janadhvani

Kannada Online News Paper

ಕೆಸಿಎಫ್ ಕುವೈಟ್ ವತಿಯಿಂದ ಗಣರಾಜ್ಯೋತ್ಸವ ಆಚರಣೆ

ಕುವೈತ್: ಕರ್ನಾಟಕ ಕಲ್ಚರಲ್ ಫೌಂಡೇಷನ್
ಕೆಸಿಎಫ್ ಕುವೈಟ್ ಇದರ ವತಿಯಿಂದ ದಿನಾಂಕ 26-01-2021 ರ ರಾತ್ರಿ 8:00 ಗಂಟೆಗೆ ಸಾಮಾಜಿಕ ಜಾಲತಾನ ಝೂಮ್ ಮೂಲಕ ಕೆಸಿಎಫ್ ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ ಬೈಲ್ ಅವರ ಅಧ್ಯಕ್ಷತೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕೆಸಿಎಫ್ ಕುವೈಟ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಬಹುಮಾನ್ಯ ಬಾದುಶ ಸಖಾಫಿ ಉದ್ಘಾಟಿಸಿದರು. ಮುಖ್ಯ ಪ್ರಭಾಷಣಕಾರರಾಗಿ SSF ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ಶೌಕತ್ ನಈಮಿ ಅಲ್ ಬುಖಾರಿ ಗಣರಾಜ್ಯೋತ್ಸವದ ಬಗ್ಗೆ ಪ್ರಭಾಷಣಗೈದು ದೇಶದ ಭವ್ಯತೆಯನ್ನು ಬಿಂಬಿಸಿದರು.

ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಾಂತ್ವಾನ ಅಧ್ಯಕ್ಷರಾದ ಯಾಕೂಬ್ ಕಾರ್ಕಳ,ಕೆಸಿಎಫ್ ಕುವೈಟ್ ಸೌತ್ ಝೋನ್ ಕಾರ್ಯದರ್ಶಿ ಬಹುಮಾನ್ಯ ಶಾಹುಲ್ ಹಮೀದ್ ಸಅದಿ ಝುಹ್ರಿ,ಕೆಸಿಎಫ್ ಕುವೈಟ್ ಮಹಬುಲ ಸೆಕ್ಟರ್ ಅಧ್ಯಕ್ಷರಾದ ಬಹುಮಾನ್ಯ ಉಮರ್ ಝುಹ್ರಿ ಆಶಂಷ ಗೈದರು.ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಂಘಟನಾ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಕಾರ್ಯಕ್ರಮ ನಿರೂಪಿಸಿದರು.

ಕೆಸಿಎಫ್ ಕುವೈಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಕರ್ರಿಯಾ ಆನೆಕಲ್ ಸ್ವಾಗತಿಸಿದರು.ಕೆಸಿಎಫ್ ಕುವೈಟ್ ರಾಷ್ಟ್ರೀಯ ಶಿಕ್ಷಣ ಕಾರ್ಯದರ್ಶಿ ಮುಸ್ತಫ ಉಳ್ಳಾಲ ಧನ್ಯವಾದಗೈದರು.

error: Content is protected !! Not allowed copy content from janadhvani.com