janadhvani

Kannada Online News Paper

ಆತ್ಮೀಯ ಶುದ್ಧಿಯೇ ಕಾರ್ಯಕರ್ತನ ಮೂಲ ದ್ಯೇಯವಾಗಬೇಕು- ಹಬೀಬ್ ನೂರಾನಿ

ಎಸ್ಸೆಸ್ಸೆಫ್‌ನ ಕಾರ್ಯಕರ್ತರು ಆತ್ಮ ಶುದ್ದಿಯೊಂದಿಗೆ, ಅಧಿಕಾರ ಮೋಹವಿಲ್ಲದೆ ಕಾರ್ಯ ಚರಿಸಬೇಕು. ಸಂಘಟನೆಯಲ್ಲಿ ಲಭಿಸುವ ವಿವಿಧ ಜವಾಬ್ದಾರಿಗಳನ್ನು ಅಲ್ಲಾಹನು ಧರ್ಮ ಸೇವೆ ಮಾಡಲು ನಮಗೆ ನೀಡುವ ಸೌಭಾಗ್ಯವಾಗಿದೆ. ಸಂಘಟನೆಗೆ ಮಹೋನ್ನತ ವ್ಯಕ್ತಿಗಳು ನೇತೃತ್ವವನ್ನು ನೀಡಿದ್ದು ಅವರು ವಹಿಸಿದ ಹುದ್ದೆಯಲ್ಲಿ ನಾವಿರುವಾಗ ಆ ಹುದ್ದೆಗೆ ಚ್ಯುತಿ ಬರದ ರೀತಿಯಲ್ಲಿ ಕಾರ್ಯಚರಿಸಬೇಕು.

ಸಂಘಟನೆಯಲ್ಲಿ ಮೇಲ್ಘಟಕಕ್ಕೆ ಹೋದಂತೆ ಆರಾಧನೆಗಳನ್ನು ಅಧಿಕ ಗೊಳಿಸುವ ಮೂಲಕ ಅಲ್ಲಾಹನಿಗೂ ಹತ್ತಿರವಾಗಬೇಕು. ಸಂಘಟನಾ ಚಟುವಟಿಕೆಗಳಿಗಾಗಿ ದಿನನಿತ್ಯದ ಆರಾಧನೆಗಳನ್ನು ಕಡಿತಗೊಳಿಸವವರಾಗಬಾರದು ಎಂದು ಜಿಲ್ಲಾ ಅಧ್ಯಕ್ಷರಾದ ಹಬೀಬ್ ನೂರಾನಿ ಉಸ್ತಾದರು .ಡಿವಿಷನ್ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಆಯೋಜಿಸಿದ್ದ ಶಿಬಿರ ಬಿದಾಯದಲ್ಲಿ ಮುಖ್ಯಪ್ರಭಾಷಣ ಮಾಡಿ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

. ಉದ್ಘಾಟನೆಯನ್ನು ಮಾಡಿದ ಜಿಲ್ಲಾ ಉಪಾಧ್ಯಕ್ಷ ಸ್ವಾದಿಕ್ ಸಖಾಫಿ ಉಸ್ತಾದರು ಶಿಭಿರದ ಮಹತ್ವವನ್ನು ವಿವರಿಸಿದರು.ಮುನ್ನುಡಿ ಭಾಷಣ ಮಾಡಿದ ಶಿಹಾಬ್ ಮಡಿವಾಳ ಈ ಕ್ಯಾಂಪ್ ಜಿಲ್ಲಾ ಸಮಿತಿಯು ಆಯೋಜಿಸುವ ಕ್ಯಾಂಪ್ ನ ಮುನ್ನುಡಿಯಾಗಿದ್ದು, ಮುಂಬರುವ ಕ್ಯಾಂಪ್ ನ ಸ್ವರೂಪ್ವನ್ನು ವಿವರಿಸಿದರು.ಪರಿಚಯ ಸೆಸನ್ ಗೆ ನೇತೃತ್ವ ನೀಡಿದ ರಾಜ್ಯ ನಾಯಕ ಶಾಫಿ ಸ‌ಅದಿ ಕಾರ್ಯಕರ್ತರು ವೈಯಕ್ತಿಕ ವಾಗಿಯೂ ಕೌಟುಂಬಿಕವಾಗಿಯೂ ಪರಸ್ಪರ ಅರಿತಿರಬೇಕಾದ ಮಹತ್ವದ ಕುರಿತು ತಿಳಿಸಿದರು.

ಜಿಲ್ಲಾ ಪ್ರ.ಕಾರ್ಯದರ್ಶಿ ಅಖ್ತರ್ ಹುಸೈನ್ ಸ್ವಾಗತಿಸಿ,ಕಾರ್ಯದರ್ಶಿ ಅಲ್ತಾಫ್ ಅಲಿ ವಂದಿಸಿದರು.

error: Content is protected !! Not allowed copy content from janadhvani.com