janadhvani

Kannada Online News Paper

ಹಣ ದೋಚುವ ಕೆಲವು ಖಾಸಗಿ ಆಸ್ಪತ್ರೆಗಳನ್ನು ಜಿಲ್ಲಾಡಳಿತ ಕೂಡಲೇ ನಿಯಂತ್ರಿಸಬೇಕು

ಅಶ್ರಫ್ ಕಿನಾರ ಮಂಗಳೂರು
ರಾಜ್ಯ ಕೋ ಆರ್ಡಿನೇಟರ್ ಸಹಾಯ್ ಕರ್ನಾಟಕ ಮುಸ್ಲಿಂ ಜಮಾಅತ್

ಮಂಗಳೂರು: ಕೋವಿಡ್ 19 ಮೊದಲ ಅಲೆಯಿಂದ ತತ್ತರಿಸಿದ ಜನತೆ ಎರಡನೇ ಅಲೆ ಕಳೆದ ಒಂದು ತಿಂಗಳಿಂದ ಲಾಕ್ ಡೌನ್ ನಿಂದ ಜನರ ಜೀವನ ಸಂಪೂರ್ಣ ಹದಗೆಟ್ಟಿದೆ.

ಎಲ್ಲಾ ವ್ಯಾಪಾರ ವ್ಯವಹಾರ ಸೀಮಿತ ವಾದರಿಂದ ಬಡವರು ಒಂದು ತುತ್ತು ಅನ್ನ ಕ್ಕೆ ಆಲೋಚಿಸುವ ಸ್ಥಿತಿ ಬಂದೊದಗಿದೆ.ಕೆಲವು ಸಮಿತಿಗಳು ಸರಕಾರದಿಂದ ಈ ಒಂದು ತುರ್ತು ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್ ಗೆ ಮನವಿ ಸಲ್ಲಿಸಿದ್ದರೂ ಎಲ್ಲವನ್ನೂ ಅರಿತ ಸರಕಾರ ಯಾವುದಕ್ಕೂ ಸ್ಪಂದಿಸುವುದಿಲ್ಲ.ಇದೆರೆಡೆಯಲ್ಲಿ ಮಂಗಳೂರಿನ ಕೆಲವು ಆಸ್ಪತ್ರೆ ಹಾಗೂ ಡಾ.ಗಳು ಗಂಬೀರ ದಂದೆಯಲ್ಲಿದ್ದಾರೆ.

ಆಯುಷ್ಮಾನ್ ಯೋಜನೆಯಲ್ಲಿ ಉಚಿತ ಚಿಕಿತ್ಸೆ ಯಿದ್ದರೂ ,ಜನರಿಗೆ ಮಾಹಿತಿ ನೀಡದೆ ಚಿಕಿತ್ಸೆ ಸರಿಯಾಗಿ ನೀಡದೆ ಲಕ್ಷಗಟ್ಟಲೆ ಬಿಲ್ ನೀಡಿ ಡೆಡ್ ಬಾಡಿಯೂ ನೀಡುತ್ತಿದೆ.ಇದಕ್ಕೆ ಸ್ಪಷ್ಟ ಉದಾಹರಣೆ ಅಥೆನಾ ಆಸ್ಪತ್ರೆ ಯಲ್ಲಿ ನಡೆದ ಎರಡು ಪ್ರಕರಣ ಒಂದು 5.5 ಲಕ್ಷ ಬಿಲ್ ಮಾಡಿ 1.20 ಲಕ್ಷಕ್ಕೆ ಹಾಗೂ ಇನ್ನೊಂದು 3.5 ಲಕ್ಷ ಬಿಲ್ ಮಾಡಿ 1 ಲಕ್ಷ ಕ್ಕೆ ಇಳಿಸಿದ್ದು .ಅಲ್ಲದೆ ಇನ್ನೂ ಕೆಲವು ಆಸ್ಪತ್ರೆ ಯ ಅವಸ್ಥೆ ಗಮನಕ್ಕೆ ಬರುತ್ತಿದೆ. ದಯವಿಟ್ಟು ಜನರು ಎಲ್ಲವನ್ನೂ ಕಳಕೊಂಡು ಸಂದಿಗ್ಧ ಪರಿಸ್ಥಿತಿಯಲ್ಲಿ ರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗಳು ಸೂಕ್ತ ಸೂಚನೆ ಗಳನ್ನು ಎಲ್ಲಾ ಆಸ್ಪತ್ರೆ ಗಳಿಗೂ ರವಾನಿಸುವ ಮೂಲಕ ಜನರಿಗೆ ಸಹಕಾರಿಯಾಗಬೇಕು .ಈ ಚಾಲಿಯನ್ನು ಮುಂದುವರಿಸುವ ಆಸ್ಪತ್ರೆ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ದಂಡವಿದಿಸಬೇಕು.

ಇದರೊಂದಿಗೆ ಸರಕಾರಿ ಆಸ್ಪತ್ರೆ ಯ ಅವಸ್ಥೆ ಯನ್ನು ಅರಿಯಲು ಅಧಿಕಾರಗಳ ತಂಡವೊಂದನ್ನು ರಚಿಸಬೇಕೆಂದು ಈ ಮೂಲಕ ವಿನಂತಿಸಿ‌ಕೊಳ್ಳುತ್ತಿದ್ದೇನೆ. ಇದೇ ಚಾಲಿ ಇನ್ನೂ ಕೆಲವು ಖಾಸಗಿ ಆಸ್ಪತ್ರೆ ಮುಂದು ವರಿಸಿದರೆ ಲಾಕ್ ಡೌನ್ ನಿಯಮ ಪಾಲಿಸಿ ಆಸ್ಪತ್ರೆ ಯ ಮುಂದೆ ಎಲ್ಲಾ ಸಂಘ ಸಂಸ್ಥೆಗಳ ಸಹಕಾರದಿಂದ ದರಣಿ ಕೂರಲು ಹಿಂಜರಿಯುವುದಿಲ್ಲ.ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು,ಧಾರ್ಮಿಕ ಮತ್ತು ಸಾಮಾಜಿಕ ನಾಯಕರು ಕೆಲವು ಖಾಸಗಿ ಆಸ್ಪತ್ರೆ ಗಳ ಜನರಿಂದ ಲೂಟಿ ಮಾಡುತ್ತಿರುವ ವಿಷಯಗಳ ವಿರುದ್ದ ಧ್ವನಿ ಎತ್ತಬೇಕು ಎಂದು ಈ ಮೂಲಕ ವಿನಂತಿಸಿ‌ಕೊಳ್ಳುತ್ತಿದ್ದೇನೆ.

error: Content is protected !! Not allowed copy content from janadhvani.com