ಬದ್ರಿಯಾ ಜುಮಾ ಮಸ್ಜಿದ್ ಕುಪ್ಪೆಪದವು ಇದರ ವಾರ್ಷಿಕ ಮಹಾಸಭೆಯು ಮದೀನತುಲ್ ಉಲೂಂ ಹೈಯರ್ ಸೆಕೆಂಡರಿ ಮದ್ರಸ ಹಾಲ್ ನಲ್ಲಿ ಜರುಗಿತು ಸ್ಥಳೀಯ ಖತೀಬರಾದ ಅಬೂ ಝೈದ್ ಶಾಫಿ ಮದನಿ ಕರಾಯ ರವರು ಮಾತನಾಡಿ ಮಸ್ಜಿದ್ ಮತ್ತು ಜಮಾಅತಿನ ಪ್ರಾಧಾನ್ಯತೆಯ ಬಗ್ಗೆ ಮಾತನಾಡಿ ಮಸೀದಿಯ ಪಾವಿತ್ರ್ಯತೆಯನ್ನು ಕಾಪಾಡ ಬೇಕೆಂದು ಕರೆ ನೀಡಿದರು.
ಪ್ರಧಾನ ಕಾರ್ಯದರ್ಶಿ ಕೆ. ರಫೀಖ್ ಆಚಾರಿಜೋರ ರವರು ವಾರ್ಷಿಕ ಆಯಾ -ವ್ಯಯಗಳನ್ನು ಮಂಡಿಸಿ ಸರ್ವಾನುಮತದೊಂದಿಗೆ ಅಂಗೀಕರಿಸಿ ಹಾಲಿ ಸಮಿತಿಯನ್ನು ಸರ್ವಾನುಮತದಿಂದ ಮುಂದುವರಿಸಲಾಯಿತು.
ಅಧ್ಯಕ್ಷರಾಗಿ ಕೆ. ಉಮರಬ್ಬ, ಉಪಾಧ್ಯಕ್ಷರಾಗಿ ಅಬ್ದುಲ್ ರಝ್ಝಾಕ್ ಹಾಜಿ ಬ್ಲೂ ಸ್ಟಾರ್ , ಪ್ರಧಾನ ಕಾರ್ಯದರ್ಶಿಯಾಗಿ ಕೆ ರಫೀಖ್ ಆಚಾರಿಜೋರ , ಜೊತೆ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಶರೀಫ್ ಕೋಶಾಧಿಕಾರಿಯಾಗಿ ಉಸ್ಮಾನ್ ಮುರ.
ಸಮಿತಿ ಸದಸ್ಯರಾಗಿ,ಇಬ್ರಾಹಿಂ ಹಾಜಿ, ಮುಹಮ್ಮದ್ ಶರೀಫ್ ಕಜೆ, ಅಬ್ದುಲ್ ರಝ್ಝಾಕ್ ಪದವಿನಂಗಡಿ , ಅಬೂಬಕರ್ ಪಡೀಲ್ ಪದವು , ಅಬ್ದುಲ್ ಲತೀಫ್ ಆಚಾರಿಜೋರ , ಅಬ್ದುರ್ರಹ್ಮಾನ್ ( ಮೋನು) ಕುಪ್ಪೆಪದವು ಆಯ್ಕೆಯಾದರು ..
ಸಭೆಯ ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ರಫೀಖ್ ಆಚಾರಿಜೋರ ಸ್ವಾಗತಿಸಿ ಜೊತೆ ಕಾರ್ಯದರ್ಶಿ ಇಸ್ಮಾಯಿಲ್ ಶರೀಫ್ ಧನ್ಯವಾದಗೈದರು.