janadhvani

Kannada Online News Paper

ಸುಲ್ತಾನುಲ್ ಉಲಮಾರ ನೇತೃತ್ವದಲ್ಲಿ ಮತ್ತೊಂದು ಅಪೂರ್ವ ಕೊಡುಗೆ-ಕೋವಿಡ್ ಆಸ್ಪತ್ರೆ ಸಜ್ಜು

ಕೊರೊನಾ ಇಡೀ ದೇಶದ ಜನತೆಯನ್ನು ಹಿಂಡಿ ಹಿಪ್ಪೆ ಮಾಡಿದೆ. ದಿನದಿಂದ ದಿನಕ್ಕೆ ಅದರ ಅರ್ಭಟ ಹೆಚ್ಚಾಗುತ್ತಿದೆ.
ಒಂದೆಡೆ ಸರಿಯಾದ ಆಸ್ಪತ್ರೆಗಳಿಲ್ಲ,
ಇದ್ದರೂ ಬೆಡ್ ಇಲ್ಲ, ಆಕ್ಸಿಜನ್ ಇಲ್ಲ, ಸೂಕ್ತ ಸೌಲಭ್ಯಗಳ ಕೊರತೆ..

ಹೀಗೆ ನಿಲ್ಲದ ತಾಪತ್ರಯ..
ಸರಕಾರಕ್ಕೆ ಏನು ಮಾಡಲು ತೋಚುತ್ತಿಲ್ಲ.
ಬಡವರ ಗೋಳು ಕೇಳುವವರಿಲ್ಲ.

ಇದೆಲ್ಲವನ್ನೂ ಗಮನಿಸಿದ ಕೇರಳದ SYS – SSF ಸಾಂತ್ವನ ಕೇಂದ್ರ
ಕೊರೊನಾ ಆಸ್ಪತ್ರೆ ಸಜ್ಜುಗೊಳಿಸಿದೆ.

ಕೋವಿಡ್ ವಿರುದ್ದ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿರುವ,
ಲಾಕ್ ಡೌನ್‌ನಲ್ಲಿ ಸಂಕಷ್ಟದ ಪೀಡಿತ ಜನರಿಗೆ ಭರವಸೆ ಮೂಡಿಸಿದ ,
ಕೇರಳದ SYS – SSF ಸಾಂತ್ವನ ಕೇಂದ್ರವು
ಈ ಮಹತ್ತರ ಯೋಜನೆಗೆ ಕೈ ಹಾಕಿದೆ.

ಕಳೆದ ಬಾರಿಯಂತೆ ಈ ಬಾರಿ ಕೂಡಾ SYS – SSF ಸಾಂತ್ವನ ವಿಂಗ್
ರೋಗಿಗಳಿಗೆ ಅಗತ್ಯ ಔಷಧಿ, ಅಂಬುಲೆನ್ಸ್, ಆಕ್ಸಿಜನ್, ಸೇರಿದಂತೆ..
ಲಾಕ್ ಡೌನ್‌ನಿಂದ ಸಂಕಷ್ಟಕ್ಕೀಡಾದವರ ಸಂರಕ್ಷಣೆಗೆ ಆಹಾರ, ಔಷಧಿ ವಿತರಿಸುವ ಹಾಗೂ
ಲಸಿಕೆಗಾಗಿ ಲಕ್ಷಾಂತರ ರೂಪಾಯಿಯನ್ನು ದೇಣಿಗೆ ನೀಡುವ ಮೂಲಕ ಗಮನ ಸೆಳೆದಿತ್ತು.

ಇದೀಗ ಆಸ್ಪತ್ರೆ ಸಜ್ಜೀಕರಿಸುವ ಮೂಲಕ ಬಡ ರೋಗಿಗಳ ಹೊಸ ಭರವಸೆ ಮೂಡಿಸಿದೆ.

ಇತ್ತೀಚಿಗೆ ಸುಲ್ತಾನುಲ್ ಉಲಮಾರ ನೇತೃತ್ವದಲ್ಲಿ ನಡೆದ ಕಲ್ಲಿಕೋಟೆ ಜಿಲ್ಲಾ ಸುನ್ನೀ ಪರಿವಾರ ನಾಯಕರ ಸಭೆಯಲ್ಲಿ ಈ ದಿಟ್ಟ ನಿರ್ಧಾರ ಕೈಗೊಳ್ಳಲಾಯಿತು.

ಮೊದಲ ಹಂತದಲ್ಲಿ ಉದ್ಯೋಗ ನಷ್ಟ, ವ್ಯಾಪಾರ ಮಂದಗತಿಯಿಂದ ಕಂಗೆಟ್ಟ ಬಡ, ನಿರ್ಗತಿಕ ಕುಟುಂಬದ ಸುಮಾರು 28 ಕೋವಿಡ್ ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುವುದು.

ಪ್ರಥಮ ಘಟ್ಟದಲ್ಲಿ 72 ಬೆಡ್‌ಗಳನ್ನು ಆಕ್ಸಿಜನ್ ಸಹಿತ ಆಸ್ಪತ್ರೆಯಲ್ಲಿ ಸಜ್ಜೀಕರಿಸಲಾಗಿದೆ.

ಮರ್ಕಝ್ ಪೂನೂರ್ ಆಸ್ಪತ್ರೆ ಕಟ್ಟಡದಲ್ಲಿ ಈ ಸಾಂತ್ವನ ಕೋವಿಡ್ ಆಸ್ಪತ್ರೆ ಕಾರ್ಯಚರಿಸಲಿದೆ.

ಮೇ 24 ಸೋಮವಾರ ಸಂಜೆ ಕೇರಳ ಲೋಕೋಪಯೋಗಿ ಸಚಿವ ‌‌‌‌‌ಅಡ್ವ ಪಿ ಎ ಮುಹಮ್ಮದ್ ರಿಯಾಝ್ ಆಸ್ಪತ್ರೆ ಉದ್ಘಾಟಿಸಲಿದ್ದು,
ಇಂಡಿಯನ್ ಗ್ರಾಂಡ್ ಮುಫ್ತಿ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ.
SYS ರಾಜ್ಯ ಕಾರ್ಯದರ್ಶಿ ಡಾ ಎಂ ಎ ಹಕೀಂ ಅಝ್ಹರಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಬಾಲುಶ್ಶೇರಿ ಶಾಸಕ ಸಚಿನ್ ದೇವ್, ಕಲ್ಲಿಕೋಟೆ ಸರಕಾರಿ ಮೆಡಿಕಲ್ ಕಾಲೇಜು ಮುಖ್ಯಸ್ಥ ಎ ಪಿ ಶಶಿ ಮುಂತಾದವರು ಭಾಗವಹಿಸಲಿದ್ದಾರೆ.
✍️ ಅಬೂ ರಾಝೀ.

error: Content is protected !! Not allowed copy content from janadhvani.com