ಎಸ್ಸೆಸ್ಸೆಫ್ ಮರಿಕ್ಕಳ ಯುನಿಟ್ ವತಿಯಿಂದ ಶೈಖುನಾ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ಅನುಸ್ಮರಣಾ ಸಂಗಮವು ಜನವರಿ 28 ಗುರುವಾರ ರಾತ್ರಿ 7 ಗಂಟೆಗೆ ಮರಿಕ್ಕಳದಲ್ಲಿ ನಡೆಯಲಿರುವುದು.
ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ ಫಾರೂಕ್ ನಯೀಮಿ ಕೊಲ್ಲಂ ಅನುಸ್ಮರಣಾ ಪ್ರಭಾಷಣ ಮಾಡಲಿದ್ದಾರೆ.ಮರಿಕ್ಕಳ ಜುಮಾ ಮಸ್ಜಿದ್ ಮುದರ್ರಿಸ್ ಅಬ್ಬಾಸ್ ಸಖಾಫಿ ಮಡಿಕೇರಿ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ಕಾರ್ಯಕ್ರಮದಲ್ಲಿ ಮಂಗಳೂರು ಶಾಸಕರಾದ ಯು.ಟಿ.ಖಾದರ್ , ಝೈನುಲ್ ಆಬಿದ್ ಸಖಾಫಿ,ಜಬ್ಬಾರ ಸಅದಿ,ಸಿದ್ದೀಕ್ ಝುಹ್ರಿ,ಅಬ್ಬಾಸ್ ಕೊಡಂಚಿಲ್,ಹನೀಫ್ ಚಂದಹಿತ್ಲು,ಅಬ್ದುಲ್ ಜಲೀಲ್ ಮೋಂಟುಗೋಳಿ,ಆಲಿಕುಂಞಿ ಮೋಂಟುಗೋಳಿ,ಬಶೀರ್ ಮೋಂಟುಗೋಳಿ, ಮನ್ಸೂರು ಹಿಮಮಿ, ಅಝರ್ ಅಗಲ್ತಬೆಟ್ಟು, ಇಬ್ರಾಹಿಂ ಕೆಸಿಎಫ್ ದುಬೈ,ನರಿಂಗಾನ ಗ್ರಾಮ ಪಂಚಾಯತ್ ಸದಸ್ಯ ಅಬ್ದುರ್ರಹ್ಮಾನ್ ಚಂದಹಿತ್ತಿಲು ಮೊದಲಾದ ಧಾರ್ಮಿಕ,ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ಮರಿಕ್ಕಳ ಯುನಿಟ್ ಅಧ್ಯಕ್ಷ ಮಜೀದ್ ಮಜಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
ದಿಶಾ ರವಿ ಬಂಧನ ವಿರೋಧಿಸಿ ಉಪ್ಪಿನಂಗಡಿ NWF ನಿಂದ ಭಿತ್ತಿಪತ್ರ ಪ್ರದರ್ಶನ,ಪ್ರತಿಭಟನೆ
ಮುಹಬ್ಬತೇ ಅಸಾಸ್ ಸಮಿತಿಗೆ ನವ ಸಾರಥ್ಯ
ಕುಪ್ಪೆಪದವು: ಫೆ. 25 ರಂದು ಆಧ್ಯಾತ್ಮಿಕ ಮಜ್ಲಿಸುಲ್ ಬದ್ರಿಯಾ ಚಾಲನೆ
ದುಲ್ ಫುಖಾರ್ ಗಲ್ಫ್ ಕಮಿಟಿ ಅಧ್ಯಕ್ಷರಾಗಿ ಬಶೀರ್ ಚೆಡವು ಪುನರಾಯ್ಕೆ
ಕೆ.ಸಿ.ರೋಡ್: ಕರ್ಷಕಶ್ರೀ ಹಾಲಿನ ಬೂತ್ ಶುಭಾರಂಭ
ಗುರುಪುರ ಕೈಕಂಬದಲ್ಲಿ ಮೆಡ್ ಗ್ಲೋಬ್ ಕ್ಲಿನಿಕಲ್ ಲ್ಯಾಬೊರೇಟರಿ ಶುಭಾರಂಭ