janadhvani

Kannada Online News Paper

ಡಿ.ಕೆ. ಎಸ್. ಸಿ. ದ . ಕ. ಜಿಲ್ಲಾ ಸಮಿತಿ ಅಧೀನ ನೂತನ ಸುರತ್ಕಲ್ ಘಟಕದ ಉದ್ಘಾಟನೆ

ಸುರತ್ಕಲ್:ಡಿ.ಕೆ.ಎಸ್.ಸಿ. ದ. ಕ. ಜಿಲ್ಲಾ ಸಮಿತಿ ಸುರತ್ಕಲ್ ನೂತನ ಘಟಕದ ಉದ್ಘಾಟನೆಯು ದಿನಾಂಕ 10-10-2026 ಶನಿವಾರ ಎಚ್.ಎನ್.ಜಿ.ಸಿ. ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷ ಬಹು ಅಸ್ಸಯ್ಯಿದ್ ಅಹ್ಮದ್ ಮುಖ್ತಾರ್ ಅಲ್ ಹೈದ್ರೋಸಿ ತಂಙಳ್ ಕುಂಬೋಲ್ ರವರ ದುವಾದೊಂದಿಗೆ ಯಶಸ್ವಿಯಾಗಿ ನಡೆಯಿತು.

ಚುನಾವಣಾಧಿಕಾರಿಯಾಗಿ ಯುಎಇ ರಾಷ್ಟ್ರೀಯ ಸಮಿತಿ ಮಾಜಿ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಸಜಿಪ ರವರ ನೇತೃತ್ವದಲ್ಲಿ ಈ ಕೆಳಗಿನ ನೂತನ ಸಮಿತಿ ರಚನೆಯಾಯಿತು. ಅಧ್ಯಕ್ಷರಾಗಿ ಹಾಜಿ ಎಸ್. ಎಚ್. ಅನ್ಸಾರಿ ಸುರತ್ಕಲ್, ಪ್ರಧಾನ ಕಾರ್ಯದರ್ಶಿಯಾಗಿ ಮೊಯ್ದಿನ್ ಅಲ್ ಸಫರ್, ಹಣಕಾಸು ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಇಡ್ಯ, ಉಪಾಧ್ಯಕ್ಷರುಗಳಾಗಿ ಅಬ್ದುರ್ರಝ್ಝಾಖ್ ಮುಕ್ಕ, ಅಬ್ದುಲ್ ಹಮೀದ್ ಕ್ರಾಸ್, ಜೊತೆ ಕಾರ್ಯದರ್ಶಿಗಳಾಗಿ ಅಕ್ಬರ್ ಅಲಿ ಮುಕ್ಕ, ಉಮರ್ ಫಾರೂಖ್ ಶೇಡಿಗುರಿ, ಸಂವಹನ ಕಾರ್ಯದರ್ಶಿಯಾಗಿ ರಫೀಖ್ ತಲೆಮನೆ, ಲೆಕ್ಕ ಪರಿಶೋಧಕರಾಗಿ ಬಶೀರ್ ಅಂಗರ ಗುಂಡಿ, ಸದಸ್ಯರುಗಳಾಗಿ ಫಾರೂಕ್ ಮುಕ್ಕ, ಮುಹಮ್ಮದ್ ಶೆಡ್ಯ, ಹಕೀಂ ಕಾನ, ಅಮೀರುದ್ದೀನ್ ಕಾಲೋನಿ, ಇರ್ಷಾದ್ ಕುಳಾಯಿ, ಎಸ್. ಕೆ ಮುಸ್ತಫಾ ಆಯ್ಕೆಯಾದರು.

ಜಿಲ್ಲಾ ಕಾರ್ಯಾಧ್ಯಕ್ಷ ಮನ್ಸೂರ್ ರಯ್ಯಾನ್ ಪ್ರಾಸ್ತಾವಿಕ ಭಾಷಣಗೈದರು. ಮರ್ಕಝ್ ತಅಲಿಮಿಲ್ ಇಹ್ಸಾನ್ ವ್ಯವಸ್ಥಾಪಕರಾದ ಬಹು! ಯು.ಕೆ. ಮುಸ್ತಫ ಸಅದಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಜಿ. ಎಂ ಕುಂಞ ನೂತನ ಸಮಿತಿಗೆ ಶುಭ ಹಾರೈಸಿದರು. ಸುರತ್ಕಲ್ ಘಟಕದ ನೂತನ ಅಧ್ಯಕ್ಷರು ಸಂದರ್ಭೋಚಿತವಾಗಿ ಮಾತನಾಡಿದರು.
ಸಭೆಯಲ್ಲಿ ನಝೀರ್ ಕಣ್ಣಂಗಾರ್, ಇಬ್ರಾಹೀಂ ದುಬಾಲ್, ಅಬ್ದುರ್ರಹ್ಮಾನ್ ಸೂರಿಂಜೆ, ನವಾಝ್ ಉಪ್ಪಿನಂಗಡಿ, ಸಾಬಿತ್ ಉಪ್ಪಿನಂಗಡಿ, ಅಲ್ ಇಹ್ಸಾನ್ ಎಜ್ಯುಕೇಷನ್ ಸಮಿತಿ ಸದಸ್ಯರಾದ ಇಖ್ಬಾಲ್ ಕೃಷ್ಣಾಪುರ,ಹಾಗೂ ಡಿಕೆಯಸ್ಸಿಯ ಸದಸ್ಯರು, ಹಿತೈಷಿಗಳು ಭಾಗವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸಂಘಟನಾ ಕಾರ್ಯದರ್ಶಿ ಹಾಜಿ ಶಂಸುದ್ದೀನ್ ಬಳ್ಕುಂಜೆ ಸ್ವಾಗತಿಸಿ ನಿರೂಪಿಸಿದರು. ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಫಾರೂಖ್ ಅಹ್ಮದ್ ಕರ್ನಿರೆ ವಂದಿಸಿ ಸ್ವಲಾತುನ್ನಬಿ (ಸ) ಯೊಂದಿಗೆ ಸಭೆಯು ಮುಕ್ತಾಯವಾಯಿತು.

ಇದನ್ನೂ ಓದಿರಿ...