janadhvani

Kannada Online News Paper

ಸಾಲಗಾರರ ಆಸ್ತಿ ಜಪ್ತಿ: ಜಿಲ್ಲಾಧಿಕಾರಿಗಳ ಏಕಪಕ್ಷೀಯ ಕ್ರಮವನ್ನು ಖಂಡಿಸಿ PUCL ಪ್ರತಿಭಟನೆ

ಮಂಗಳೂರು,ಜ.7: ಸಾಲ ವಸೂಲಾತಿ, ಆಸ್ತಿ ಜಪ್ತಿ ಪ್ರಕ್ರಿಯೆಗಳಲ್ಲಿ ಜಿಲ್ಲಾಧಿಕಾರಿಗಳು ಸಾಲಗಾರರ ಪ್ರತಿಕ್ರಿಯೆಯನ್ನು ಆಲಿಸದೆ, ಕೇವಲ ಬ್ಯಾಂಕ್ ಆದೇಶವನ್ನು ಪಾಲಿಸಿ ಏಕಪಕ್ಷೀಯವಾಗಿ ಕ್ರಮ ಜರುಗಿಸುವ ವಿರುದ್ಧ ಇಂದು ಮಂಗಳೂರಿನಲ್ಲಿ ಪೀ.ಯು.ಸಿ.ಎಲ್ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿ ಸ್) ಎನ್.ಜಿ. ಓ.ಸಂಸ್ಥೆಯು ಪ್ರತಿಭಟನೆ ನಡೆಸಿದೆ.

ಇತ್ತೀಚೆಗೆ ಬ್ಯಾಂಕ್ ವಂಚನೆಗಳು ಅಧಿಕಾವಾಗಿ, ಆರ್.ಬಿ. ಐ ವರದಿ ಪ್ರಕಾರ ಕಳೆದ ಹಣ ಕಾಸು ವರ್ಷದಲ್ಲಿ ದೇಶದಲ್ಲಿ 1.80 ಲಕ್ಷ ಕೋಟಿ ರೂಪಾಯಿ ವಂಚನೆ ಸೃಷ್ಟಿಯಾಗಿದ್ದು, ಸರ್ಫೆಸಿಯ ಕಾನೂನು ಪ್ರಕಾರ ಬ್ಯಾಂಕ್ ವಸೂಲಾತಿ ಪ್ರಕ್ರಿಯೆಯಲ್ಲಿ ಜಿಲ್ಲಾಧಿಕಾರಿಗಳು ಸಮರ್ಪಕ ಪ್ರೊಸೀಡಿಂಗ್ಸ್ ನಡೆಸದೆ ಏಕಾಏಕಿ ಸಾಲಗಾರರ ಆಸ್ತಿ ಜಪ್ತಿ ಮಾಡಲು ಆದೇಶಿಸುವುದು ಕಾನೂನಿಗೆ ವಿರೋಧವಾಗಿದೆ.

ಮುಂದೆ ಜಿಲ್ಲಾಧಿಕಾರಿಗಳು ಇಂತಹ ಪ್ರಕರಣಗಳಲ್ಲಿ, ಬ್ಯಾಂಕ್ ಗಳ ವಸೂಲಾತಿ ಅರ್ಜಿ ಆದೇಷಗಳಲ್ಲಿ, ಬ್ಯಾಂಕ್ ಸಲ್ಲಿಸುವ ದಾಖಲೆಗಳು ಸಮರ್ಪಕವಾಗಿದೆಯೆ ಎಂದು ಕೂಲಂಕಷ ತನಿಖೆ ನಡೆಸಬೇಕು. ಸಾಲಗಾರರಿಗೆ ನಿರ್ಧಿಷ್ಟ ವಿಧದ ಆಕ್ಷೇಪಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿ, ಅವರ ಪ್ರತಿಕ್ರಿಯೆಯನ್ನೂ ಆಲಿಸಿ ಸಮರ್ಪಕವಾಗಿ ವಸೂಲಾತಿ ಮತ್ತು ಜಪ್ತಿ ಆದೇಶ ಜರುಗಿಸಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಬ್ಯಾಂಕ್ ಅಕ್ರಮ ವಸೂಲಾತಿ ಸಂತ್ರಸ್ತೆ ನೋಯಲ್ ಮೈಕಲ್ ಸಲ್ದಾನ ಮತ್ತು ಜಾನ್ ಸಲ್ದಾನ ರವರು ಸೇರಿದಂತೆ ಎನ್.ಜಿ. ಓ ಸದಸ್ಯರು ಹಾಗೂ ಅಧ್ಯಕ್ಷರಾದ ಈಶ್ವರ್ ರಾಜ್,ಕಾರ್ಯದರ್ಶಿ ಅಜಯ್ ಡಿ ಡಿಸಿಲ್ವಾ, ಕೋಶಾಧಿಕಾರಿ ಹನೀಫ್ ಪಾಜೇಪಲ್ಲ , ಸದಸ್ಯರಾದ ಮೊಹಮ್ಮದ್ ಹನೀಫ್ ಯು,ಸಮೀರ್ ಆರ್.ಕೆ, ಬಶೀರ್ ಹೋಕ್ಕಾಡಿ, ಅಗಸ್ಟೀನ್ ರೊಡ್ರಿಗ್ ಸ್ ಮತ್ತಿತರರು ಭಾಗವಹಿಸಿದ್ದರು.

error: Content is protected !! Not allowed copy content from janadhvani.com