ತಾಳಿದರೆ ನಾವು ಪರಲೋಕದಲ್ಲಿ
ಜಯಶಾಲಿಯಾಗುವುದು ಹೇಗೆ? ಇದಕ್ಕಾಗಿ ನಮಗೆ
ಶರೀಅತ್ ಬಹಳ ಮುಖ್ಯವಾದದ್ದು ಎಂದು ತಿಳಿಯಬಹುದು.

ನೋಡಿದವರಿಗೆ ಮುಸ್ಲಿಂ ಎಂದು ತಿಳಿಯಬೇಕೆಂದು ದೇಹದ ಉಬ್ಬು ತಗ್ಗುಗಳು ಪ್ರದರ್ಶಿಸುವ ಫ್ಯಾಶನೀಸಂ ಮುಳುಗಿಕೊಂಡಿರುವ ಬುರ್ಖಾ ಧರಿಸಿರುವ ಮಹಿಳೆಯರ ಕಾರುಬಾರು ಕಾಣಬಹುದು. ಅನ್ಯ ಪುರುಷ ಎದುರಿಗಿದ್ದಾನೆ ಎಂಬ ಸಾಮಾನ್ಯ ಪ್ರಜ್ಞೆ ಇಲ್ಲದಂತೆ ವಿಶೇಷ ವಾಗಿ ಶಾಪಿಂಗ್ ಮಾಲ್ ಹಾಗೂ ಮಾರ್ಕೆಟ್ ಗಳಲ್ಲಿ ಸ್ತ್ರೀಯರ ವ್ಯವಹಾರಗಳನ್ನು ಕಾಣಬಹುದು .
ಪವಿತ್ರ ದೀನುಲ್ ಇಸ್ಲಾಂ ಮಹಿಳೆಯರಿಗೆ ಪ್ರತ್ಯೇಕವಾದ ಆಚಾರ ವಿಚಾರಗಳನ್ನು ಕಲ್ಪಿಸಿದೆ. ವಸ್ತ್ರ ಧಾರಣೆ, ನಡೆ ನುಡಿ, ಎಲ್ಲಾ ವಿಷಯ ಗಳಿಗೂ ಒಂದೊಂದು ಪ್ರತ್ಯೇಕತೆ ಇಸ್ಲಾಮಿನಲ್ಲಿ ಇದೆ. ಪ್ರವಾದಿ ﷺِ ರೊಂದಿಗೆ ಸ್ವಹಾಬಿ ವನಿತೆಯರು ” ನಮಾಝ್ ಮಾಡಲು ಮಸೀದಿಗೆ ಬರಬಹುದೇ? ಎಂದು ಕೇಳಿದಾಗ ಪ್ರವಾದಿ ﷺِ ಯವರ ಉತ್ತರ ” ನೀವು ನಿಮ್ಮ ಮನೆಯಲ್ಲಿ ನಮಾಝ್ ನಿರ್ವಹಿಸಿ, ಮನೆಯ ಒಳಕಕೋಣೆಯಲ್ಲಾದರೆ ಇನ್ನೂ ಉತ್ತಮ ” ಅನ್ಯ ಸ್ತ್ರೀ ಪುರುಷರು ಬೆರೆಯುವುದು ಎಷ್ಟರ ಮಟ್ಟಿಗೆ ಇಸ್ಲಾಂ ನಿಷೇಧಿಸಿದೆ ಎನ್ನುವುದು ಪ್ರವಾದಿ ﷺರವರ ಉತ್ತರದಿಂದ ತಿಳಿಯಬಹುದಾಗಿದೆ.

ಅಲ್ಲಾಹನಿಗೆ ಆರಾಧನೆ ಅರ್ಪಿಸಲು ಪರಸ್ಪರ ಸ್ತ್ರೀ ಪುರುಷರು ಒಂದು ಸೇರುವುದು ನಮ್ಮ ಧರ್ಮ ಸಮ್ಮತ ಅರ್ಹವಲ್ಲ. ಆಗಿದ್ಧ ಮೇಲೆ ಶಾಪಿಂಗ್ ಸಮಾರಂಭಗಳ ವಿಷಯ ಎಷ್ಟು ಗಂಭೀರ ವಾಗಿರಬಹುದು ? ಇಸ್ಲಾಮೀ ಚೌಕಟ್ಟಿನೊಳಗೆ ಇದ್ದರೆ ಮಾತ್ರ ಅದು ನಮ್ಮ ಇಹ ಪರ ವಿಜಯದ ಹೇತುವಗಬಹುದು. ಈ ರೀತಿಯಲ್ಲಿ ನಡೆಯಬೇಕಾದರೆ ಶರಿಅತ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ತಮ್ಮತನವನ್ನು ಬಿಡದೆ ಇಸ್ಲಾಮಿಕತೆಯನ್ನು ತೊರೆಯದೆ ಇರುವವರಾಗಿದ್ದಾರೆ ಈಮಾನ್ ದಾರಿ ಸ್ತ್ರೀಗಳು . ನಾನು ಒಂದು ಶರಿಅತ್ ವಿದ್ಯಾರ್ಥಿನಿ ಯಾಗಿ ನನಗೆ ಹಲವಾರು ವಿಧದ ಆವಶ್ಯಕತೆ ಗಳನ್ನು ನಾನು ಮನಗಂಡಿದ್ದೇನೆ.
ಅಲ್ ಹಂದುಲಿಲ್ಲಾಹ್ ಇದರಿಂದ ನನ್ನ ಜೀವನದಲ್ಲಿ ಆದ ಬದಲಾವಣೆಗಳು ಅಪಾರ. ಈ ಶರಿಅತ್ ನಿಂದ ಸತ್ಯ ವಿಶ್ವಾಸಿಗಳ ಮಾತೆಗಳಗಿರುವ ಖದೀಜ (ರ) , ಸೌದ ( ರ), ಮುಂತಾದವರ ಜೀವನ ಶೈಲಿಯಲ್ಲಿ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಆದರೂ ಅವರುಗಳನ್ನು ಅಳವಡಿಸಿ ಕೊಳ್ಳುವಂತಹ ಅವಕಾಶ ದೊರೆಯಬಹುದು. ನಮ್ಮನ್ನು ಅವರೆಲ್ಲರ ಬರಕತ್ತಿನಿಂದ ಒಳ್ಳೆಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಅಲ್ಲಾಹು ತೌಫೀಕ್ ನೀಡಲಿ ಆಮೀನ್ .ಶರಿಅತ್ ನ ವಿಧಿವಿಧಾನಗಳು ಮಹಿಳೆಯರಲ್ಲಿ ಇದ್ದರೆ ಮಾತ್ರ ನಮ್ಮೆಲ್ಲರ ಇಹ ಪರ ವಿಜಯಕ್ಕೆ ಹೇತುವಾಗಬಹುದು.

error: Content is protected !! Not allowed copy content from janadhvani.com