janadhvani

Kannada Online News Paper

ದುಲ್ ಫುಖಾರ್ ಗಲ್ಫ್ ಕಮಿಟಿ ಅಧ್ಯಕ್ಷರಾಗಿ ಬಶೀರ್ ಚೆಡವು ಪುನರಾಯ್ಕೆ

ಕನ್ಯಾನ: ಬಡ ಹಾಗೂ ಅನಾಥರ ಸೇವೆಯಲ್ಲಿ ಕಳೆದೆರಡು ದಶಕಗಳಿಂದ ಕನ್ಯಾನದ ಹೃದಯ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ದುಲ್ ಪುಖಾರ್ ಸೇವಾ ಸಂಘ (ರಿ) ಚೆಡವು ಕನ್ಯಾನ ಇದರ ಅಂಗ ಸಂಸ್ಥೆಯಾಗಿ ಕಳೆದ ಹಲವಾರು ವರ್ಷಗಳಿಂದ GCC ಯಾದ್ಯಂತವಿರುವ ಸದಸ್ಯರಳನ್ನೊಳಗೊಂಡ ದುಲ್’ಪುಖಾರ್ ಗಲ್ಫ್ ಕಮಿಟಿಯ 2020 ನೇ ಸಾಲಿನ ವಾರ್ಷಿಕ ಮಹಾಸಭೆ ಫೆ.12 ರಂದು ಅಧ್ಯಕ್ಷರಾದ ಬಶೀರ್ ಚೆಡವು ಅಧ್ಯಕ್ಷತೆಯಲ್ಲಿ ಆನ್ಲೈನ್ ನಲ್ಲಿ ನಡೆಯಿತು

ಗೌರವಾಧ್ಯಕ್ಷರಾದ ಮಾಲಿಕ್ ಅಮಾನಿ ಉಸ್ತಾದರ ದುವಾದೊಂದಿಗೆ ಪ್ರಾರಂಭಗೊಂಡ ಸಭೆಯನ್ನು ಜಬ್ಬಾರ್ ಸಖಾಫಿ ಉದ್ಘಾಟಿಸಿದರು. ಕಾರ್ಯದರ್ಶಿ ಅಶ್ರಫ್ ಚೆಡವು ಸ್ವಾಗತಿಸಿದರು.ಪ್ರ.ಕಾರ್ಯದರ್ಶಿ ಖಲೀಲ್ ಮಾರಾಟಿ ಮೂಲೆ ವಾರ್ಷಿಕ ವರದಿ ವಾಚಿಸಿದರು.

ದುಲ್ಫುಖಾರ್ ಗಲ್ಫ್ ಕಮಿಟಿ 2021 ಸಾರಥಿಗಳು

ಗೌರಾವಾಧ್ಯಕ್ಷರು:ಮಾಲಿಕ್ ಅಮಾನಿ ಉಸ್ತಾದ್.

ಅಧ್ಯಕ್ಷರು:ಬಶೀರ್ ಚೆಡವು

ಉಪಾಧ್ಯಕ್ಷರು:ಜಲಾಲ್ ಮರಾಠಿ ಮೂಲೆ, ಸಿದ್ದೀಕ್ ಸಮಡ್ಕ

ಪ್ರಧಾನ ಕಾರ್ಯದರ್ಶಿ:ಖಲೀಲ್ ಮರಾಠಿಮೂಲೆ

ಜೊತೆ ಕಾರ್ಯದರ್ಶಿಗಳು:ಅಶ್ರಫ್ ಚೆಡವು, ನೌಸೀಫ್ M.M, ನವಾಫ್ ಬಾಳ್ತ್ರೋಡಿ

ಕೋಶಾಧಿಕಾರಿ:ಅಲ್ಥಾಫ್ ಮರಾಠಿ ಮೂಲೆ

ಲೆಕ್ಕ ಪರಿಶೋಧಕರು: ಅಬ್ಝಲ್ ಕಬ್ಬಿಣಮೂಲೆ

ಹಿರಿಯ ಸಲಹೆಗಾರರು:ಡಿ ಕೆ.ಲತೀಫ್ ಹಾಜಿ, ಮೈೂದಿನ್ ಹಾಜಿ ಪಾಡಿ, ಜಲಾಲ್ ಬಾಳ್ತ್ರೋಡಿ, ರಂಝಾನ್ ಮಡಕುಂಜ

ಸಂಚಾಲಕರು:ರಝಾಕ್ ಕಣಿಯೂರು, ರಹೀಂ.ಜಿ.ಕೆ, ಇಸ್ಮಾಯಿಲ್ ಹಾಜಿ ಪರಿಂಕಿಲ್

ಮೀಡಿಯಾ ವಿಂಗ್:ರಫೀಕ್ ಮಂಡ್ಯೂರ್, ಸಾಲಿ.ಬಿ.ಕೆ

ಕೊನೆಯಲ್ಲಿ ನೌಸಿಫ್ ಧನ್ಯವಾದಗೈದರು

ವರದಿ:- ಮೀಡಿಯಾ ವಿಂಗ್ ದುಲ್ಪುಖಾರ್

error: Content is protected !! Not allowed copy content from janadhvani.com