SSF ಮಧ್ಯನಡ್ಕ ಶಾಖೆಯ ವತಿಯಿಂದ 72ನೇ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಮತ್ತು ಕಿಸಾನ್ ರಿಪಬ್ಲಿಕ್ ಡೇ ಸಂದೇಶವು ಹಿರಿಯ ಕೃಷಿಕರಾದ ಇಸ್ಮಾಯಿಲ್ ಹಾಜಿ ಮಧ್ಯನಡ್ಕ ಇವರ ತೋಟದಲ್ಲಿ, ತ್ವಾಹ ಜುಮಾ ಮಸ್ಜಿದ್ ಮಧ್ಯನಡ್ಕ ಇದರ ಅಧ್ಯಕ್ಷರಾದ ಎಂ.ಅಬೂಬಕ್ಕರ್ ಇವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.
ಸ್ಥಳೀಯ ಖತೀಬರಾದ ಬಹು:ಕೆ.ಬಿ ಅಬ್ದುರ್ರಹ್ಮಾನ್ ಮದನಿ ಇವರು ದುವಾ ನೆರವೇರಿಸಿದರು.ಪ್ರಗತಿಪರ ಕ್ರಿಷಿಕರಾದ ಉಮರ್ .ಎಂ ರವರು ಧ್ವಜರೋಹಣಗೈದರು. ಹಿದಾಯತುಲ್ ಇಸ್ಲಾಂ ಮದ್ರಸ ಇದರ ಮುಖ್ಯೋಪಾಧ್ಯಾಯರಾದ ಹುಸೈನ್ ಸಖಾಫಿ ಕೊಡಕ್ಕಲ್ ಸಂವಿಧಾನ ಮತ್ತು ರೈತರ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
SSF ಶಾಖಾ ಅಧ್ಯಕ್ಷರಾದ ಎಂ.ಜವಾಝ್ ರವರು ಗಣರಾಜ್ಯೋತ್ಸವ ಪ್ರತಿಜ್ಞಾ ವಿಧಿ ಬೋಧಿಸಿದರು. H.I ಮದ್ರಸ SBS ಮಕ್ಕಳು ರಾಷ್ಟ್ರಗೀತೆ ಹಾಡಿದರು.ಪ್ರಸ್ತುತ ಕಾರ್ಯಕ್ರಮದಲ್ಲಿ TJM ಆಡಳಿತ ಸಮಿತಿಯ ಉಪಾಧ್ಯಕ್ಷ ರಾದ ಹಸೈನಾರ್ ಹಾಜಿ ಸೀಗೆದಡಿ,SYS ಸದಸ್ಯರಾದ ಮೂಸಾ ಎಂ,ಇಬ್ರಾಹಿಂ ಕೆ.ಎಂ,SSF ಮಧ್ಯನಡ್ಕ ಶಾಖೆ ಮಾಜಿ ಅಧ್ಯಕ್ಷರಾದ ಆಸಿಪ್ ಕೆ.ಎಂ,ಹಾಗೂ SSF ಸದಸ್ಯರು ಮತ್ತು ಇನ್ನಿತರರು ಹಾಜರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ SSF ದ.ಕ ಜಿಲ್ಲಾ ವೆಸ್ಟ್ ಇದರ ಕೋಶಾಧಿಕಾರಿಯಾದ ಇಕ್ಬಾಲ್ ಮಧ್ಯನಡ್ಕ ರವರು ಸ್ವಾಗತಿಸಿ, SSF ಮಧ್ಯನಡ್ಕ ಶಾಖಾ ಪ್ರಧಾನ ಕಾರ್ಯದರ್ಶಿ ಯಾಸೀನ್ ಬೋಳ್ಯಾರ್ ಧನ್ಯವಾದಗೈದರು.