janadhvani

Kannada Online News Paper

ಮಂಗಳೂರು ನರ್ಸಿಂಗ್ ಕಾಲೇಜ್: ಮತ್ತೆ6 ವಿದ್ಯಾರ್ಥಿಗಳಿಗೆ ಕೋವಿಡ್

ಮಂಗಳೂರು: ಕಳೆದ ವಾರ ನರ್ಸಿಂಗ್ ಕಾಲೇಜಿನ 77 ವಿದ್ಯಾರ್ಥಿಗಳಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದ್ದು, ಇದೀಗ ಸೋಮವಾರ ಮತ್ತೊಂದು ಕಾಲೇಜಿನ ಆರು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ.

ಕೋವಿಡ್‌–19 ದೃಢಪಟ್ಟವರಲ್ಲಿ ಬಹುತೇಕ ವಿದ್ಯಾರ್ಥಿಗಳು ಕೇರಳದವರಾಗಿದ್ದಾರೆ ಎಂದು ಹೇಳಲಾಗಿದೆ. ಮಾರ್ಗಸೂಚಿ ಪ್ರಕಾರ, ಇತರ ರಾಜ್ಯಗಳು ಮತ್ತು ಜಿಲ್ಲೆಗಳಿಂದ ಶಿಕ್ಷಣ ಸಂಸ್ಥೆಗಳಿಗೆ ಬರುವ ವಿದ್ಯಾರ್ಥಿಗಳು, ಇಲ್ಲಿಗೆ ಬರುವ 72 ಗಂಟೆಗಳ ಒಳಗೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. ನೆಗೆಟಿವ್‌ ವರದಿ ಹೊಂದಿರಬೇಕು.

ನರ್ಸಿಂಗ್ ಕಾಲೇಜಿನ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಕೋವಿಡ್–19 ಪತ್ತೆಯಾಗಿದ್ದರಿಂದ ಕಾಲೇಜು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಕಂಟೈನ್‌ಮೆಂಟ್‌ ವಲಯವೆಂದು ಘೋಷಿಸಲಾಗಿದೆ. 14 ದಿನಗಳ ಕ್ವಾರಂಟೈನ್‌ ವಿಧಿಸಲಾಗಿದೆ.

ನರ್ಸಿಂಗ್‌ ಕಾಲೇಜಿಗೆ ಆರೋಗ್ಯ ಇಲಾಖೆ ಶೋಕಾಸ್‌ ನೊಟೀಸ್‌ ನೀಡಿತ್ತು. ಆದರೆ ಕಾಲೇಜು ನೀಡಿದ ಉತ್ತರ ತೃಪ್ತಿಕರ ಇಲ್ಲದ್ದರಿಂದ ಕಾಲೇಜು ಆವರಣದ ಸುತ್ತಲೂ ಕಂಟೈನ್‌ಮೆಂಟ್‌ ವಲಯವೆಂದು ಘೋಷಿಸಲಾಗಿದೆ. ಸದ್ಯ ಆರು ಸೋಂಕಿತರು ಪತ್ತೆಯಾದ ನರ್ಸಿಂಗ್ ಕಾಲೇಜಿಗೂ ನೋಟಿಸ್ ನೀಡಲಾಗಿದೆ.

error: Content is protected !! Not allowed copy content from janadhvani.com