janadhvani

Kannada Online News Paper

ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ 34 ಲಕ್ಷ ಪರಿಹಾರ ದೊರಕಿಸಿದ KCF ಸೌದಿ ಅರೇಬಿಯಾ

ಬುರೈದ : 2016 ರಲ್ಲಿ ಸೌದಿ ಅರೇಬಿಯಾದ ಬುರೈದ ಎಂಬಲ್ಲಿ ವಾಹನ ಅಪಘಾತದಲ್ಲಿ ವಿಟ್ಲ ಸಮೀಪದ ಉರಿಮಜಲು ಶಾಹುಲ್ ಹಮೀದ್ ಎಂಬವರು ಮೃತಪಟ್ಟಿದ್ದರು. ಮೃತರ ದಫನ ಕಾರ್ಯವನ್ನು KCF ನಿರ್ವಹಿಸಿತು.

ನಂತರ ಅಪಘಾತದಿಂದ ದೊರೆಯಬೇಕಾದ ಪರಿಹಾರಕ್ಕಾಗಿ KCF ನಿರಂತರ 3 ವರ್ಷಗಳ ಕಾಲ ಇಲ್ಲಿನ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿತು. ಇದರ ಪರಿಣಾಮವಾಗಿ 1.80 ಲಕ್ಷ ಸೌದಿ ರಿಯಾಲ್ (34 ಲಕ್ಷ ರೂಪಾಯಿ ) ಮೂರು ಹಂತಗಳಲ್ಲಿ ದೊರೆಕಿತು.ಈ ಪರಿಹಾರಕ್ಕಾಗಿ KCF ನೊಂದಿಗೆ ಬುರೈದ ಭಾಗದ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಲತೀಫ್ ಶೇರಿ ಮತ್ತು KCF ನಾಯಕರಾದ ತಾಜುದ್ದೀನ್ ಕೆಮ್ಮಾರ ಸಂಪೂರ್ಣ ಸಹಕಾರ ಮತ್ತು ನ್ಯಾಯಾಲಯದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರು.

ಈ ಪರಿಹಾರವನ್ನು ದಿನಾಂಕ 15-02-2021 ರ KCF ಫೌಂಡೇಶನ್ ಡೇ ದಿನದಂದು ವಿಟ್ಲ ಅಳಕೆಮಜಲು ಹಿದಾಯತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆದ ಸರಳ ಸಭಾರಂಭದಲ್ಲಿ ಮೃತರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮವು ಸ್ಥಳೀಯ ಖತೀಬರಾದ ಶರೀಫ್ ಸಖಾಫಿ ಅವರ ದುವಾದೊಂದಿಗೆ ಆರಂಭಗೊಂಡಿತು.

ಮಹಮ್ಮದ್ ಸಹದಿ ಉಜಿರೆ ( ನಾಯಕರು KCF ಅಲ್ ಗಸೀಮ್ ಝೋನ್ ) ಉದ್ಘಾಟಿಸಿದರು. ಮೌಲಾನಾ ಯೂಸುಫ್ ಸಖಾಫಿ ಬೈತಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಅಲ್ಲಾಹುವಿನ ಅನುಲ್ಲಂಘನೀಯ ವಿಧಿಗೆ ಉತ್ತರ ನೀಡಿ ಶಾಹುಲ್ ಹಮೀದ್ ಮರಣ ಹೊಂದಿದಾಗ KCF ಅಲ್ ಗಸೀಮ್ ಝೋನ್ ತಕ್ಷಣ ಸ್ಪಂದಿಸಿ ಅವರ ದಫನ ಕಾರ್ಯ ಮತ್ತು ದೊಡ್ಡಮೊತ್ತದ ಪರಿಹಾರ ದೊರಕಿಸುವಲ್ಲಿ ಯಶಸ್ವಿಯಾಗಿದೆ ಇದು ನಾಯಕರ , ಕಾರ್ಯಕರ್ತರ ಇಕ್ಲಾಸಿನ ಕಾರ್ಯಾಚರಣೆಯ ಫಲವಾಗಿದೆ ಎಂದ ಅವರು ಝೋನ್ ನಾಯಕರನ್ನೂ ಕಾರ್ಯಕರ್ತರನ್ನೂ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಪ್ರಭಾಷಣ ನಡೆಸಿದ ಸೌದಿ ರಾಷ್ಟೀಯ ಸಮಿತಿ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಸಿದ್ದಿಕ್ ಸಖಾಫಿ ಪೆರುವಾಯಿ
KCF ತನ್ನ 8 ನೇ ವರ್ಷಾಚರಣೆಯ ಈ ಶುಭ ಸಂದರ್ಭದಲ್ಲಿ ಇಂತಹ ಒಂದು ಪರಿಹಾರ ಧನ ವಿತರಣೆ ನಡೆಸುತ್ತಿರುವುದು ನಿಜಕ್ಕೂ ಶ್ಲ್ಯಾಘನೀಯ. ಮೊದಲೆಲ್ಲ ವಿದೇಶಗಳಲ್ಲಿ ಮರಣ ಹೊಂದಿಂದಾಗ ವಾರಗಳ ಕಾಲ , ತಿಂಗಳುಗಳ ಕಾಲ ಮಯ್ಯತ್ ಅಲ್ಲಿ ಮೋರ್ಚರಿಯಲ್ಲಿ ಇಡಬೇಕಾಗಿತ್ತು , KCF ಕಾರ್ಯಾಚರಣೆ ಆರಂಭವಾದ ನಂತರ ಪ್ರವಾಸಿ ಕನ್ನಡಿಗರು ಸೇರಿದಂತೆ ಅನೇಕ ಮಯ್ಯಿತ್ ಗಳನ್ನೂ ಒಂದೆರೆಡು ದಿವಸಗಳಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಸರಿಪಡಿಸಿ ಇಸ್ಲಾಮಿನ ಶರಿಯತ್ ಪ್ರಕಾರ ತಕ್ಷಣ ದಫನ ಕಾರ್ಯ ನಿರ್ವಹಿಸುತ್ತಾ ಬಂದಿದೆ.

ಇಲ್ಲಿ ಇವತ್ತು ವಿತರಣೆಯಾಗುತ್ತಿರುವ ಪರಿಹಾರ ಧನ ಇದಕ್ಕಾಗಿ KCF ಅಲ್ ಕಸೀಮ್ ನೇತಾರರು ತಮ್ಮ ಒತ್ತಡದ ಕೆಲಸದ ಸಂದರ್ಭಗಳಲ್ಲಿಯೂ ಕೋರ್ಟ್, ಪೊಲೀಸ್ ಠಾಣೆ , ಇನ್ನಿತರ ಸಂಬಂಧಪಟ್ಟ ಕಚೇರಿಗಳಿಗೆ 3 ವರ್ಷಗಳ ಕಾಲ ನಿರಂತರವಾಗಿ ಅಲೆದಾಡಿದ ಪರಿಣಾಮವಾಗಿ ಇದೀಗ 34 ಲಕ್ಷದಷ್ಟು ದೊಡ್ಡ ಮೊತ್ತ ಪರಿಹಾರ ದೊರಕಿದೆ.

ಇಷ್ಟೆಲ್ಲಾ ಕೆಲಸಗಳಿಗೆ ಅದೆಷ್ಟು ಖರ್ಚುಗಳು ತಗುಲಿದರೂ, ಒಂದು ಬಾಟಲಿ ನೀರಿನ ಖರ್ಚನ್ನೂ ಸಹ ಸ್ವಂತ ಕೈಯಿಂದ ಕೊಟ್ಟು ಅಲ್ಲಿ ಸಿಕ್ಕಿದ ಎಲ್ಲಾ ಪರಿಹಾರವನ್ನು ಕುಟುಂಬಕ್ಕೆ ತಲುಪಿಸಿದ್ದಾರೆ . ಇದಾಗಿರುತ್ತದೆ ನಮ್ಮ ಸಂಘಟನೆಯ ವಿಶೇಷತೆ . KCF ಅನೇಕ ದೊಡ್ಡ ಮಟ್ಟದ ಸಾಂತ್ವನ ಕಾರ್ಯಾಚರಣೆ ನಡೆಸುವಾಗಲೂ ಅಲ್ಲಾಹುವಿನ ಪ್ರತಿಫಲ ಮತ್ತು ನಿಮ್ಮೆಲ್ಲರ ದುಃವಾ ಮಾತ್ರ ನಿರೀಕ್ಷೆಯಾಗಿರುತ್ತದೆ.

ಕಾರ್ಯಕ್ರಮದಲ್ಲಿ KCF ಅಂತಾರಾಷ್ಟ್ರೀಯ ನಾಯಕರಾದ DK ಉಮರ್ ಸಖಾಫಿ ಮಿತ್ತೂರು, ಫಾರೂಕ್ ಕಾಟಿಪಳ್ಳ ರಾಷ್ಟೀಯ ನಾಯಕರಾದ ಹಂಝ ಮೈಂದಾಳ , ಮುಸ್ತಫಾ ಹಾಸನ , sys ನಾಯಕರಾದ ಇಸ್ಮಾಯಿಲ್ ಮಾಸ್ಟರ್ ಅಶಂಷಾ ಮಾತನಾಡಿದರು.

ಇದಲ್ಲದೆ ವೇದಿಕೆಯಲ್ಲಿ ಅಳಕೆಮಜಲು ಜಮಾಯತ್ ಅಧ್ಯಕ್ಷರಾದ ಅಬ್ದುರಹ್ಮಾನ್ ಹಾಜಿ , ಕಾರ್ಯದರ್ಶಿ ಮೊಹಮ್ಮದ್ ಹಾಜಿ , ಕೋಶಾಧಿಕಾರಿ ಪುತ್ತು ಹಾಜಿ ಅಬ್ದುಲ್ ಖಾದರ್ ಮುಸ್ಲಿಯಾರ್ ಉರಿಮಜಲು ಜಮಾಯತ್ ಅಧ್ಯಕ್ಷರಾದ ರಝಕ್ ಟಿಂಬರ್ , ಅಳಕೆಮಜಲು ssf ಅಧ್ಯಕ್ಷರಾದ ರವೂಫ್ ಸಖಾಫಿ , ಕಾರ್ಯದರ್ಶಿ ಶಾಕಿರ್ 77, ರಝಕ್ ಕಟ್ಟಾ , ಹೈದರ್,
KCF ಮಾಜಿ ರಾಷ್ಟೀಯ ನಾಯಕರಾದ ಸಲೀಂ ಕನ್ಯಾಡಿ ಉಪಸ್ಥಿತರಿದ್ದರು.

ಅಲ್ ಕಸೀಮ್ zone / sector / unit ನಾಯಕರು , ಅಳಕೆಮಜಲು ಜಮಾಯತರು
SYS , SSF ನಾಯಕರು ಕಾರ್ಯಕರ್ತರು ಪಾಲ್ಗೊಂಡಿದ್ದರು . ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ KCF ನಾಯಕರಿಗೆ ಅಳಕೆಮಜಲು ಯೂನಿಟ್ SSF ವತಿಯಿಂದ ಸ್ಮರಣಿಕೆಯನ್ನು ನೀಡಲಾಯಿತು . ಬಾತಿಷಾ ಅಳಕೆಮಜಲು ಸ್ವಾಗತಿಸಿ , ಬಷೀರ್ ಕನ್ಯಾನ ವಂದಿಸಿದರು . ಕಾರ್ಯಕ್ರಮವನ್ನು ನಿರೂಪಣೆಯನ್ನು
MM ಆತೂರ್ ಅಚ್ಚುಕಟ್ಟಾಗಿ ನಿರ್ವಹಿಸಿದರು.

error: Content is protected !! Not allowed copy content from janadhvani.com