ಪುತ್ತಿಲ: ಎಸ್ಸೆಸ್ಸೆಫ್ ಕಳಂಜಿಬೈಲ್ ಯುನಿಟ್ ಇದರ ವಾರ್ಷಿಕ ಮಹಾಸಭೆಯು ಎಸ್ಸೆಸ್ಸೆಫ್ ಮೂರುಗೋಳಿ ಸೆಕ್ಟರ್ ಸಮಿತಿಯ ವೀಕ್ಷಣೆಯಲ್ಲಿ ಖುವ್ವತುಲ್ ಇಸ್ಲಾಂ ಮದ್ರಸ ಹಾಲ್ ಕಳಂಜಿಬೈಲ್ ನಲ್ಲಿ ಜರುಗಿತು.
ಸ್ಥಳೀಯ ಖತೀಬರಾದ ಬಿ ವೈ ಅಬ್ದುಲ್ ಹಮೀದ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಂ.ಜೆ.ಎಂ ಕಳಂಜಿಬೈಲ್ ಜಮಾಅತ್ ಅಧ್ಯಕ್ಷರಾದ ಕೆ.ಎಚ್ ಅಬೂಬಕ್ಕರ್, ಜಮಾಅತ್ ಪ್ರ.ಕಾರ್ಯದರ್ಶಿ ಇಬ್ರಾಹಿಂ ಕಲ್ಲಕಟ್ಟ ಶುಭಹಾರೈಸಿದರು. ದ.ಕ ಜಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಅಲಿ ತುರ್ಕಲಿಕೆ ತರಗತಿ ಮಂಡನೆ ಮಾಡಿದರು.
ಸೆಕ್ಟರ್ ವೀಕ್ಷರಾದ ಸಿದ್ದೀಕ್ ಬೇಂಗಿಲ, ಫಯಾಝ್ ತುರ್ಕಳಿಕೆ ಇವರ ನೇತೃತ್ವದಲ್ಲಿ ಹಳೇ ಸಮಿತಿಯನ್ನು ಬರ್ಕಾಸ್ಸು ಗೊಳಿಸಿ ಹೊಸ ಸಮಿತಿಗೆ ಚಾಲನೆ ನೀಡಲಾಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ಹಾರಿಸ್ ಮುಈನೀ ಸಖಾಫಿ ಕರ್ಪಾಡಿ, ಉಪಾಧ್ಯಕ್ಷರಾಗಿ ಅಶ್ರಫ್ ಸ್ವಾಧಿಕ್ ಮದನಿ ಮತ್ತು ಅಶ್ರಫ್ ಕೆ.ಎಚ್, ಪ್ರಧಾನ ಕಾರ್ಯದರ್ಶಿಯಾಗಿ ನಜೀಬ್ ಡಿ.ಕೆ, ಕೋಶಾಧಿಕಾರಿಯಾಗಿ ಇರ್ಫಾದ್ ಪಿಕೆ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಸಾಜಿದ್ ಡಿ.ಕೆ ಹಾಗೂ ಕಾರ್ಯದರ್ಶಿಗಳಾಗಿ ಜಾಬಿರ್ ಕೆಪಿ, ನೌಶಾದ್ ಪಳ್ಳಿಗುಡ್ಡೆ, ಶಫೀಕ್ ಅನಿಯ, ಸೈಫ್ ಹೇರಾಜೆ, ಹಸೈನಾರ್ ಮುಸ್ಲಿಯಾರ್,ಇಮ್ರಾನ್ ಪಿ.ಎಚ್ ಹಾಗೂ 22 ಸದಸ್ಯರನ್ನೊಳಗೊಂಡ ನೂತನ ಸಮಿತಿಯನ್ನು ರಚಿಸಲಾಯಿತು.
ಸೆಕ್ಟರ್ ಅಧ್ಯಕ್ಷರಾದ ಇಬ್ರಾಹಿಂ ಸಅದಿ, ಸೆಕ್ಟರ್ ನಾಯಕರಾದ , ಇಸ್ಮಾಯಿಲ್ ಸಖಾಫಿ ತುರ್ಕಳಿಕೆ, ನಾಸಿರ್ ಮೂರುಗೋಳಿ, ಆಶಿಕ್ ಉಜಿರೆ ಬೆಟ್ಟು, ಅಶ್ರಫ್ ಉಜಿರೆ ಬೆಟ್ಟು, ನಾಸಿರ್ ಅಳಕ್ಕೆ,
ಹಾಗೂ ಪುತ್ತಿಲ ಗ್ರಾಮ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಸಿಎಚ್ ಅಬ್ದುಲ್ಲ ಸಖಾಫಿ, ದಫ್ ಸಮಿತಿ ಅಧ್ಯಕ್ಷರಾದ ಯೂಸುಫ್ ಕೆ.ವಿ, ಕೆ.ಸಿ.ಎಫ್ ನಾಯಕರಾರ ಯೂಸುಫ್ ಹಾಜಿ, ಎಸ್.ವೈ.ಎಸ್ ನಾಯಕರಾದ ಉಸ್ಮಾನ್ ಹಾಜಿ, ಇಲ್ಯಾಸ್ ಸಖಾಫಿ , ಜಮಾಅತ್ ಕಮಿಟಿ ನಾಯಕರಾದ, ಅಶ್ರಫ್ ಪಿ.ಎಚ್, ಉಮರ್ ಅನಿಯ ಉಪಸ್ಥಿತರಿದ್ದರು.
ಪಿ.ಎಚ್ ಝಖರಿಯಾ ಲತೀಫಿ ಸ್ವಾಗತಿಸಿ, ನಜೀಬ್ ಡಿ.ಕೆ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ