ಬದ್ರಿಯಾ ಜುಮಾ ಮಸ್ಜಿದ್ ರೆಂಗೇಲ್, ಮೆಲ್ಕಾರ್’ನಲ್ಲಿ ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿರುವ ಸ್ವಲಾತ್ ಮಜ್ಲಿಸ್ ಇದರ 17ನೇ ವಾರ್ಷಿಕದ ಪ್ರಯುಕ್ತ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಮಾರ್ಚ್ 13, ಶನಿವಾರ ಮಗ್ರಿಬ್ ನಮಾಝ್ ಬಳಿಕ ಬಿ.ಎಚ್ ಅಬೂಸ್ವಾಲಿಹ್ ಉಸ್ತಾದ್’ರವರ ನೇತೃತ್ವದಲ್ಲಿ ವಾರ್ಷಿಕ ಸ್ವಲಾತ್ ಮಜ್ಲಿಸ್ ನಡೆಯಲಿದ್ದು, ಸ್ಥಳೀಯ ಖತೀಬರಾದ ಹೈದರ್ ಅಲಿ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಮಾರ್ಚ್ 14 ಭಾನುವಾರ ಮಗ್ರಿಬ್ ನಮಾಝ್ ಬಳಿಕ ಮರ್ಹೂಂ ತಾಜುಲ್ ಉಲಮಾ ಸ್ವದಖತುಲ್ಲಾಹ್ ಉಸ್ತಾದ್ ವೇದಿಕೆಯಲ್ಲಿ ಇಶ್ಖೇ ಮದೀನಾ ಬುರ್ದಾ ತಂಡದಿಂದ ಬುರ್ದಾ ಮಜ್ಲಿಸ್ ನಡೆಯಲಿದ್ದು, ಇಸ್ಮಾಯಿಲ್ ಝುಹ್ರಿ ಗಡಿಯಾರ ನೇತೃತ್ವ ನೀಡಲಿದ್ದಾರೆ. ಬದ್ರಿಯಾ ಮದ್ರಸ ಮುಅಲ್ಲಿಂ ಬಶೀರ್ ಮುಸ್ಲಿಯಾರ್ ಉದ್ಘಾಟನೆ ಮಾಡಲಿದ್ದಾರೆ.
ರಾತ್ರಿ 8:30 ಕ್ಕೆ ಬಿ.ಎಚ್ ಅಬೂಸ್ವಾಲಿಹ್ ಉಸ್ತಾದ್(ಮುದರ್ರಿಸ್ ಆಲಡ್ಕ) ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಖ್ಯಾತ ವಾಗ್ಮಿ ನೌಫಳ್ ಸಖಾಫಿ ಕಳಸ ಬ್ಯಾರಿ ಭಾಷೆಯಲ್ಲಿ ಮುಖ್ಯ ಭಾಷಣ ಮಡಲಿದ್ದಾರೆ. ಸ್ಥಳೀಯ ಖತೀಬರಾದ ಹೈದರ್ ಅಲಿ ಸಖಾಫಿ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ.ವೇದಿಕೆಯಲ್ಲಿ BJM ರೆಂಗೇಲ್ ಅಧ್ಯಕ್ಷರಾದ ಅಬ್ದುಲ್ ಕರೀಮ್, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ರೆಂಗೇಲ್, ಮಾಜಿ ಅಧ್ಯಕ್ಷ ಪಿ.ಆರ್ ಇದ್ದಿನಬ್ಬ ಹಾಗೂ ಬದ್ರಿಯಾ ಯೂತ್’ವಿಂಗ್ ಗೌರವಾಧ್ಯಕ್ಷರಾದ ಪಿ.ಆರ್ ಯೂಸುಫ್ ಇಲ್ಯಾಸ್ ಉಪಸ್ಥಿತರಿರುವರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್