janadhvani

Kannada Online News Paper

ಇಶಾರ ಚಂದಾಭಿಯಾನ- SSF ಕೊಪ್ಪ ಡಿವಿಷನ್ ನಿಂದ ಪೋಸ್ಟರ್ ಪ್ರದರ್ಶನ

ಕೊಪ್ಪ:- SSF ಕೊಪ್ಪ ಡಿವಿಷನ್ ಮಟ್ಟದಲ್ಲಿ ಇಶಾರ ಚಂದಾಭಿಯಾನದ ಪೋಸ್ಟರ್ ಪ್ರದರ್ಶನವನ್ನು ಇಶಾರದ ಪ್ರಧಾನ ಸಂಪಾದಕರು ಮತ್ತು ಎಸ್.ಎಸ್.ಎಫ್ ರಾಷ್ಟ್ರೀಯನಾಯಕರು ಆಗಿರುವ ಕೆ‌.ಎಮ್ ಸಿದ್ದೀಕ್ ಮೊಂಟುಗೊಳಿ ಉಸ್ತಾದರ ನೇತ್ರತ್ವದಲ್ಲಿ ನಡೆಸಲಾಯಿತು‌.

ಜೊತೆಯಲ್ಲಿ ಡಿವಿಷನ್ ಮಟ್ಟದ ತರ್ಬೀಯಾ ಹಾಗೂ ತಮ್ರೀನ್ ತರಗತಿಯನ್ನು ಸಿದ್ದೀಕ್ ಮೊಂಟುಗೊಳಿ ಉಸ್ತಾದರ ತರಗತಿ ಮಂಡನೆಯೊಂದಿಗೆ ಕೊಪ್ಪದ ಮದಾರುಸುನ್ನಃದಲ್ಲಿ ನಡೆಸಲಾಯಿತು. ಯಾಸೀನ್ ಶೆಟ್ಟಿಕೊಪ್ಪ ಅವರು ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು‌ ನೀಡಿದರು.

ಸ್ವಾಗತ ಭಾಷಣವನ್ನು ಎಸ್ ಎಸ್ ಎಫ್ ಕೊಪ್ಪ ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಸ್ತಫರವರು ನಡೆಸಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್ ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ಕುದುರೆಗುಂಡಿ,ಕೊಪ್ಪ ಡಿವಿಷನ್ ಹಣಕಾಸು ಕಾರ್ಯದರ್ಶಿ ಇರ್ಫಾನ್ ಶೆಟ್ಟಿಕೊಪ್ಪ ಮತ್ತು ಹಲವಾರು ಜಿಲ್ಲಾನಾಯಕರುಗಳು ಹಾಗೂ ಎ‍ಸ್.ಎಸ್.ಎಫ್ ಕೊಪ್ಪ ಡಿವಿಷನ್ ನಾಯಕರುಗಳು, ಎಲ್ಲಾ ಯೂನಿಟ್ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com