ರಿಯಾದ್: ಸೌದಿ ಅರೇಬಿಯಾದಲ್ಲಿ ಕರೋನಾ ರೋಗ ಹರಡುವುದನ್ನು ತಡೆಯಲು ವಿಧಿಸಲಾದ ವಿವಿಧ ನಿರ್ಬಂಧಗಳನ್ನು ಇನ್ನೂ 20 ದಿನಗಳವರೆಗೆ ವಿಸ್ತರಿಸಲಾಗಿದೆ ಎಂದು ಆಂತರಿಕ ಸಚಿವಾಲಯ ಪ್ರಕಟಿಸಿದೆ.
ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವನೆಗೆ ಅವಕಾಶವಿಲ್ಲ. ಪಾರ್ಸೆಲ್‌ಗಳನ್ನು ಮಾತ್ರ ಅನುಮತಿಸಲಾಗುವುದು. ಜನಸಂದಣಿ ಸಲ್ಲದು, ಸಾರ್ವಜನಿಕ ಕಾರ್ಯಕ್ರಮಗಳ ನಿಷೇಧ ಮುಂದುವರಿಕೆ. ಸಿನೆಮಾ ಹಾಲ್‌ಗಳು ಮತ್ತು ಮನರಂಜನಾ ಸ್ಥಳಗಳನ್ನು ಮುಚ್ಚುವುದನ್ನು ಮುಂದುವರಿಸಲಾಗುವುದು.
ಫೆಬ್ರವರಿ 3 ರಂದು ಗೃಹ ಸಚಿವಾಲಯ ಘೋಷಿಸಿದ 10 ದಿನಗಳ ನಿರ್ಬಂಧ ಇಂದು ಮುಕ್ತಾಯಗೊಳ್ಳುತ್ತಿರುವ ನಿಟ್ಟಿನಲ್ಲಿ ಈ ಹೊಸ ಆದೇಶ ಹೊರಡಿಸಲಾಗಿದೆ. ಇಂದು ರಾತ್ರಿ 10 ರಿಂದ ಮುಂದಿನ 20 ದಿನಗಳವರೆಗೆ ನಿರ್ಬಂಧಗಳನ್ನು ವಿಸ್ತರಿಸಲಾಗಿದೆ.
ಅದೇ ರೀತಿ ಕಳೆದ ಫೆ.3ರಿಂದ ಜಾರಿಗೊಂಡಿದ್ದ,ಯುಎಇ ಸಹಿತವಿರುವ 20 ದೇಶಗಳಿಂದ ಸೌದಿ ಪ್ರವೇಶ ನಿಶೇಧವು ಮುಂದುವರಿಯುವ ಸಾಧ್ಯತೆ ಇದ್ದು, ಭಾರತದಿಂದ ಯುಎಇ ಮೂಲಕ ಸೌದಿಗೆ ತೆರಳಲು ಯುಎಇಯಲ್ಲಿ ಉಳಿದಿರುವ ವಲಸಿಗರ ಪ್ರಯಾಣವು ಅಷ್ಪಶ್ಟವಾಗಿದೆ.
ಯುಎಇ ಯಲ್ಲಿನ ಭಾರತೀಯ ರಾಯಭಾರಿಯು, ಸಿಲುಕಿರುವ ಭಾರತೀಯರು ಸ್ವದೇಶಕ್ಕೆ ಮರಳುವುದು ಉತ್ತಮವೆಂದು ತಿಳಿಸಿದ್ದರು.
ಇದನ್ನೂ ಓದಿ…
ಸೌದಿ: ಮನರಂಜನೆ, ಸಮಾರಂಭಗಳಿಗೆ ತಾತ್ಕಾಲಿಕ ನಿಷೇಧ- ಇಂದಿನಿಂದ ಜಾರಿ